ಅಪರಾಧ ಸುದ್ದಿ

ಡಿಜಿಟಲ್ ವ್ಯಸನದಿಂದ ವರ್ಷಕ್ಕೆ 20 ಸಾವಿರ ಮಕ್ಕಳ ಜೀವಕ್ಕೆ ಕುತ್ತು: ಟಿಎಂಸಿ ಸಂಸದರ ಕಳವಳ

Share It

ನವದೆಹಲಿ: ಹೆಚ್ಚುತ್ತಿರುವ ಡಿಜಿಟಲ್ ವ್ಯಸನದಿಂದ ಮಕ್ಕಳು ಮತ್ತು ಯುವಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ವಿಷಯ ರಾಜ್ಯಸಭೆಯಲ್ಲಿ ಕ್ಕೆ ಕಾರಣವಾಯಿತು. ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ ಬ್ರೇನ್ ಅವರು ಪ್ರಸ್ತಾಪಿಸಿದರು.

ಡಿಜಿಟಲ್ ಮಾಧ್ಯಮಗಳಿಗೆ ದಾಸರಾಗಿ ಪ್ರತಿವರ್ಷ ಸುಮಾರು 20,000 ಮಕ್ಕಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದ ರಾಜ್ಯಸಭಾ ಸದಸ್ಯರು, ಈ ಕುರಿತು ಕೇಂದ್ರ ಸರ್ಕಾರವು ತುರ್ತು ಕ್ರಮ ಕೈಗೊಂಡು ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಶುಕ್ರವಾರ ಸಂಸತ್ತಿನ ಮೇಲ್ಮನೆಯಲ್ಲಿ ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಟಿಎಂಸಿ ಸಂಸದರು, ಮಕ್ಕಳು ಮತ್ತು ಯುವಕರು ಪ್ರತಿ ದಿನ ಎಂಟು ಗಂಟೆಗಳ ಕಾಲ ಟಿವಿ ಲ್ಯಾಪ್​ ಟಾಪ್ ಮತ್ತು ಮೊಬೈಲ್ ಫೋನ್‌ಗಳಲ್ಲೇ ಮಗ್ನರಾಗಿರುತ್ತಿದ್ದಾರೆ ಎಂದು ಅಧ್ಯಯನಗಳು ಹೇಳತ್ತಿವೆ. ಈ ಮೂಲಕ ಪ್ರತಿ ವರ್ಷ 100 ದಿನಗಳಿಗೂ ಹೆಚ್ಚು ಸಮಯ ಡಿಜಿಟಲ್​ ಮಾಧ್ಯಮಗಳಲ್ಲೇ ಮಕ್ಕಳ ಕಾಲ ಕಳೆಯುತ್ತಿದ್ದಾರೆ. ಇದರ ಪರಿಣಾಮ ಅರಿತ 68 ದೇಶಗಳು ಈಗಾಗಲೇ ಶಾಲೆಗಳಲ್ಲಿ ಮೊಬೈಲ್ ಫೋನ್‌ಗಳನ್ನು ನಿಷೇಧಿಸಿವೆ ಎಂದು ಅವರು ತಿಳಿಸಿದರು.

“ಅತಿಯಾಗಿ ಮೊಬೈಲ್ ಸೇರಿ ಡಿಜಿಟಲ್ ಪರದೆ ನೋಡುವುದರಿಂದ ನಿದ್ರೆಗೆ ಅಡ್ಡಿಯಾಗುತ್ತದೆ ಜೊತೆಗೆ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಮನಸ್ಥಿತಿ ಬದಲಾವಣೆಗಳಿಗೆ ಕಾರಣವಾಗುತ್ತದೆ” ಎಂದು ಸಮಸ್ಯೆಯ ಹಿಂದಿನ ಜೈವಿಕ ಕಾರ್ಯವಿಧಾನವನ್ನು ಸಂಸದರು ವಿವರಿಸಿದರು. ಡಿಜಿಟಲ್ ವ್ಯಸನದಿಂದ ಮೆದುಳಿನಲ್ಲ ಡೋಪಮೈನ್ ಹಾರ್ಮೋನ್ ಹೆಚ್ಚಾಗಿ ಉತ್ಪತ್ತಿಯಾಗುತ್ತದೆ. ಇದರಿಂದ ಮೆದುಳು ತ್ವರಿತ ಪ್ರತಿಫಲ ಸಂಕೇತವನ್ನು ಪಡೆಯುವುದರಿಂದ, ನಡವಳಿಕೆಯಲ್ಲಿ ಬದಲಾವಣೆ ಆಗುತ್ತದೆ ಎಂದು ಸಂಸದರು ವಿವರಸಿದರು.


Share It

You cannot copy content of this page