ಅಪರಾಧ ಸುದ್ದಿ

MDMA ಮಾರಾಟಗಾರ ಸೇರಿ ಐವರು ವಶಕ್ಕೆ: ಡ್ರಗ್ಸ್ ವಿರುದ್ಧ ಮಂಗಳೂರು ಪೊಲೀಸರ ಕಾರ್ಯಾಚರಣೆ

Share It

ಮಂಗಳೂರು: ನಿಷೇಧಿತ MDMA ಮಾರಾಟ ಮಾಡುತ್ತಿದ್ದ ಓರ್ವ ಹಾಗೂ ಗಾಂಜಾ ಸೇವನೆ ಮಾಡಿದ್ದ ನಾಲ್ವರು ಸೇರಿ ಒಟ್ಟು ಐವರು ಆರೋಪಿಗಳನ್ನು ಮಾದಕ ವಸ್ತು ಮಾರಾಟ ಮತ್ತು ಸೇವನೆ ವಿರುದ್ಧದ ಕಾರ್ಯಾಚರಣೆಯಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಆಗಸ್ಟ್ 14 ರಂದು ಬೆಳಿಗ್ಗೆ ಕೊಣಾಜೆ ಪೊಲೀಸ್ ಉಪ ನಿರೀಕ್ಷಕರಾದ ಸುದೀಪ್ ಎಂ.ವಿ. ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ, ಉಳ್ಳಾಲ ತಾಲೂಕಿನ ಮುಡಿಪು ಕಂಬಳಪದವು ಕೆ.ಐ.ಡಿ.ಬಿ ರಸ್ತೆಯ ಆರ್​ಟಿಓ ಬೃಹತ್ ವಾಹನಗಳ ಚಾಲನಾ ತರಬೇತಿ ಕೇಂದ್ರದ ಬಳಿ ಮಧ್ಯಾಹ್ನ 1:25ರ ಸುಮಾರಿಗೆ ದಾಳಿ ನಡೆಸಲಾಯಿತು. ಈ ವೇಳೆ ಆಟೋ ರಿಕ್ಷಾದಲ್ಲಿ MDMA ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿ ಮೊಹಮ್ಮದ್ ಹನೀಫ್ ಯಾನೆ ಚೊಟ್ಟೆ ಹನೀಫ್ (40) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿ ಮೊಹಮ್ಮದ್ ಹನೀಫ್ ಹಾಗೂ ಆತನಿಗೆ ಮಾದಕ ವಸ್ತು ಸರಬರಾಜು ಮಾಡಿದ ನಂದಾವರ ಹಫೀಜ್ @ ಅಪ್ಪಿ ಎಂಬಾತನ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯಿಂದ ರೂ 1,50,000 ಮೌಲ್ಯದ 15.17 ಗ್ರಾಂ ತೂಕದ ಬಿಳಿ ಬಣ್ಣದ ಹರಳು ರೂಪದ MDMA, 10,000 ಮೌಲ್ಯದ ಒಪ್ಪೋ (OPPO) ಮೊಬೈಲ್ ಫೋನ್, 1,00,000 ಮೌಲ್ಯದ ಆಟೋರಿಕ್ಷಾ ವಶಪಡಿಸಿಕೊಳ್ಳಲಾಗಿದೆ.


Share It

You cannot copy content of this page