ಬಾಗಲಕೋಟೆ: ಶಿವಾಜಿ ಪ್ರತಿಮೆಯ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ ಸಂಬAಧ ಉಂಟಾದ ಗಲಭೆಗೆ ಕಾರಣವಾದ ಎಂಟು ಜನರನ್ನು ಪೊಲೀಸರು ಬಂಧಿಸಿದ್ದು ಕೋಮುಗಲಭೆ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.
ರಾತ್ರಿ ಶಿವಾಜಿ ಪ್ರತಿಮೆ ಮೆರವಣಿಗೆ ಮಾಡುತ್ತಿದ್ದ ವೇಳೆ ಮಸೀದಿಯ ಕಡೆಯಿಂದ ಕಲ್ಲೊಂದು ಬಂದಿತ್ತು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟು, ಗಲಾಟೆಯಾಗಿತ್ತು. ಆಗ ನಡೆದ ಎರಡು ಗುಂಪುಗಳ ನಡುವಿನ ಸಂಘರ್ಷ ಜಿಲ್ಲೆಯಲ್ಲಿ ಆತಂಕ ಮೂಡಿಸಿದ್ದು, ಘಟನೆಗೆ ಸಂಬAಧಿಸಿದAತೆ ಪೊಲೀಸರು ಎಂಟು ಜನರನ್ನು ಬಂಧಿಸಿದ್ದಾರೆ.
ಮಸೀದಿಯಿAದ ಕಲ್ಲು ತೂರಾಟ ನಡೆಸಿದ ತಂಜೀರ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು, ಆತ ಇದನ್ನು ಯೋಚಿತವಾಗಿ ಮಾಡಿಲ್ಲ, ಇದಕ್ಕೆ ಯಾರದೂ ಕುಮ್ಮಕ್ಕೇನಿಲ್ಲ ಎಂದಿದ್ದಾನೆ. ಹೀಗಾಗಿ, ಇದು ಪೂರ್ವನಿಯೋಜಿತ ಕೃತ್ಯವೇನಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್.ಪಿ. ಸಿದ್ಧಾರ್ಥ್ ಗೋಯೆಲ್ ಈ ಕುರಿತು ಮಾತನಾಡಿ, ಶಿವಾಜಿ ಪ್ರತಿಮೆ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಎರಡು ಗುಂಪುಗಳ ನಡುವಿನ ಘರ್ಷಣೆಗೆ ಕಾರಣವಾಗಿದೆ. ಕೆಲವು ಅಂಗಡಿಗಳಿಗೆ ಬೆಂಕಿಹಚ್ಚಿದ್ದಾರೆ. ಪ್ರಕರಣ ಸಂಬAಧ ಎಂಟು ಜನರ ಬಂಧನವಾಗಿದ್ದು, ಇದಕ್ಕೆ ಎರಡು ಗುಂಪಿನ ಹಿರಿಯರು ಸಹಕಾರ ನೀಡಿದ್ದಾರೆ ಎಂದರು.
ಎರಡು ಗುಂಪಿನ ನಾಯಕರ ನಡುವೆ ಮಾತುಕತೆ ನಡೆಸಲಾಗಿದೆ. ಆರೋಪಿಗಳನ್ನು ಬಂಧಿಸಿ, ಸೌಹಾರ್ಧಯುತವಾಗಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಎರಡು ಗುಂಪಿನ ನಾಯಕರು ಆಸಕ್ತಿ ತೋರಿದ್ದಾರೆ. ಆದರೆ, ಕಿಡಿಗೇಡಿಗಳ ಕೃತ್ಯವನ್ನು ತಡೆಯಲು ಪೊಲೀಸ್ ಇಲಾಖೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ.

