ಬೆಂಗಳೂರು:ಬಿಬಿಎಂಪಿ ವ್ಯಾಪ್ತಿಯ ನಾಗರಿಕರಿಗೆ ಸರಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾದ ಭೂ ಗ್ಯಾರಂಟಿ ಯೋಜನೆಯ ಪಾಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸುವ ಕಾರ್ಯ ಕ್ರಮದ ಭಾಗವಾಗಿ ಬಿಟಿಎಂ ಲೇಔಟ್ ನಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಹಕ್ಕು ಪತ್ರಗಳನ್ನು ವಿತರಿಸಿದರು
ಕೋರಮಂಗಲದ ಬಿಬಿಎಂಪಿ ಕಚೇರಿಯಲ್ಲಿ ತೆರೆದಿರುವ ವಿಶೇಷ ಅಭಿಯಾನ ಶಿಬಿರದಲ್ಲಿ ಅನೇಕ ಪಾಲಾನುಭವಿಗಳು ತಮ್ಮ ಆಸ್ತಿಗಳ ಇ ಖಾತ ಪಡೆದುಕೊಂಡಿದ್ದಾರೆ. ಪಾಲಾನುಭವಿಗಳಿಗೆ ಸ್ವತಃ ಸಚಿವ ರಾಮಲಿಂಗಾ ರೆಡ್ಡಿ ಪತ್ರಗಳನ್ನು ವಿತರಣೆ ಮಾಡಿದರು. ಈ ವೇಳೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಇತರ ಗಣ್ಯರು ಇದ್ದರು.

