ಬೆಂಗಳೂರು : ರಾಜ್ಯದಲ್ಲಿ ಪ್ರೀತಿ-ಪ್ರೇಮಗಳಿಂದ ಉಂಟಾಗುವ ಅವಾಂತರಗಳು ಒಂದೆರಡಲ್ಲ, ಸಂಬಂಧಗಳ ನಡುವೆ ನಂಬಿಕೆಗಳು ಇಲ್ಲದಾಗ ಇಂತಹ ಘಟನೆಗಳು ಇದೆ. ಪ್ರೀತಿಗಾಗಿ ಗಂಡನನ್ನು ಕೊಲೆ ಮಾಡುವುದು, ಪ್ರೀತಿಸಿದವರು ಸಿಕ್ಕಿಲ್ಲ ಎಂದು ಪ್ರಾಣ ಕಳೆದುಕೊಳ್ಳುತ್ತಿರುವ ವರದಿಗಳು ಹೆಚ್ಚಾಗಿದೆ.
ಇದೀಗ ಇಂತಹದೇ ಒಂದು ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜನಾಪುರದಲ್ಲಿ ಪ್ರೇಮ ಪ್ರಕರಣವೊಂದು ದುರಂತ ಅಂತ್ಯ ಕಂಡಿದೆ. ಪ್ರೇಯಸಿಯ ಮನೆಗೆ ನುಗ್ಗಿದ ಪ್ರಿಯಕರ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಯುವತಿಗೂ ಬೆಂಕಿ ಹಚ್ಚಲು ಯತ್ನಿಸಿದ ಭೀಕರ ಘಟನೆ ಮಂಗಳವಾರ (ಏಪ್ರಿಲ್ 21) ನಡೆದಿದೆ.
ಮೃತ ಯುವಕನನ್ನು ಕಿರಣ್ ಎಂದು ಗುರುತಿಸಲಾಗಿದೆ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಿರಣ್ ಮತ್ತು ಯುವತಿ ನಡುವೆ ಸ್ನೇಹವಾಗಿ, ಅದು ನಂತರ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ. ಇಂದು ಯುವತಿಯ ತಾಯಿ ಮತ್ತು ಅಣ್ಣ ಮನೆಯಲ್ಲಿ ಇಲ್ಲದ್ದನ್ನು ಗಮನಿಸಿದ ಕಿರಣ್, ಮಾತನಾಡಲೆಂದು ಆಕೆಯ ಮನೆಗೆ ತೆರಳಿದ್ದಾನೆ. ಮನೆಗೆ ಪೆಟ್ರೋಲ್ ಸಮೇತ ಬಂದಿದ್ದ ಕಿರಣ್, ಯುವತಿಯೊಂದಿಗೆ ಜೋರಾಗಿ ಗಲಾಟೆ ಮಾಡಿಕೊಂಡಿದ್ದಾನೆ. ಮಾತಿಗೆ ಮಾತು ಬೆಳೆದಾಗ ತಾನು ತಂದಿದ್ದ ಪೆಟ್ರೋಲ್ ಅನ್ನು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.

