ಫ್ಯಾಷನ್ ಸುದ್ದಿ

ಒಂದೇ ಕೈಯ್ಯಲ್ಲಿ ಪೊಲೀಸ್ ವ್ಯಾನ್ ತಡೆದ ಸೂಪರ್ ವುಮೆನ್ !

Share It

ಅರೆಸ್ಟ್‌ ಮಾಡಿದ್ದ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ಅಡ್ಡ ನಿಂತ ಗಟ್ಟಿಗಿತ್ತಿ


ಮುಂಬಯಿ: ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಕೆಲವರನ್ನು ಅರೆಸ್ಟ್‌ ಮಾಡಿ ಕರೊದೊಯ್ಯುವಾಗ ಒಬ್ಬ ಯುವತಿ ವ್ಯಾನಿಗೆ ಅಡ್ಡ ನಿಂತು ಅವರನ್ನೆಲ್ಲ ಇಳಿಸುವಂತೆ ತಾಕೀತು ಮಾಡಿ, ಪೊಲೀಸರಿಗೆ ಸವಾಲು ಹಾಕಿದ ಘಟನೆ ಮುಂಬಯಿಯಲ್ಲಿ ನಡೆದಿದೆ.

ದೆಹಲಿಯ ಜಂತರ್-ಮಂತರ್ ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿ, ಮುಂಬಯಿ ಮಹಾನಗರದಲ್ಲಿಯೂ ಪ್ರತಿಭಟನೆ ನಡೆಯುತ್ತಿದೆ. ಈ ವೇಳೆ ಮುಂಬಯಿ ಪೊಲೀಸರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಬಂಧಿಸಿ ಕರೆದೊಯ್ಯುತ್ತಿದ್ದರು.

ಇದನ್ನು ಕಂಡ ಮಾಡೆಲ್ ರಿಯಾ ಯಾದವ್ ವ್ಯಾನಿಗೆ ಅಡ್ಡನಿಂತು ವಿದ್ಯಾರ್ಥಿಗಳನ್ನು ಕರೆದೊಯ್ಯದಂತೆ ತಡೆದರು. ಮಳೆ ಸುರಿಯುತ್ತಿದ್ದರೂ, ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ವ್ಯಾನ್ ಅನ್ನು ತಡೆದು, ಕೊನೆಗೂ ವಿದ್ಯಾರ್ಥಿಗಳನ್ನು ಬಂಧಮುಕ್ತಗೊಳಿಸುವಲ್ಲಿ ಯಶಸ್ವಿಯಾದರು.

ರಿಯಾ ಯಾದವ್ ಅವರು ವೃತ್ತಿಯಲ್ಲಿ ಮಾಡೆಲ್ ಮತ್ತು ಫ್ಯಾಷನ್ ಡಿಸೈನರ್ ಆಗಿದ್ದು, ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿ, ಬಂದಿದ್ದರು. ಈ ವೇಳೆ ಪೊಲೀಸರು ವಿದ್ಯಾರ್ಥಿಗಳನ್ನು ಬಂಧಿಸಿದ್ದನ್ನು ಖಂಡಿಸಿ, ಏಕಾಂಗಿಯಾಗಿ ರಸ್ತೆಗಿಳಿದು, ತಮ್ಮ ಕೈಯ್ಯಿಂದ ವಾಹನ ತಡೆಗಟ್ಟಿ ಗಟ್ಟಿಗಿತ್ತಿ ಎನಿಸಿಕೊಂಡರು.

ರಿಯಾ ಯಾದವ್ ಅವರ ವಿಡಿಯೋ ಇದೀಗ ಸಾಮಾಲಿಕ ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದು, ಆಕೆಯ ಧೈರ್ಯ ಮತ್ತು ಸಹಾಸಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ವಿದ್ಯಾರ್ಥಿಗಳ ಹೋರಾಟಕ್ಕೆ ದೇಶದ್ಯಾಂತ ಬೆಂಬಲ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ರಿಯಾರ ಬೆಂಬಲ ದೇಶದ ಯುವಜನತೆಯ ಮನಗೆದ್ದಿದೆ.


Share It

You cannot copy content of this page