ಅಪರಾಧ ಸುದ್ದಿ

ಜಾತ್ರೆಯ ಜಾಯ್ ರೈಡ್ ಸ್ವಿಂಗ್ ಅಪಘಾತ: ಪೊಲೀಸ್ ಇನ್ಸ್‌ಪೆಕ್ಟರ್ ಸಾವು, 13 ಜನರಿಗೆ ಗಂಭೀರ ಗಾಯ

Share It

ನವದೆಹಲಿ: ಜಾತ್ರೆಯ ಖುಷಿಯಲ್ಲಿ ಜಾಯ್ ರೈಡ್ ಮಾಡುತ್ತಿದ್ದವರು ಇದ್ದಕ್ಕಿದ್ದಂತೆ ಮುರಿದು ಬಿದ್ದ ಯಂತ್ರದೊಳಗೆ ಸಿಲುಕಿ ನರಳುತ್ತಿದ್ದರು. ಅವರನ್ನು ಕಾಪಾಡಲು ಹೋದ ಪೊಲೀಸ್ ಅಧಿಕಾರಿಯೊಬ್ಬರು ತಲೆಗೆ ರೆಕ್ಕೆ ಬಡಿದು ಸಾವನ್ನಪ್ಪಿದ ಘಟನೆ ನಡೆದಿದೆ.

ಹರಿಯಾಣದ ಸೂರಜ್ ಗಂಝ್ ಜಾತ್ರಾ ಮಹೋತ್ಸವದಲ್ಲಿ ಈ ದುರ್ಘಟನೆ ನಡೆಸಿದ್ದು, ಪೊಲೀಸ್ ಇನ್ಸ್ ಪೆಕ್ಟರ್ ಸಾವನ್ನಪ್ಪಿದ್ದರೆ, 13ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಂಜೆ ಸುಮಾರು 6.15 ಕ್ಕೆ ಇದ್ದಕ್ಕಿದ್ದಂತೆ ಜಾತ್ರೆಯ ಜಾಯ್ ಪಾರ್ಕ್ ನಲ್ಲಿನ ಫೈರ್ ಗ್ರೌಂಡ್ ರೈಡ್ ನ ಸ್ವಿಂಗ್ ಹಳಿತಪ್ಪಿದ್ದು, ಜನರ ಮೇಲೆ ಅಡ್ಡಾದಿಡ್ಡಿ ನುಗ್ಗಿತ್ತು. ಸ್ಥಳದಲ್ಲಿಯೇ ಇದ್ದ ಪೊಲೀಸ್ ಅಧಿಕಾರಿ ಅದರ ನಡುವೆ ಸಿಲುಕಿದವರನ್ನು ಕಾಪಾಡುವ ಪ್ರಯತ್ನ ನಡೆಸಿದರು. ಈ ಪ್ರಯತ್ನದಲ್ಲಿ ಅವರ ತಲೆಗೆ ಬಲವಾದ ಪೆಟ್ಟು ಬಿದ್ದು, ಆಸ್ಪತ್ರೆಗೆ ಸಾಗಿಸುವಾಗ ಅವರು ಅಸುನೀಗಿದರು ಎಂದು ವರದಿಗಳು ತಿಳಿಸಿವೆ.

ಘಟನೆಯಲ್ಲಿ 13 ಹೆಚ್ಚು  ಜನರು ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಜಾಯ್ ರೈಡ್ ಮಾಲೀಕರ ಮೇಲೆ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


Share It

You cannot copy content of this page