ಅಪರಾಧ ಸುದ್ದಿ

ವಶಕ್ಕೆ ಪಡೆದಿದ್ದ ಕಾರು ಬಿಡಲು 40ಸಾವಿರ ರು.ಲಂಚ : ಲೋಕಾಯುಕ್ತ ಬಲೆಗೆ ಬಿದ್ದ ಸಬ್ ಇನ್ಸ್ಪೆಕ್ಟರ್

Share It

ತುಮಕೂರು: ವಶಕ್ಕೆ ಪಡೆದಿದ್ದ ಕಾರನ್ನು ಪೊಲೀಸರಿಂದ ಬಿಡಿಸಿಕೊಳ್ಳಲು ಕಾರು ಮಾಲೀಕನಿಗೆ 40 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಪೊಲೀಸ್ ಸಬ್ ಇನ್ಸ್ಪೆಕ್ಟರ್‌ನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತುಮಕೂರು ಜಿಲ್ಲಾ ಕನಾಟಕ ಲೋಕಾಯುಕ್ತ ಪೊಲೀಸ್ ಎಸ್ಪಿ ಲಕ್ಷ್ಮಿನಾರಾಯಣ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಕಾರನ್ನು ಮಾಲೀಕರಿಗೆ ಹಿಂದಿರುಗಿಸಲು ಐದು ಲಕ್ಷ ಲಂಚಕ್ಕೆ ಒತ್ತಾಯ ಮಾಡಿ, 40,000 ರೂ. ಲಂಚದ ಹಣ ಸ್ವೀಕರಿಸಿ ಆರೋಪದ ಮೇಲೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಚೇತನ್ ಕುಮಾರ್ ಅವgನ್ನು ಬಂದಿಸಲಾಗಿದೆ.

ಬೆಂಗಳೂರಿನ ನಾಗದೇವನಹಳ್ಳಿಯ ನಾಗೇಶ್.ಎಸ್.ಕೆ ಅವರು ಶಿಕ್ಷಕರಾಗಿದ್ದು, ಸ್ವಂತ ಫ್ರಾಕ್ಸೆಲ್ ಅಕಾಡೆಮಿ ನಡೆಸುತ್ತಿದ್ದಾರೆ. ವಾರಂತ್ಯವಾದ್ದರಿAದ 2026ರ ಜ.17 ರಂದು ಸ್ನೇಹಿತರೊಂದಿಗೆ ತಮ್ಮ ಕಿಯಾ ಸೋನೆಟ್ ಕಾರಿನಲ್ಲಿ ತುಮಕೂರು ನಗರದ ಕೆಸರುಮಡುಗೆ ಬಂದಿದ್ದರು. ಅದೇ ದಿನ ಸಂಜೆ 6.30ಕ್ಕೆ ವಾಪಸ್ ತೆರಳುವಾಗ ಕೆಸರುಮಡು ದರ್ಗ ಸರ್ಕಲ್‌ನಲ್ಲಿ ಟೀ ಕುಡಿಯಲು ಕಾರು ನಿಲ್ಲಿಸಿದ್ದರು.

ಕಾರನ್ನು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಚೇತನ್ ಕುಮಾರ್ ಟೋ ಮಾಡಿ ತೆಗೆದುಕೊಂಡು ಹೋಗಿ, ಠಾಣೆ ಆವರಣದಲ್ಲಿ ನಿಲ್ಲಿಸಿಕೊಂಡಿದ್ದರು. ಮಾಲೀಕ ನಾಗೇಶ್ ಪಿಎಸ್‌ಐ ಚೇತನ್‌ಕುಮಾರ್ ಭೇಟಿ ಮಾಡಿ, ಕಾರನ್ನು ಬಿಡುಗಡೆ ಮಾಡುವಂತೆ ಕೇಳಿಕೊಂಡಾಗ, ನೀವು ಗಾಂಜಾ ಹೊಡೆದಿದ್ದೀರೆಂದು ಕೇಸ್ ಬುಕ್ ಮಾಡುತ್ತೇನೆ, ಕಾರನ್ನು ಕೋರ್ಟಿನಲ್ಲಿ ಬಿಡಿಸಿಕೊಳ್ಳಿ. ಇಲ್ಲವಾದಲ್ಲಿ 5 ಲಕ್ಷ ರೂ. ಹಣ ಕೊಟ್ಟು ಕಾರ್ ತೆಗೆದುಕೊಂಡು ಹೋಗಿ ಎಂದು ಲಂಚಕ್ಕೆ ಒತ್ತಾಯ ಮಾಡಿದ್ದರು ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಅಂದಿನಿAದ ಜನವರಿ 29ರವರೆಗೆ ನಾಗೇಶ್ ಅವರು ಅಷ್ಟೊಂದು ಹಣ ನೀಡಲು ಸಾಧ್ಯವಿಲ್ಲ, ಕಡಿಮೆ ಮಾಡಿಕೊಳ್ಳಿ ಎಂದು ಹಲವು ಬಾರಿ ಮನವಿ ಮಾಡಿಕೊಂಡಿದ್ದರು. ಕೊನೆಗೆ ಸಬ್ ಇನ್ಸ್ಪೆಕ್ಟರ್ ಚೇತನ್ ಕುಮಾರ್ ಅವರು 40,000 ರೂ ನೀಡಿ ಕಾರು ತೆಗೆದುಕೊಂಡು ಹೋಗಲು ತಿಳಿಸಿದ್ದರು.

ನಾಗೇಶ್ ಅವರಿಗೆ ಲಂಚ ನೀಡಲು ಇಷ್ಟವಿಲ್ಲದೇ ಜ.30 ರಂದು ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದರು. ಪೊಲೀಸ್ ಅಧೀಕ್ಷಕರಾದ ಲಕ್ಷ್ಮೀನಾರಾಯಣ ಅವರು ಕಲಂ-7(3) ಭ್ರಷ್ಟಾಚಾರ ಪ್ರತಿಬಂಧ ಕಾಯ್ದೆ-1988 (ತಿದ್ದುಪಡಿ-2018) ರಂತೆ ಪ್ರಕರಣ ದಾಖಲಿಸಿ, ಮುಂದಿನ ತನಿಖೆ ಕೈಗೊಳ್ಳಲು ಪೊಲೀಸ್ ಉಪಾಧೀಕ್ಷಕ ಮಂಜುನಾಥ. ಎಂ. ಅವರಿಗೆ ಆದೇಶಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.


Share It

You cannot copy content of this page