ರಾಜಕೀಯ ಸುದ್ದಿ

ಬೆಂಗಳೂರು ಉಸ್ತುವಾರಿ ರಾಮಲಿಂಗಾ ರೆಡ್ಡಿಗೆ ಕೊಡಿ ಎಂಬ ಕೂಗು ಯಾಕೆ ಗೊತ್ತಾ ?

Share It

ಬೆಂಗಳೂರು ನಗರದ ನಾಡಿಮಿಡಿತ ಬಲ್ಲ ಪ್ರಬಲ ನಾಯಕ 

ರಾಜಕೀಯ ದಿಕ್ಕನ್ನೇ ಬದಲಾಯಿಸುವ ಸೈಲೆಂಟ್ ಮಾಸ್ಟರ್ 

ಬೆಂಗಳೂರು: ರಾಜ್ಯದ ಅಧಿಕಾರ ಕೇಂದ್ರ ಬೆಂಗಳೂರು ನಗರದ ಅಭಿವೃದ್ಧಿ ಸಚಿವ ಸ್ಥಾನ ರಾಮಲಿಂಗ ರೆಡ್ಡಿ ಅವರಿಗೆ ಕೊಡಬೇಕು ಎಂಬ ಕೂಗು ಜೋರಾಗಿದೆ. 

ಇದಕ್ಕೆ ಕಾರಣ ರಾಮಲಿಂಗ ರೆಡ್ಡಿ ಅವರಿಗೆ ಬೆಂಗಳೂರು ನಗರದ ಮೇಲೆ ಇರುವ ಹಿಡಿತ ಎಂತಹದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ಬೆಂಗಳೂರು ನಗರದ ರಾಜಕೀಯ ಚಿತ್ರಣ ಬದಲಾಯಿಸುವ ಶಕ್ತಿ ರಾಮಲಿಂಗ ರೆಡ್ಡಿ ಅವರಿಗಿದೆ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಈ ಕಾರಣಕ್ಕೆ ಅವರೇ ಬೆಂಗಳೂರು ಉಸ್ತುವಾರಿಯಾದರೆ ಸೂಕ್ತ ಎಂಬುದು ನಗರದ ಕಾರ್ಯಕರ್ತರ ಅಭಿಪ್ರಾಯ. 

ರಾಮಲಿಂಗ ರೆಡ್ಡಿ ಅವರು ಬೆಂಗಳೂರು ನಗರದಲ್ಲಿ ಸತತ ಎಂಟು ಬಾರಿಗೆ ಗೆದ್ದು ಬರುತ್ತಿದ್ದಾರೆ. ಅದಕ್ಕಿಂತ ಮೊದಲು ಬೆಂಗಳೂರು ಪಾಲಿಕೆ ಸದಸ್ಯರಾಗಿದ್ದವರು. ಹೀಗಾಗಿ ನಗರದ ಜನರ ನಾಡಿಮಿಡಿತ ಅವರಿಗೆ ಚೆನ್ನಾಗಿ ಗೊತ್ತಿದೆ. ಇದು ಚುನಾವಣೆಗಳಲ್ಲಿ ಎಷ್ಟು ಬಳಕೆಗೆ ಬರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರಿವ ಸಂಗತಿ. ಇದರಿಂದಾಗಿ ಮುಂಬರುವ ಜಿಬಿಎ ಚುನಾವಣೆಗೆ ಸರಕಾರ ಸಿದ್ಧತೆ ಮಾಡಲು ರಾಮಲಿಂಗಾ ರೆಡ್ಡಿ ಅವರಿಗೆ ಬೆಂಗಳೂರು ಅಭಿವೃದ್ಧಿ ಖಾತೆ ನೀಡಲೇಬೇಕಾದ ಅನಿವಾರ್ಯತೆ ಇದೆ. 

ಜಿಬಿಎ ವ್ಯಾಪ್ತಿಯಲ್ಲಿ ಪ್ರಸ್ತುತ ಚುನಾವಣೆ ನಡೆದರೆ ಕಾಂಗ್ರೆಸ್ ಮಕಾಡೆ ಮಲಗಲಿದೆ ಎಂಬುದು, ಅಂತರಿಕ ವರದಿಗಳಿಂದ ಬಹಿರಂಗವಾಗಿದೆ. ಇದೀಗ ಚುನಾವಣೆ ನಡೆಸಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಸರಕಾರವಿದೆ. ಒಂದು ವೇಳೆ ಚುನಾವಣೆ ನಡೆದಲ್ಲಿ ರಾಮಲಿಂಗಾ ರೆಡ್ಡಿ ಅವರಿಗೆ ಚುನಾವಣೆ ನೇತೃತ್ವ ವಹಿಸುವುದು ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯದು. ಅದನ್ನು ಬಿಟ್ಟು ಅವರನ್ನು ದೂರ ಇಟ್ಟು ಖಾತೆ ಹಂಚಿದರೆ, ಜಿಬಿಎ ಸೋಲು ಖಚಿತ ಎನ್ನಲಾಗುತ್ತಿದೆ.

