ಸುದ್ದಿ

ರಾಮಯ್ಯ ವೈದ್ಯಕೀಯ ಕಾಲೇಜಿನ 42ನೇ ರ್ವಾಕ ವೈದ್ಯಕೀಯ ಘಟಿಕೋತ್ಸವ

Share It

ಎಂ.ಎಸ್ ರಾಮಯ್ಯ ವೈದ್ಯಕೀಯ ಕಾಲೇಜು ಆಯೋಜಿಸಿದ್ದ 42ನೇ ಘಟಿಕೋತ್ಸವವನ್ನು ಮುಖ್ಯಅತಿಥಿಗಳಾದ ಡಾ. ಗಿರೀಶ್ ವಾರಡೇಕರ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಗೋಕುಲ ಶಿಕ್ಷಣ ಪ್ರತಿಷ್ಠಾನ (ವೈದ್ಯಕೀಯ) ಅಧ್ಯಕ್ಷ ಡಾ. ಎಂ.ಆರ್ ಜಯರಾಂ, ಗೋಕುಲ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ ಎಂ.ಆರ್ ಸಂಪಂಗಿರಾಮಯ್ಯ, ರಾಮಯ್ಯ ವಿಶ್ವದ್ಯಾನಿಲಯ ಉಪಕುಲಪತಿ ಪ್ರೊ. ಕೆ.ಕೆ ರೈನಾ, ರಿಜಿಸ್ಟ್ರಾರ್ ಅಶೋಕ್ ರಾವ್, ಕಾಲೇಜಿನ ಪ್ರಾಂಶುಪಾಲರಾದ ಡಾ. ಶಾಲಿನಿ, ಸಹಾ ಪ್ರಾಂಶುಪಲರಾದ ಡಾ. ಜಾನಕಿ, ಡಾ. ಎ.ಜಿ ಪ್ರತಾಪ್, ರಾಮಯ್ಯ ಮೆಮೋರಿಯಲ್ ಆಸ್ಪತ್ರೆ ಅಧ್ಯಕ್ಷ ಡಾ. ನಾಗೇಂದ್ರ ಸ್ವಾು ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ವೈದ್ಯಕೀಯ ಪದ ಸಮಾರಂಭದಲ್ಲಿ 151 ಎಂಬಿಬಿಎಸ್ ಪದವಿಧರರು, 14 ಎಂಡಿ/ಎಂಎಸ್ ಸ್ನಾತಕೋತ್ತರ ಪದವಿಧರರು, 63 ಡಿಎಂ/ಎಂ.ಎಸಿ.ಎಚ್ ಸೂಪರ್ ಸ್ಪೆಷಾಲಿಟಿ ಪದವಿಧರರು, 19 ಫಿಸಿಯೋಥೆರಪಿ ಪದವಿಧರರು ಪದವಿಯನ್ನು ಪಡೆದರು. 20 ವೈದ್ಯಕೀಯ ಪದವಿಧರರು ತಮ್ಮ ಅತ್ಯುತ್ತಮ ಶೈಕ್ಷಣಿಕ ಸಾಧನೆಗಾಗಿ ಪದಕ ಪಡೆದರು. ಇವರಲ್ಲಿ ಡಾ. ಎಚ್.ಆರ್ ಶೃತಿ 9 ಪದಕ ಪಡೆದು, ಈ ಸಾಲಿನ ಅತ್ಯುತ್ತಮ ದ್ಯಾರ್ಥಿಯಾಗಿ ಹೊರಹ್ಮೊುದರು. ಇವರನ್ನು ಗೋಕುಲ ಶಿಕ್ಷಣ ಪ್ರತಿಷ್ಠಾನ (ವೈದ್ಯಕೀಯ) ಅಧ್ಯಕ್ಷ ಹಾಗೂ ರಾಮಯ್ಯ ವಿಶ್ವದ್ಯಾನಿಲಯ ಕುಲಪತಿ ಡಾ. ಎಂ.ಆರ್ ಜಯರಾಂ ಗೌರಸಿದರು.

