ಸುದ್ದಿ

ಬಾಂಗ್ಲಾ ಗಡಿಯಲ್ಲಿ ಬೇಲಿ ನಿರ್ಮಾಣಕ್ಕೆ ಬೇಲಿ ಹಸ್ತಾಂತರ: ಪಶ್ಚಿಮ ಬಂಗಾಳ ಸರಕಾರದಿಂದ ಮಹತ್ವದ ತೀರ್ಮಾನ

Share It

ಕೊಲ್ಕತ್ತಾ: ಬಾಂಗ್ಲಾ ಗಡಿಯಲ್ಲಿ ನುಸುಳುವಿಕೆಯನ್ನು ತಡೆಯಲು ಬೇಲೆ ನಿರ್ಮಾಣ ಮಾಡುವುದಕ್ಕೆ ಬೇಕಿರುವ ಭೂಮಿಯನ್ನು ಹಸ್ತಾಂತರ ಮಾಡಲು ಪಶ್ಚಿಮ ಬಂಗಾಳ ಸರಕಾರ ತೀರ್ಮಾನಿಸಿದೆ.

ಅಧಿಕಾರ ವಹಿಸಿಕೊಂಡ ಎರಡೇ ದಿನದಲ್ಲಿ ಬಿಜೆಪಿಯ ಸಿಎಂ ಸುದೇಂದು ಅಧಿಕಾರಿ ಈ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು, ಗಡಿಯಲ್ಲಿ ಬೇಲಿಯಿಲ್ಲದ ಕಾರಣಕ್ಕೆ ಬಾಂಗ್ಲಾದಿಂದ ಲಕ್ಷಾಂತರ ಜನರು ಅಕ್ರಮವಾಗಿ ಭಾರತಕ್ಕೆ ಬರುತ್ತಿದ್ದಾರೆ. ಇದರ ತಡೆ ನಮ್ಮ ಹೊಣೆಯಾಗಿದೆ ಎಂದಿದ್ದಾರೆ.

ಈ ನಿಟ್ಟಿನಲ್ಲಿ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು, ಗಡಿ ಪ್ರದೇಶದ ಸಂಪೂರ್ಣ ಭಾರತೀಯ ಗಡಿ ಭದ್ರತಾ ಪಡೆಗೆ ವಹಿಸಿಕೊಡಲು ತೀರ್ಮಾನಿಸಲಾಗಿದೆ. ಜತೆಗೆ, ಗಡಿಯಲ್ಲಿ ಬೇಲೆ ನಿರ್ಮಾಣಕ್ಕೆ ಅಗತ್ಯವಿರುವ ಬೇಲಿಯನ್ನು ಹಸ್ತಾಂತರ ಮಾಡಲು ತೀರ್ಮಾನಿಸಲಾಗಿದೆ.


Share It

You cannot copy content of this page