ಸುದ್ದಿ

ಕಳ್ಳತನಕ್ಕೆ ಬಂದು ಕಿಂಡಿಯಲ್ಲಿ ಸಿಕ್ಕಿಹಾಕಿಕೊಂಡ ಕಳ್ಳ: ಮೂರು ದಿನ ಪರದಾಟ

Share It

ಬೆಂಗಳೂರು: ಕಳ್ಳತನಕ್ಕೆಂದು ಬಂದವನು ಕಿಂಡಿಯಲ್ಲಿ ಸಿಕ್ಕಿಹಾಕಿಕೊಂಡು ದಿನವಿಡೀ ಅಲ್ಲಿಯೇ ಕಳೆದ ವಿಚಿತ್ರ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ರಾಜಸ್ಥಾನದ ಕೋಟಾದಲ್ಲಿ ಸುಭಾಷ್ ಎಂಬುವವರು ಜ.3 ರಂದು ದೇವಸ್ಥಾನಕ್ಕೆಂದು ಕುಟುಂಬ ಸಮೇತ ತೆರಳಿದ್ದರು. ಮನೆಗೆ ಬೀಗ ಹಾಕಿಕೊಂಡು ತೆರಳಿದ್ದನ್ನು ಕಂಡು ಮನೆಗೆ ನುಗ್ಗಿದ ಕಳ್ಳ, ಎಕ್ಸಿಟ್ ಫ್ಯಾನ್ ಕಿಂಡಿಯ ಮೂಲಕ ಮನೆಗೆ ನುಗ್ಗಲು ಪ್ರಯತ್ನ ನಡೆಸಿದ್ದ. ಆದರೆ, ಅಲ್ಲಿಂದ ಕೆಳಗೆ ಇಳಿಯಲು ಸಾಧ್ಯವಾಗದೆ ದಿನವಿಡೀ ಅಲ್ಲೇ ಇದ್ದ ಎನ್ನಲಾಗಿದೆ.

ಮರುದಿನ ಜ.೩ರಂದು ಹೊರಗೆ ಹೋಗಿದ್ದ ಕುಟುಂಬ ವಾಪಸ್ ಬಂದು ನೋಡಿದಾಗ ಕಳ್ಳ ಕಿಂಡಿಯಲ್ಲಿ ಸಿಲುಕಿ ಪರದಾಟ ನಡೆಸುತ್ತಿದ್ದ ಎನ್ನಲಾಗಿದೆ. ಅರ್ಧ ದೇಹ ಮನೆಯಿಂದ ಒಳಗೆ ಇದ್ದರೆ, ಅರ್ಧ ದೇಹ ಮನೆಯಿಂದ ಹೊಗಭಾಗದಲ್ಲಿತ್ತು.

ಇದನ್ನು ಕಂಡ ಸುಭಾಷ್, ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆಗಮಿಸಿ ಕಳ್ಳನನ್ನು ಅಲ್ಲಿಂದ ರಕ್ಷಣೆ ಮಾಡಿ ನಂತರ ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ಮನೆಯಲ್ಲಿ ಯಾವುದೇ ಕಳ್ಳತನವಾಗಿಲ್ಲ. ಕಳ್ಳತನಕ್ಕೆ ಬರುವಾಗಲೇ ಘಟನೆ ನಡೆದಿದೆ ಎನ್ನಲಾಗಿದೆ.


Share It

You cannot copy content of this page