ಸುದ್ದಿ

ರಾಜ್ಯಮಟ್ಟದ ‘ಶಿಕ್ಷಕರ ರತ್ನ’ ಪ್ರಶಸ್ತಿಗೆ ಶ್ರೀ. ಸೋಮಪ್ಪ ಡಿ. ಮುಡಣ್ಣವರ ಆಯ್ಕೆ: ಸೆ . 20ರಂದು ರಾಯಚೂರಿನಲ್ಲಿ ಪ್ರಶಸ್ತಿ ಪ್ರದಾನ

Share It

ಸೆ. 20ರಂದು ರಾಯಚೂರಿನಲ್ಲಿ ಪ್ರಶಸ್ತಿ ಪ್ರದಾನ

ಮುಂಡಗೋಡ: ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ, ರಾಯಚೂರಿನ ಕಲಾ ಸಂಕಲ ಸಂಘ (ರಿ.) ಹಾಗೂ ಕಲ್ಯಾಣ ಕರ್ನಾಟಕ ಕ್ರಾಂತಿವೀರ ಸಂಘೊಳ್ಳಿ ರಾಯಣ್ಣ ಟ್ರಸ್ಟ್ ವತಿಯಿಂದ ನೀಡಲಾಗುವ ರಾಜ್ಯಮಟ್ಟದ ‘ಶಿಕ್ಷಕರ ರತ್ನ’ ಪ್ರಶಸ್ತಿಗೆ ಮುಂಡಗೋಡದ ಶ್ರೀ. ಸೋಮಪ್ಪ ಡಿ. ಮುಡಣ್ಣವರ ಅವರು ಆಯ್ಕೆಯಾಗಿದ್ದಾರೆ.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಕಲಾ ಸಂಕಲ ಸಂಘದ ವತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಹಿನ್ನೆಲೆಯಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಶಿಕ್ಷಕರಾಗಿ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಹಾಗೂ ಸೇವೆಯನ್ನು ಪರಿಗಣಿಸಿ ಶ್ರೀ. ಸೋಮಪ್ಪ ಡಿ. ಮುಡಣ್ಣವರ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಅಂಗವಾಗಿ ಸೆಪ್ಟೆಂಬರ್ 20, 2026ರಂದು ಬೆಳಿಗ್ಗೆ 10 ಗಂಟೆಗೆ ರಾಯಚೂರು ನಗರದ ಪಂಡಿತ ಸಿದ್ಧರಾಮ ರಂಗಮಂದಿರ, ಸ್ಟೇಷನ್ ರಸ್ತೆ, ರಾಯಚೂರು ಇಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಸಮಾರಂಭದಲ್ಲಿ ಶಿಕ್ಷಣ ಕ್ಷೇತ್ರದ ಗಣ್ಯರು, ವಿವಿಧ ಕ್ಷೇತ್ರಗಳ ಗಣ್ಯರು, ಶಿಕ್ಷಕರು ಹಾಗೂ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಆದರ್ಶ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಶ್ರೀ. ಸೋಮಪ್ಪ ಡಿ. ಮುಡಣ್ಣವರ ಅವರಿಗೆ ರಾಜ್ಯಮಟ್ಟದ ‘ಶಿಕ್ಷಕರ ರತ್ನ’ ಪ್ರಶಸ್ತಿ ದೊರೆತಿರುವುದು ಮುಂಡಗೋಡ ತಾಲೂಕಿನ ಶಿಕ್ಷಕ ಸಮುದಾಯ ಹಾಗೂ ಶಿಕ್ಷಣಾಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಅವರ ಈ ಸಾಧನೆಗೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಶಿಕ್ಷಕರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ವರದಿ: ಮುಂಡಗೋಡ


Share It

You cannot copy content of this page