ಸಿಡಿಲು ಬಡಿದು ಉತ್ತರ ಪ್ರದೇಶದ ಕೂಲಿ ಕಾರ್ಮಿಕ ಸಾವು
ಕಡಬ: ನದಿಯಲ್ಲಿ ಮರಳುಗಾರಿಕೆ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಕಾರ್ಮಿಕನೊಬ್ಬ ಸಿಡಿಲು ಬಡಿದು ಸಆವನ್ನಪ್ಪಿರುವ ಘಟನೆ ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ ನಡೆದಿದೆ.
ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ ಉತ್ತರ ಪ್ರದೇಶ ಚೈನ್‌ಪುರ್ ಗುಲೌರಾ ಮೂಲದ ಶ್ರೀಕಿಶುನ್ ಎಂಬ ವ್ಯಕ್ತಿ ನದಿ ಬದಿಯಲ್ಲಿ ಮರಳುಗಾರಿಕೆ ಮಾಡುತ್ತಿದ್ದಲ್ಲಿ ಕೆಲಸ ಮಾಡುತ್ತಿದ್ದ. ಆ ವೇಳೆ ಮಳೆ ಶುರುವಾಗಿ ಕಾರ್ಮಿಕರು ಇದ್ದ ಶೆಡ್‌ಗೆ ಸಿಡಿಲು ಬಡಿದ ವೇಳೆ ದುರಂತ ಸಂಭವಿಸಿದೆ. ಸಿಡಿಲು ಬಡಿದಿದ್ದರಿಂದ ಮತ್ತಿಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ.
ನವ ವಿವಾಹಿತ ಸಾವು: ಮಳೆ ಬಂದ ಕಾರಣ ಮನೆ ಮುಂದೆ ಒಣ ಹಾಕಿದ್ದ ಅಡಕೆ ತೆಗೆಯುವ ವೇಳೆ ಸಿಡಿಲು ಬಡಿದು ೧೦ ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ದಾರುಣ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ನಡೆದಿತ್ತು. ಸುಬ್ರಹ್ಮಣ್ಯ ಗ್ರಾಮದ ಪರ್ವತಮುಖಿ ನಿವಾಸಿ ಸೋಮಸುಂದರ್ (೩೪) ಮೃತರು.
ಸುಬ್ರಹ್ಮಣ್ಯ ಪರಿಸರದಲ್ಲಿ ಮಳೆ ಆರಂಭಕ್ಕೂ ಮೊದಲು ಗಾಳಿ, ಗುಡುಗು ಆರಂಭಗೊAಡಿತ್ತು. ಈ ವೇಳೆ, ಮನೆಯಂಗಳದಲ್ಲಿ ಒಣಗಿಸಲು ಹಾಕಲಾಗಿದ್ದ ಅಡಕೆಯನ್ನು ಸೋಮಸುಂದರ್ ಅವರು ತೆಗೆಯುವ ವೇಳೆ ಸಿಡಿಲು ಬಡಿದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು.
ಸೋಮ ಸುಂದರ್ ಅವರು ಸುಬ್ರಹ್ಮಣ್ಯ ಸಮೀಪ ಕಾರ್ ವಾಷಿಂಗ್ ಉದ್ಯಮ ನಡೆಸಿಕೊಂಡಿದ್ದು, ೧೦ ದಿನಗಳ ಹಿಂದೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮೃತರು ತಾಯಿ, ತಂಗಿ, ಪತ್ನಿಯನ್ನು ಅಗಲಿದ್ದಾರೆ.
ಸಿಡಿಲು ಬಡಿದು, ಮಹಿಳೆ ಮತ್ತು ಶ್ವಾನ ಬಲಿ: ಸಿಡಿಲು ಬಡಿದು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ರೈತ ಮಹಿಳೆ ಹಾಗೂ ಶ್ವಾನ ಬಲಿಯಾಗಿರುವ ಘಟನೆ ನಡೆದಿದೆ. ಜೋರು ಮಳೆಯಾಗುತ್ತಿದ್ದರಿಂದ ಸ್ವಪ್ನಾ(೪೮) ಮತ್ತು ಅವರು ಸಾಕಿದ್ದ ಶ್ವಾನ ಮರದ ಕೆಳಗೆ ಆಶ್ರಯ ಪಡೆದಿದ್ದರು.
ಈ ವೇಳೆ ಸಿಡಿಲು ಬಡಿದು ಸ್ವಪ್ನಾ ಮತ್ತು ಶ್ವಾನ ಸ್ಥಳದಲ್ಲೇ ಸಾವನ್ನಪ್ಪಿದ್ದರು. ತುಸು ದೂರದಲ್ಲಿದ್ದ ಮಗ ಜ್ಞಾನೇಶ್ವರ್ ಕೂಡ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಘಟನೆ ಸಂಬAಧ ಕುಂಚಾವರA ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.