ಉಪಯುಕ್ತ ಸುದ್ದಿ

ಬೆಂಗಳೂರಿನಲ್ಲಿ ನಿರ್ವಹಣಾ ಕಾಮಗಾರಿ: ಎರಡು ದಿನ ಹಲವೆಡೆ ವಿದ್ಯುತ್ ವ್ಯತ್ಯಯ, ನಿಮ್ಮ ಪ್ರದೇಶ ಇದರಲ್ಲಿ ಇದೆಯೇ?

Share It

ಬೆಂಗಳೂರು: ನಗರದಲ್ಲಿ ಮುಂದಿನ ಎರಡು ದಿನಗಳ ಕಾಲ ಹಲವು ಪ್ರದೇಶಗಳಲ್ಲಿ ನಿಗದಿತ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (KPTCL) ಕೈಗೆತ್ತಿಕೊಂಡಿರುವ ತುರ್ತು ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ, ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ನಗರದ ವಿವಿಧ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ಈ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಫೆಬ್ರವರಿ 6 (ಶುಕ್ರವಾರ) – ವಿದ್ಯುತ್ ಇರುವುದಿಲ್ಲದ ಪ್ರದೇಶಗಳು

ಜಾಲಹಳ್ಳಿ ವಿಭಾಗ – ವಿಡಿಯಾ ಉಪಕೇಂದ್ರ ವ್ಯಾಪ್ತಿ

66/11 ಕೆ.ವಿ ವಿಡಿಯಾ ಉಪಕೇಂದ್ರದ ವ್ಯಾಪ್ತಿಯಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ವಿನಾಯಕ ನಗರ, ವಿಕಾಸ್ ನಗರ, ಶೋಭಾ ಅಪಾರ್ಟ್‌ಮೆಂಟ್, 8ನೇ ಮೈಲ್ ರಸ್ತೆ, ರಾಮಯ್ಯ ಲೇಔಟ್, ಹಾವನೂರು ಎಕ್ಸ್ಟೆನ್ಷನ್, ನಾರಾಯಣ ಲೇಔಟ್, ಕುವೆಂಪು ನಗರ, ಮುನಿಕೊಂಡಪ್ಪ ಲೇಔಟ್, ಅಶೋಕ್ ನಗರ, ಡಿಫೆನ್ಸ್ ಕಾಲೋನಿ, ಮಂಜುನಾಥ್ ನಗರ, ಮಹಾಲಕ್ಷ್ಮಿ ನಗರ, ಕಾಟರಾಯ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಲಭ್ಯವಿರುವುದಿಲ್ಲ.

ಇದಕ್ಕೆ ಜೊತೆಗೆ ಸೋಪ್ ಫ್ಯಾಕ್ಟರಿ ಲೇಔಟ್, ವಿಜಯಲಕ್ಷ್ಮಿ ಲೇಔಟ್, ಅಂದಾನಪ್ಪ ಲೇಔಟ್, ಬಿಟಿಎಸ್ ಲೇಔಟ್, ಸಿದ್ದೇಶ್ವರ ಲೇಔಟ್, ಸಾಸುವೆಘಟ್ಟ, ಸೋಲದೇವನಹಳ್ಳಿ ಭಾಗಶಃ, ತರಬನಹಳ್ಳಿ ಮುಖ್ಯ ರಸ್ತೆ, ಹೆಸರಘಟ್ಟ ಮುಖ್ಯ ರಸ್ತೆ, ಸಿಡೇದಹಳ್ಳಿ, ವಿಶ್ವೇಶ್ವರಯ್ಯ ಲೇಔಟ್‌ನ ಕೆಲವು ಭಾಗಗಳು, ರಾಯಲ್ ಎನ್‌ಕ್ಲೇವ್ ಹಾಗೂ ಬೈರವೇಶ್ವರ ವೃತ್ತದ ಸುತ್ತಮುತ್ತಲೂ ಕರೆಂಟ್ ವ್ಯತ್ಯಯ ಉಂಟಾಗಲಿದೆ.
ರಾಜಾನುಕುಂಟೆ ಉಪಕೇಂದ್ರ ವ್ಯಾಪ್ತಿ

