ಬೆಂಗಳೂರು: ಉತ್ತಮವಾಗಿಯೇ ಆಡುತ್ತಿದದ ಮೊಹಮದ್ ಶಮಿಯನ್ನು ಏಕದಿನ ಕ್ರಿಕೆಟ್ ನಿಂದ ಕೈಬಿಟ್ಟಾಗ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಅದಕ್ಕೆ ಅಜಿತ್ ಅಗರ್ಕರ್ ಶಮಿ ಫಿಟ್ನೆಸ್ ಬಗ್ಗೆ ತಕರಾರು ತೆಗೆದು ಸವಾಲು ಹಾಕಿದ್ದರು. ಇದೀಗ ಶಮಿ ಅದೆಲ್ಲವನ್ನೂ ಗೆದ್ದು ಭಾರತ ತಂಡದ ಬಾಗಿಲು ಬಡಿಯುತ್ತಿದ್ದಾನೆ.
ಕಳೆದ ದೇಶಿಯ ಋತುವಿನಲ್ಲಿ ರಣಜಿಯಲ್ಲಿ 36 ವಿಕೆಟ್, ಮುಷ್ತಾಕ್ ಆಲಿ ಟ–20 16 ವಿಕೆಟ್, ವಿಜಯ್ ಹಜಾರೆ ಟ್ರೋಫಿಯಲ್ಲಿ 15 ವಿಕೆಟ್ ಪಡೆದಿದ್ದ ಶಮಿ, 2025-26ರ ದೇಸಿಯ ಕ್ರಿಕೆಟ್ನಲ್ಲಿ ಒಟ್ಟು 67 ವಿಕೆಟ್ ಪಡೆದಿದ್ದಾರೆ. ಅದರಲ್ಲೂ ಮೊನ್ನೆಯಷ್ಟೇ ನಡೆದ ಜಮ್ಮ ಮತ್ತು ಕಾಶ್ಮೀರದ ನಡುವಿನ ರಣಜಿ ಟ್ರೋಪಿಯ ಸೆಮಿಫೈನಲ್ ಪಂದ್ಯದಲ್ಲಿ 22 ಓವರ್ ಬೌಲಿಂಗ್ ಮಾಡಿ, 90 ರನ್ ನೀಡಿ 8 ವಿಕೆಟ್ ಪಡೆದುಕೊಂಡಿದ್ದಾರೆ.
ಈ ಎಲ್ಲ ಪ್ರದರ್ಶನವೂ ಆತ ಭಾರತ ತಂಡಕ್ಕೆ ಆಯ್ಕೆಯಾಗಲು ಇರುವ ಮಾನದಂಡ ಎಂದು ಹೇಳಲಾಗುತ್ತಿದ್ದು, ಅವರನ್ನು ದ್ವೇಷದಿಂದಲೇ ತಂಡದಿಂದ ಹೊರಗಿಟ್ಟ ಬಿಸಿಸಿಐ, ಆಯ್ಕೆ ಸಮಿತಿ ಮತ್ತು ಕೋಚ್ ಗೌತಮ್ ಗಂಭೀರ್ ಅವರಿಗೆ ಇದೆಲ್ಲವೂ ಪರಿಗಣನೆಗೆ ಬರುತ್ತಾ ಎಂಬ ಪ್ರಶ್ನೆ ಇದೀಗ ಮೂಡಿದೆ. ಅವರನ್ನು ಮತ್ತೇ ಭಾರತ ತಂಡಕ್ಕೆ ಆಡಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಒತ್ತಡ ಆರಂಭವಾಗಿದೆ.
ವೈಯಕ್ತಿಕ ನೋವಿನ ನಡುವೆ ದೇಶಕ್ಕೆ ಅತ್ಯುತ್ತಮ ಪ್ರದರ್ಶನ ನೀಡುತ್ತಲೇ ಬಂದಿದ್ದ ಮೊಹಮದ್ ಶಮಿಯನ್ನು ಧರ್ಮದ ಕಾರಣಕ್ಕೆ ತಂಡದಿಂದ ಹೊರಗಿಡಲಾಯ್ತು ಎಂಬ ಆರೋಪ ಕೇಳಿಬಂದಿತ್ತು. ಅನಂತರ ಅವರ ಆಯ್ಕೆ ಬಗ್ಗೆ ಮಾತನಾಡಿದ್ದ ಅಜಿತ್ ಅಗರ್ಕರ್ ಫಿಟ್ನೆಸ್ ಟೆಸ್ಟ್ ಬಗ್ಗೆ ಮಾತನ್ನಾಡಿದ್ದರು. ಇದೀಗ ಶಮಿ ವಿಕೆಟ್ ಗಳ ಮೇಲೆ ವಿಕೆಟ್ ಉರುಳಿಸುವ ಮೂಲಕ ತಮ್ಮ ಫಿಟ್ನೆಸ್ ಟೆಸ್ಟ್ ಪಾಸಾಗಿದ್ದೇನೆ ಎಂಬ ಸಂದೇಶ ನೀಡಿದ್ದಾರೆ. ಈಗಲಾದರೂ ಆಯ್ಕೆ ಸಮಿತಿ ಅವರನ್ನು ಭಾರತ ತಂಡಕ್ಕೆ ಪರಿಗಣಿಸುತ್ತಾ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

