ಸುದ್ದಿ

ಐಸಿಸಿಆರ್ ಜತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಒಡಂಬಡಿಕೆ

Share It

ನವ ದೆಹಲಿ : ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪ್ರಚುರಪಡಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೇಂದ್ರ ವಿದೇಶಾಂಗ ಇಲಾಖೆಯ ಅಧೀನದ ಸಾಂಸ್ಕೃತಿಕ ರಾಜತಾಂತ್ರಿಕ ಸಂಸ್ಥೆ ಐಸಿಸಿಆರ್ ಜತೆ ಒಡಂಬಡಿಕೆ ಮಾಡಿಕೊಂಡಿದೆ.

ನವ ದೆಹಲಿಯಲ್ಲಿ ಇರುವ ಐಸಿಸಿಆರ್ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ವಿದೇಶಾಂಗ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಹಾಗೂ ಐಸಿಸಿಆರ್ ಸಂಸ್ಥೆಯ ಡೆಪ್ಯೂಟಿ ಡೈರೆಕ್ಟರ್ ಜನರಲ್ ಮನಿಷಾ ಸ್ವಾಮಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಜೆ. ಮಂಜುನಾಥ್ ಈ ಒಡಂಬಡಿಕೆಗೆ ಸಹಿ ಮಾಡಿದರು. ಐಸಿಸಿಆರ್ನ ಡೈರೆಕ್ಟರ್ ಜನರಲ್ ಕೆ. ನಂದಿನಿ ಸಿಂಗ್ಲ ಹಾಗೂ ಇತರರು ಉಪಸ್ಥಿತರಿದ್ದರು.


Share It

You cannot copy content of this page