ಉಪಯುಕ್ತ ಸುದ್ದಿ

KSRTC ಸಿಬ್ಬಂದಿಗೆ ಗುಡ್ ನ್ಯೂಸ್ : ಒಂದು ದಿನ ಮೊದಲೇ ಏಪ್ರಿಲ್ ತಿಂಗಳ ವೇತನ ಪಾವತಿಸಲು ಸೂಚನೆ !

Share It

ಬೆಂಗಳೂರು: KSRTC ತನ್ನ ಸಿಬ್ಬಂದಿಗೆ ಒಂದು ದಿನ ಮೊದಲೇ ವೇತನ ಪಾವತಿ ಮಾಡಲು ತೀರ್ಮಾನಿಸುವ ಮೂಲಕ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ.

ಪ್ರತಿ ತಿಂಗಳು 1 ,ನೇ ತಾರೀಕಿಗೆ ಸಿಬ್ಬಂದಿಯ ವೇತನ ಪಾವತಿ ಮಾಡಲಾಗುತ್ತಿದ್ದು, ಅಂತೆಯೇ ಈವರೆಗೆ ಪ್ರತಿ ತಿಂಗಳು ಪಾವತಿಸಲಾಗಿದೆ. ಪ್ರಸ್ತುತ ಮೇ. 1 ರಂದು ಕಾರ್ಮಿಕ ದಿನಾಚರಣೆ ಪ್ರಯುಕ್ತ ರಜಾದಿನವಾಗಿದ್ದು, ದು ವೇತನ ಪಾವತಿಸಲು ಸಾಧ್ಯವಾಗುವುದಿಲ್ಲ.

ಈ ಹಿನ್ನೆಲೆಯಲ್ಲಿ ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದು, ಮೇ.1 ರ ಬದಲಾಗಿ ಏಪ್ರಿಲ್ 30 ರಂದೇ ವೇತನ ಪಾವತಿ ಮಾಡುವಂತೆ ಸೂಚನೆ ನೀಡಲಾಗಿದೆ. ಆ ಮೂಲಕ ಸಿಬ್ಬಂದಿಯ ವೇತನ ತಡವಾಗದಂತೆ ಕ್ರಮ ಕೈಗೊಂಡಿರುವ ನಿಗಮದ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.


Share It

You cannot copy content of this page