ರಾಜಕೀಯ ಸುದ್ದಿ

ಪೊಲೀಸರ ಮೇಲೆ ಹಲ್ಲೆ ನಡೆಸಿದವರಿಗೆ ತಕ್ಕ ಶಿಕ್ಷೆ ಆಗಲಿದೆ: ನಾಗಲಕ್ಷ್ಮೀ ಚೌಧರಿ

Share It

ದಾವಣಗೆರೆ: ನಗರದ ಚಿಗಟೇರಿ ಜಿಲ್ಲಾಸ್ಪತ್ರೆ ಬಳಿ ನಡೆದಿದ್ದ ಪೊಲೀಸರ ಮೇಲಿನ ಹಲ್ಲೆ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ತನಿಖೆ ನಡೆಯುತ್ತಿದೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾವ ಪಕ್ಷದವರೂ ದೊಡ್ಡವರಲ್ಲ. ಹಲ್ಲೆಕೋರರಿಗೆ ತಕ್ಕ ಶಿಕ್ಷೆ ಆಗೇ ಆಗುತ್ತದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಸಮಜಾಯಿಷಿ ನೀಡಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದ ಅವರು, ಪೊಲೀಸರ ಮೇಲೆ ನಡೆದಿದ್ದ ಹಲ್ಲೆ ಪ್ರಕರಣದ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರು ಎಂಬ ಪ್ರಶ್ನೆ ಬರೋದಿಲ್ಲ. ಚಿಕ್ಕವರು, ದೊಡ್ಡವರು ಎಂಬ ಪ್ರಶ್ನೆ ಇಲ್ಲ. ಕಾನೂನು ಎಲ್ಲರಿಗೂ ಒಂದೇ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕೊಟ್ಟಿದ್ದಾರೆ. ತನಿಖೆ ನಡೆಯುತ್ತಿದೆ, ಎಲ್ಲರೂ ತಪ್ಪು ಮಾಡ್ತಾರೆ. ಕಾನೂನಿನ ಮುಂದೆ ಯಾರು ದೊಡ್ಡವರಲ್ಲ. ಪೊಲೀಸರ ಮೇಲೆಯೇ ಹಲ್ಲೆ ಮಾಡಿದ ಎಲ್ಲರನ್ನೂ ಅರೆಸ್ಟ್ ಮಾಡಲಾಗಿದೆ ಎಂದರು.

ಹಲ್ಲೆಕೋರರ ಬಗ್ಗೆ ತನಿಖೆಯಾಗಿ ಅವರಿಗೆ ಶಿಕ್ಷೆಯೂ ಆಗುತ್ತದೆ ಎಂದರು. ಆಯೋಗದಿಂದ ವರದಿ ಕೇಳಿದ್ದು ತಡವಾಯಿತು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಓಡಾಡುತ್ತಿರೋದು ಜನರಿಗೋಸ್ಕರ. ಸಿದ್ದರಾಮಯ್ಯರಂತಹ ಸಿಎಂ ಪಡೆದಿರೋ ನಾವೇ ಧನ್ಯ. ಎರಡು ವರ್ಷ ಸಿಎಂ ನನಗೆ ಒಂದು ಪ್ರಶ್ನೆಯನ್ನೂ ಮಾಡಿಲ್ಲ. ಸಿಎಂ ನಮಗೆ ಫ್ರೀ ಹ್ಯಾಂಡ್ ನೀಡಿದ್ದಾರೆ. ನಾನು ತಪ್ಪು ಯಾರೇ ಮಾಡಿದ್ರೂ ಅವರನ್ನ ಸುಮ್ಮನೆ ಬಿಡಬಾರದು ಎಂದು ಹೇಳಿದ್ದಾರೆ. ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ನಾನು ಪ್ರತಿಯೊಂದನ್ನು ಅಟೆಂಡ್ ಮಾಡಿ ಕೆಲಸ ಮಾಡಿದ್ದೇನೆ ಎಂದರು.


Share It

You cannot copy content of this page