ಈವರೆಗೆ ಜಿಬಿಎ ಉಸ್ತುವಾರಿಯನ್ನು ಹೊಂದಿದ್ದ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಜಿಬಿಎ ಸೋಲು ಅರಗಿಸಿಕೊಳ್ಳುವುದು ಸುಲಭವಲ್ಲ. ಕಾರಣ ಅವರು ಅಧಿಕಾರ ವಹಿಸಿಕೊಂಡ ಮೊದಲ ಚುನಾವಣೆಯಲ್ಲಿಯೇ ಸೋಲುವುದು ಅವರಿಗೂ ಇಷ್ಟವಿಲ್ಲ. ಜತೆಗೆ ಬೆಂಗಳೂರು ಚುನಾವಣೆ ಡಿಕೆ ಅಹಿವಕುಮಾರ್ ಆಡಳಿತದ ಪ್ರತಿರೂಪ ಎಂದು ಬಿಂಬಿತವಾಗುತ್ತದೆ. ಹೀಗಾಗಿ ಇಂತಹ ಪ್ರಯತ್ನವನ್ನು ಸಿಎಂ ಮಾಡಲಾರರು ಎಂಬುದು ಕಾರ್ಯಕರ್ತರ ಅಭಿಪ್ರಾಯ. 

ಬೆಂಗಳೂರಿಗೆ ರಾಮಲಿಂಗಾ ರೆಡ್ಡಿ ಅನಿವಾರ್ಯ ಯಾಕೆ ಗೊತ್ತಾ: ಪಕ್ಷಕ್ಕೆ ನಗರದಲ್ಲಿ ಯಾವಾಗಲೂ ರಕ್ಷೆಯಾಗಿ ನೀತಿರುವುದು ರಾಮಲಿಂಗ ರೆಡ್ಡಿ ನಗರ ವ್ಯಾಪ್ತಿಯ ಬಹುತೇಕ ಕ್ಷೇತ್ರಗಳಲ್ಲಿ ಸೋಲು ಗೆಲುವು ನಿರ್ಧರಿಸುವ ಶಕ್ತಿ ರಾಮಲಿಂಗ ರೆಡ್ಡಿ ಅವರಿಗಿದೆ. ಅನೇಕ ಶಾಸಕರನ್ನು ಬೆಂಬಲಿಸಿಕೊಂಡು ಬಂದಿದ್ದು, ಅವರ ಬಲವಿದೆ. ಜತೆಗೆ ನಗರ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರಿಗೆ ರಾಮಲಿಂಗಾ ರೆಡ್ಡಿ ಅವರ ಬಗ್ಗೆ ಒಂದು ವಿಶೇಷ ನಂಬಿಕೆಯಿದೆ. ಹೀಗಾಗಿ, ಅವರಿಗೆ ನಗರ ಉಸ್ತುವಾರಿ ಸ್ಥಾನ ನೀಡುವಂತೆ ಬೇಡಿಕೆ ಇಡುತ್ತಿದ್ದಾರೆ. 

ಕಳೆದ ಚುನಾವಣೆಯಲ್ಲಿ ಅಧಿಕಾರದ ಮ್ಯಾಜಿಕ್: ಕಳೆದ ಬಾರಿ ಬಿಬಿಎಂಪಿ ಚುನಾವಣೆ ನಡೆದಿದ್ದು, 2015 ರಲ್ಲಿ. ಆಗ ಕಾಂಗ್ರೆಸ್ ಸರಕಾರವೇ ಇದ್ದರೂ ಪಕ್ಷ 77 ಸ್ಥಾನಗಳನ್ನು ಪಡೆದಿತ್ತು. 100 ಸ್ಥಾನ ಗೆದ್ದಿದ್ದ ಬಿಜೆಪಿ ಅಧಿಕಾರ ಪಡೆಯುವ ವಿಶ್ವಾಸದಲ್ಲಿತ್ತು.  ಆದರೆ, ಆಗೊಂದು ಮಾಸ್ಟರ್ ಸ್ಟ್ರೋಕ್ ನೀಡಿದ ಅಂದಿನ ಉಸ್ತುವಾರಿ ರಾಮಲಿಂಗಾ ರೆಡ್ಡಿ ಅವರು ಪಕ್ಷೇತರವಾಗಿ ಗೆದ್ದಿದ್ದ ಎಂಟು ಜನರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು. ಜೆಡಿಎಸ್ ಜತೆಗೆ ಮೈತ್ರಿ ಮಾತುಕತೆ ನಡೆಸಿ, ಬಿಜೆಪಿಯನ್ನು ಅಧಿಕಾರದಿಂದ ದೂರ ಇಟ್ಟು ನಾಲ್ಕು ವರ್ಷಗಳ ಕಾಲ ಪಕ್ಷಕ್ಕೆ ಅಧಿಕಾರ ಕೊಡಿಸಿದ್ದರು. ಇಂತಹ ಸಾಮರ್ಥ್ಯ ಇರುವ ನಾಯಕ ರಾಮಲಿಂಗ ರೆಡ್ಡಿ ನಗರದ ಉಸ್ತುವಾರಿಯಾಗಬೇಕು ಎಂಬುದು ಸಹಜವಾಗಿಯೇ ಕಾಂಗ್ರೆಸ್ ಕಾರಾಯಕರ್ತರ ಅಭಿಲಾಷೆಯಾಗಿದೆ. 


Share It

You cannot copy content of this page