ಬೆಂಗಳೂರು: ವಿದೇಶ ಪ್ರವಾಸದ ನೆಪದಲ್ಲಿ ಹದಿಹದೆಯದ ಮಕ್ಕಳನ್ನು ಡ್ರಗ್ಸ್ ಜಾಲಕ್ಕೆ ತಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಗೆ ದೂರು ನೀಡಲಾಗಿದೆ.
ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ನೀಡಿರುವ ದೂರಿನಲ್ಲಿ ನಟಿ ರಾಗಿಣಿ ಬಿಡುಗಡೆ ಮಾಡಿರುವ ವಿಡಿಯೋ ಉಲ್ಲೇಖ ಮಾಡಲಾಗಿದೆ. ರಾಗಿಣಿ ಅವರು ನೈರೋಬಿಗೆ ಬರುವಂತೆ ಆಹ್ವಾನಿಸಿ, ವಿಡಿಯೋ ಮಾಡಿದ್ದು ಆ ಮೂಲಕ ಯುವಜನರನ್ನು ಸೆಳೆದು ಅವರನ್ನು ಡ್ರಗ್ಸ್ ಬಲೆಗೆ ಬೀಳಿಸಲಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ.
ಡ್ರಗ್ಸ್ ಮಾರಾಟ ಪ್ರಕರಣದ ಆರೋಪಿ ಮಸ್ತಾನ್ ಚಂದ್ರ ಎಂಬುವವರು ಕಿರುತೆರೆ ಮತ್ತು ಹಿರಿತೆರೆಯ ನಟ ನಟಿಯರನ್ನು ಬಳಸಿಕೊಂಡು ಡ್ರಗ್ಸ್ ಮಾರಾಟಕ್ಕೆ ಮುಕ್ತ ಅವಕಾಶ ಕಲ್ಪಿಸಿಕೊಳ್ಳುತ್ತಿದ್ದಾರೆ. ಇದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ, ಇದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