ಸಮರಂಭಕ್ಕೆ ಮುಖ್ಯಅತಿಥಿಗಳಾಗಿ ಆಗುಸಿದ್ದ ಮುಂಬೈ ಲೀಲಾವತಿ ಆಸ್ಪತ್ರೆಯ ಇಂಟರ್ವೆನ್ಷನಲ್ ರೇಡಿಯಾಜಿಸ್ಟ್‌ ಮತ್ತು ರಾಮಯ್ಯ ವೈದ್ಯಕೀಯ ಕಾಲೇಜಿನ 2 ನೇ ಬ್ಯಾಚ್‌ನ ಹಳೆಯ ವೈದ್ಯಕೀಯ ವಿದ್ಯಾರ್ಥಿ ವಿದ್ಯಾರ್ಥಿಗಳನ್ನು ಕುರಿತು ತಮ್ಮ ಭಾಷಣದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ವೃತ್ತಿಯನ್ನು ಆರಂಭಿಸುವಾಗ ಸಹಾನುಭೂತಿ, ಸಮಗ್ರತೆ, ನಿರಂತರ ಕಲಿಕೆ ಮತ್ತು ಸಮಾಜಿಕ ಮೌಲ್ಯಗಳು ಅತಿಮುಖ್ಯ ಎಂದು ಹೇಳಿದರು.

ಪದ ಸಮಾರಂಭದ ಅಧ್ಯಕ್ಷತೆಯನ್ನು ವಸಿದ್ದ ಗೋಕುಲ ಶಿಕ್ಷಣ ಪ್ರತಿಷ್ಠಾನ (ವೈದ್ಯಕೀಯ) ಅಧ್ಯಕ್ಷ ಹಾಗೂ ರಾಮಯ್ಯ ಅನ್ವುಕ ಶ್ವದ್ಯಾನಿಲಯ ಕುಲಪತಿ ಡಾ. ಎಂ.ಆರ್ ಜಯರಾಂ ಎಲ್ಲಾ ಪದೀಧರರನ್ನು ಅಭಿನಂದಿಸಿ, ಆಧುನಿಕ ಜಗತ್ತು ಮುಂದುವರೆದಂತೆ ವೈದ್ಯಕೀಯ ರಂಗವು ವೇಗವಾಗಿ ಮತ್ತು ಅತ್ಯಾಧುನಿಕವಾಗಿ ಬೆಳೆಯುತ್ತಿದೆ, ಇದಕ್ಕೆ ಸ್ಪಷ್ಟ ಉದಾಹರಣೆ ವೈದ್ಯಕೀಯ ರಂಗಕ್ಕೆ ಕೃತಕ ಬುದ್ಧಿಮತ್ತೆ ಪಾತ್ರ ಹೆಚ್ಚಾಗುತ್ತಿರುವುದು ಹಾಗೂ ಮುಂದಿನ ದಿನಗಳಲ್ಲಿ ನಾವು ಅದಕ್ಕೆ ನಾವು ಸಿದ್ಧರಾಗಬೇಕು ಎಂದು ದ್ಯಾರ್ಥಿಗಳಿಗೆ ಕರೆ ನೀಡಿದರು.

ಮತ್ತು ನಮಗೆ ಇದರ ಬಗ್ಗೆ ಅರಿವು ಇದ್ದು, ಮುಂದಿನ ದಿನಗಳಲ್ಲಿ ವೈದ್ಯಕೀಯ ದ್ಯಾರ್ಥಿಗಳನ್ನು ತಯಾರು ಮಾಡುವುದರ ಕಡೆ ಗಮನ ನೀಡುತ್ತಿದ್ದೇವೆ ಎಂದು ತಿಳಿಸಿದರು. ಹಾಗೂ ದ್ಯಾರ್ಥಿಗಳಿಗೆ ವೈದ್ಯಕೀಯ ವೃತ್ತಿಯು ಎಷ್ಟೇ ಡಿಜಿಟಲೀಕರಣವಾದರೂ ಮಾನವನ ಮನಸ್ಸು ಇನ್ನೂ ಅತ್ಯಂತ ಶಕ್ತಿಶಾಲಿ ಸಾಧನಾಗಿದೆ, ಯಂತ್ರಕ್ಕಿಂತ ನಾವು ಎಷ್ಟು ಬೇಗ ರೋಗದ ಬಗ್ಗೆ ತಿಳಿಯಬಹುದು ಮತ್ತು ಅದಕ್ಕೆ ನಿಖರವಾಗಿ ಚಿಕಿತ್ಸೆ ನೀಡಬಹುದು ಎಂಬುದರ ಅವಲಂಬಿತವಾಗಿರುತ್ತದೆ ಮತ್ತು ನೀವು ಇದರ ಮೇಲೆ ಗಮನ ಹರಿಸುವುದರ ಜೊತೆಗೆ ಪ್ರಾಣ್ಯರಾಗಬೇಕು ಎಂದು ಹೇಳಿದರು.


Share It

You cannot copy content of this page