ಅಪರಾಧ ರಾಜಕೀಯ ಸುದ್ದಿ

ದೇವರಾಜೇಗೌಡಗೆ 14 ದಿನಗಳ ನ್ಯಾಯಾಂಗ ಬಂಧನ

Share It

ಹೊಳೆನರಸೀಪುರ: ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಪ್ರಕರಣ ಹಿನ್ನೆಲೆಯಲ್ಲಿ ಅವರನ್ನು ಹೊಳೆನರಸೀಪುರ ಪೊಲೀಸರು ಬಂಧಿಸಿದ್ದರು.

ವಿಚಾರಣೆ ನಡೆಸಿದ ಹೊಳೆನರಸೀಪುರ ಪೊಲೀಸರು ಪ್ರಿನ್ಸಿಪಾಲ್ ಸಿಜೆ, ಜೆ.ಎಂ.ಎಫ್.ಸಿ ಜಡ್ಜ್ ಎಸ್.ಸಿದ್ದರಾಮ ಅವರ ಬಳಿ ಹಾಜರುಪಡಿಸಿದರು. ಕೋರ್ಟ್ ದೇವರಾಜೇಗೌಡ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತು.

ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾದ ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ, ಬೆದರಿಕೆ ಪ್ರಕರಣ ಸಂಬAಧ ದೇವರಾಜೇಗೌಡ ಅವರನ್ನು ಪೊಲೀಸರು ಶುಕ್ರವಾರ ರಾತ್ರಿ ವಶಕ್ಕೆ ಪಡೆದಿದ್ದರು. ಚಿತ್ರದುರ್ಗದ ಹಿರಿಯೂರಿನಲ್ಲಿ ವಶಕ್ಕೆ ಪಡೆದು, ತಡರಾತ್ರಿ ಹೊಳೆನರಸೀಪುರ ಪೊಲೀಸರಿಗೆ ಹಸ್ತಾಂತರ ಮಾಡಲಾಗಿತ್ತು.

ಶನಿವಾರ ವೈದ್ಯಕೀಯ ಪರೀಕ್ಷೆ ಬಳಿಕ ಪೊಲೀಸರು ದೇವರಾಜೇಗೌಡರನ್ನು ಪ್ರಿನ್ಸಿಪಲ್ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರ ಮನೆಯಲ್ಲಿ ಹಾಜರುಪಡಿಸಿದ್ದರು. ೧೪ ದಿನಗಳ ನ್ಯಾಯಾಂಗ ಬಂಧನ ಹಿನ್ನೆಲೆಯಲ್ಲಿ ದೇವರಾಜೇಗೌಡ ಅವರನ್ನು ಹಾಸನ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯಲಾಗಿದೆ.

ಹೊಳೆನರಸೀಪುರ ನಗರ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಅಜಯ್‌ಕುಮಾರ್ ನೇತೃತ್ವದ ತಂಡವು ಅವರನ್ನು ಜೈಲಿಗೆ ರವಾನಿಸಿದೆ. ಕಾರಾಗೃಹಕ್ಕೆ ಹೋಗುವ ಮುನ್ನ ಮಾತನಾಡಿದ ದೇವರಾಜೇಗೌಡ, ”ಇನ್ನೂ ಎಂಟು ದಿನದಲ್ಲಿ ಹೊರ ಬರುತ್ತೇನೆ, ತಲೆಕೆಡಿಸಿಕೊಳ್ಳಬೇಡಿ. ಸತ್ಯಕ್ಕೆ ಜಯವಿದೆ” ಎನ್ನುತ್ತ ತೆರಳಿದರು.


Share It

You cannot copy content of this page