ಸುದ್ದಿ

ಭೀಮ್ ಆರ್ಮಿ 3ನೇ ವಾರ್ಷಿಕೋತ್ಸವ ಸಮಾವೇಶಕ್ಕೆ ಚನ್ನರಾಯಪಟ್ಟಣದಲ್ಲಿ ಪೂರ್ವಸಿದ್ಧತಾ ಸಭೆ 

Share It

ಹಾಸನ: ಹಾಸನದಲ್ಲಿ ಆಯೋಜಿಸಿರುವ ಭೀಮ್ ಆರ್ಮಿ ವಾರ್ಷಿಕೋತ್ಸವದ ಮಹಾ ಸಮಾವೇಶಕ್ಕೆ ಪೂರ್ವ ಸಿದ್ಧತೆ ಕುರಿತಂತೆ ಚನ್ನರಾಯಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಅಧ್ಯಕ್ಷ ಮಂಜುನಾಥ್ ಹಿರಿಬಿಳ್ತಿ ನೇತೃತ್ವದಲ್ಲಿ ಸಭೆ ನಡೆಸಲಾಯಿತು. 

ಸಭೆಯಲ್ಲಿ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಸಂಘಟನೆಯ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಅಕ್ಟೋಬರ್ 9 ರಂದು ನಡೆಯುವ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಚಿಂತಕರು, ಹೋರಾಟಗಾರರು ಭಾಗವಹಿಸಲಿದ್ದು, ಇದಕ್ಕೆ ಸಂಬಂಧಿಸಿದ ಪೂರ್ವಸಿದ್ಧತೆಯ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. 

 ಸಭೆಯಲ್ಲಿ ತಾಲೋಕು ಅಧ್ಯಕ್ಷರಾದ ಮಂಜುನಾಥ ಹಿರಿಬಿಳ್ತಿ , ಜಿಲ್ಲಾ ಅಧ್ಯಕ್ಷರಾದ ಪ್ರದೀಪ್ ಹೆಚ್ ಎಸ್, ಜಿಲ್ಲಾ ಉಪಾಧ್ಯಕ್ಷ ನವೀನ್ ಸಾಲಗಾಮೆ ಹಾಗೂ ಹಾಸನ ತಾಲೂಕು ಅಧ್ಯಕ್ಷ ಹೇಮಂತ್, ಮಧು ಸಾಣೆನಹಳ್ಳಿ, ಗಣೇಶ್, ಇಮ್ರಾನ್, ಹರಿಪ್ರಸಾದ್, ಶ್ರೀಧರ್ ಮತ್ತಿತರಿದ್ದರು. 


Share It

You cannot copy content of this page