ರಾಜಕೀಯ ಸುದ್ದಿ

ಭಾರತದಿಂದ ರಪ್ತಾಗುವ ಜೆನರಿಕ್ ಔಷಧಿಗಳ ಮೇಲೆ ಶೇ.200 ರಷ್ಟು ತೆರಿಗೆ ಘೋಷಿಸಿದ ಟ್ರಂಪ್ !

Share It

ಬೆಂಗಳೂರು: ಅಮೇರಿಕ ಮತ್ತು ಭಾರತ ನಡುವಿನ ಸ್ನೇಹದ ಬಗ್ಗೆ ಮಾತನ್ನಾಡುತ್ತಲೇ ಭಾರತದಿಂದ ರಪ್ತಾಗುವ ಜೆನರಿಕ್ ಔಷಧಿಗಳ ಮೇಲಿನ ತೆರಿಗೆಯನ್ನು ಶೇ. 200ರಷ್ಟು ಹೆಚ್ಚಿಸಿ ಅಮೇರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಆದೇಶ ಹೊರಡಿಸಿದ್ದಾರೆ.

ಅಮೇರಿದ ಸ್ಥಳೀಯ ಔಷಧ ತಯಾರಿಕೆ ಸಾಮರ್ಥ್ಯವನ್ನು ಹೆಚ್ಚಿಸಲು ಈ ಘೋಷಣೆ ಮಾಡಲಾಗಿದೆ ಎಂದು ಹೇಳಿರುವ ಟ್ರಂಪ್ ಭಾರತ ಸೇರ 12 ದೇಶಗಳ ಔಷಧಿ ರಪ್ತಿನ ಮೇಲಾಗುವ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಅಮೇರಿಕಾಗೆ ರಪ್ತಾಗುವ ಔಷಧಿಗಳ ಪೈಕಿ ಭಾರತ ಶೇ. 38ರಷ್ಟು ಔಷಧಿಗಳನ್ನು ಕಳುಹಿಸಲಾಗುತ್ತಿದೆ. 2025ರಲ್ಲಿ ಭಾರತವು 9.7 ಶತಕೋಟಿ ಡಾಲರ್ ಮೌಲ್ಯದ ಔಷಧಿಗಳನ್ನು ರಪ್ತು ಮಾಡಿದೆ. ಇದೀಗ ಅಮೇರಿಕ ಈ ಔಷಧಿಗಳ ರಪ್ತಿನ ಮೇಲೆ ಶೇ.200 ರಷ್ಟು ತೆರಿಗೆ ವಿಧಿಸಲು ತೀರ್ಮಾನಿಸಿದೆ.

ಇದರಿಂದಾಗಿ ಅಮೇರಿಕದಲ್ಲಿ ಭಾರತೀಯ ಔಷಧಿಗಳ ಬೇಡಿಕೆ ಕುಸಿಯಲಿದೆ. ಪ್ರಸ್ತುತ ಸನ್ನಿವೇಶದಲ್ಲಿ ಔಷಧಿಗಳ ಮೇಲೆ ಶೇ. 0 ರಷ್ಟು ತೆರಿಗೆ ವ್ಯವಸ್ಥೆಯಿದೆ. ಇದು ಹಂತಹಂತವಾಗಿ ಹೆಚ್ಚಾಗುತ್ತಾ ಹೋಗಲಿದೆ ಎಂದು ಟ್ರಂಪ್ ತಿಳಿಸಿದ್ದಾರೆ.

ಎರಡು ವರ್ಷದ ನಂತರ ಶೇ. 100 ರಷ್ಟು ತೆರಿಗೆ ಬೀಳಲಿದ್ದು, ಅನಂತರ ಅದು ಶೇ.200ಕ್ಕೆ ಹೆಚ್ಚಾಗಲಿದೆ. ಇದರಿಂದಾಗಿ ಭಾರತದಲ್ಲಿ ಉತ್ಪಾದನೆಯಾಗುವ ಔಷಧಿಗಳನ್ನು ಖರೀದಿಸುವ ಪ್ರಮಾಣ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಅಮೇರಿಕದಲ್ಲಿ ಭಾರತದ ಔಷಧಿಗಳನ್ನು ಖರೀದಿಸುವುದು ಕಡಿಮೆಯಾದರೆ, ಸಹಜವಾಗಿಯೇ ಭಾರತದ ಜೆನರಿಕ್ ಔಷಧ ತಯಾರಿಕಾ ಉದ್ಯಮ ಸಂಕಷ್ಟಕ್ಕೆ ಸಿಲುಕಲಿದೆ. ಭಾರತದ ಆರ್ಥಿಕ ವ್ಯವಸ್ಥೆಯ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಲಿದೆ ಎಂಬ ಆತಂಕ ವ್ಯಕ್ತವಾಗಿದೆ.

ಅಮೇರಿಕದಲ್ಲಿ ಈಗ ಬಳಕೆ ಮಾಡುತ್ತಿರುವ ಮಧುಮೇಹ, ರಕ್ತದೊತ್ತಡದಂತಹ ಖಾಯಿಲೆಗಳಿಗೆ ಬಳಸುತ್ತಿರುವ ಬಹುತೇಕ ಔಷಧಿಗಳು ಭಾರತದ ಕಂಪನಿಗಳು ಸರಬರಾಜು ಮಾಡುತ್ತಿರುವ ಔಷಧಿಗಳಾಗಿವೆ. ಮುಂದಿನ ಇವುಗಳ ಮೇಲೆ ತೆರಿಗೆ ಹೆಚ್ಚಾದಂತೆ, ಅಮೇರಿಕದಲ್ಲಿ ಬೇಡಿಕೆ ಕಡಿಮೆಯಾಗಬಹುದು ಎಂದು ಹೇಳಲಾಗಿದೆ.


Share It

You cannot copy content of this page