ಬೆಂಗಳೂರು: ಜೂನ್ ನಲ್ಲಿಯೇ ಚುನಾವಣೆ ನಡೆಸಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶಕ್ಕೆ ತಡೆ ಪಡೆಯಲು ರಾಝ್ಯ ಸರಕಾರ ತೀರ್ಮಾನಿಸಿದ್ದು, ಸೆಫ್ಟಂಬರ್‌ವರೆಗೆ ಚುನಾವಣೆಗೆ ಕಾಲಾವಕಾಶ ಕೊಡುವಂತೆ ಸರಕಾರ ಕೋರಿಕೆ ಮಾಡಿಕೊಳ್ಳಲಿದೆ.
ಸಿಬ್ಬಂದಿಯ ಕೊರತೆ ನೆಪವೊಡ್ಡಿರುವ ಸರಕಾರ ಎಸ್‌ಐಆರ್ ಮತ್ತು ಜನಗಣತಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದೇ ತಿಂಗಳಲ್ಲಿ ಚುನಾವಣೆ ನಡೆಸಲು ಸಿದ್ಧತೆ ನಡೆಸುವುದು ಕಷ್ಟವಾಗುತ್ತದೆ. ಹೀಗಾಗಿ, ಕಾಲಾವಕಾಶ ಬೇಕು ಎಂದು ಸರಕಾರ ಕೇಳಿಕೊಂಡಿದೆ.
ಜತೆಗೆ, ಕಾಲಾವಕಾಶ ಸಿಗದಿದ್ದರೆ, ರಾಜಕೀಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಮೂರು ತಿಂಗಳ ಕಾಲಾವಕಾಶ ಪಡೆದು ಅನಂತರ ಚುನಾವಣೆ ನಡೆಸಬಹುದು. ಅಷ್ಟರಲ್ಲಿ ನಗರದಲ್ಲಿ ಅಭಿವೃದ್ಧಿಯ ಮೂಲಕ ಜನರ ಮನಸ್ಸು ಗೆಲ್ಲಬಹುದು ಎಂಬುದು ಸರಕಾರದ ಆಶಯವಾಗಿದೆ.