66/11 ಕೆ.ವಿ ರಾಜಾನುಕುಂಟೆ ಉಪಕೇಂದ್ರ ವ್ಯಾಪ್ತಿಯಲ್ಲಿ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.
ಹೊನ್ನೇನಹಳ್ಳಿ, ಸಿಂಗನಾಯಕನಹಳ್ಳಿ, ರಾಜಾನುಕುಂಟೆ, ಅಡ್ಡೇವಿಶ್ವನಾಥಪುರ, ಮಾರಸಂದ್ರ, ಶ್ರೀರಾಮನಹಳ್ಳಿ, ನೆಲಕುಂಟೆ, ಹನಿಯೂರು, ಚೆಲ್ಲಹಳ್ಳಿ, ಕೆಎಂಎಫ್ ಪ್ರದೇಶ, ಇಟಗಲ್‌ಪುರ, ಬೈರಾಪುರ, ಬೂದಮನಹಳ್ಳಿ, ದಿಬ್ಬೂರು, ಕಾಕೋಲು, ಸೊನ್ನೇನಹಳ್ಳಿ, ಸೆಂಚುರಿ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಈ ವ್ಯತ್ಯಯಕ್ಕೆ ಒಳಪಡಲಿವೆ.

ಫೆಬ್ರವರಿ 7 (ಶನಿವಾರ) – ನಗರದಲ್ಲಿನ ವಿದ್ಯುತ್ ವ್ಯತ್ಯಯದ ವಿವರ

ವಿಜಯನಗರ ಉಪಕೇಂದ್ರ – ರಾಜಾಜಿನಗರ ವಿಭಾಗ

66/11 ಕೆ.ವಿ ವಿಜಯನಗರ ಉಪಕೇಂದ್ರ ವ್ಯಾಪ್ತಿಯಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಕಡಿತಗೊಳ್ಳಲಿದೆ.
ಬಸವೇಶ್ವರ ನಗರ, ವಿಜಯನಗರ, ಗೋವಿಂದರಾಜ ನಗರ, ಕಾಮಕ್ಷಿಪಾಳಯ, ಆರ್‌ಪಿಸಿ ಲೇಔಟ್, ಬಿನ್ನಿ ಲೇಔಟ್, ಪ್ರಶಾಂತ್ ನಗರ, ಹೊಸಹಳ್ಳಿ, ವಿಜಯನಗರದ 7ನೇ ಮುಖ್ಯ ರಸ್ತೆಯಿಂದ 13ನೇ ಮುಖ್ಯ ರಸ್ತೆವರೆಗೆ, ತಿಮ್ಮೇನಹಳ್ಳಿ ಮೊದಲ ಹಂತ, ಎಂಸಿ ಲೇಔಟ್‌ನ ಭಾಗ, ವಿನಾಯಕ ಲೇಔಟ್‌ನ ಕೆಲವು ಪ್ರದೇಶಗಳು ಹಾಗೂ ಪಿಸಿ ಕೈಗಾರಿಕಾ ಪ್ರದೇಶದಲ್ಲಿ ಕರೆಂಟ್ ಇರುವುದಿಲ್ಲ.

ಇದಲ್ಲದೆ ಕೆಸಿಜಿ ಕೈಗಾರಿಕಾ ಪ್ರದೇಶ, ನಂಜಪ್ಪ ಕೈಗಾರಿಕಾ ಎಸ್ಟೇಟ್, ಸುನ್ನದಗೋಡು, ಸೆಲ್ವಂ ಕೈಗಾರಿಕಾ ಪ್ರದೇಶ, ಬಲ್ಲಾಳನ ಕೆರೆ, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ಕಾವೇರಿಪುರದ ಹಲವು ಬ್ಲಾಕ್‌ಗಳು, ನಾಗರಭಾವಿ 11ನೇ ಬ್ಲಾಕ್, ಕೆಎಚ್‌ಬಿ ಕಾಲೋನಿ, ಎಚ್‌ವಿಆರ್ ಲೇಔಟ್, ಸಿದ್ದಯ್ಯ ಪುರಾಣಿಕ ರಸ್ತೆ, ಪಾಪಯ್ಯ ಗಾರ್ಡನ್ ಹಾಗೂ ಮಾಗಡಿ ಮುಖ್ಯ ರಸ್ತೆಯ ಕೆಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಬೆಸ್ಕಾಂ ನೀಡಿರುವ ಮಾಹಿತಿಯಂತೆ, ಈ ವ್ಯತ್ಯಯಗಳು ನಿರ್ವಹಣಾ ಕಾಮಗಾರಿ ಪೂರ್ಣಗೊಂಡ ಬಳಿಕ ಸರಿಪಡಿಸಲಾಗುತ್ತವೆ. ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಿಕೊಂಡು ಸಹಕರಿಸುವಂತೆ ಮನವಿ ಮಾಡಲಾಗಿದೆ.


Share It

You cannot copy content of this page