ಬೆಂಗಳೂರು: ದಶಕಗಳ ಕಾಲ ಹೋರಾಟದ ಕೇಂದ್ರವಾದ ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಮಾರು ತನಿಖೆಗೆ ಕೋರಿ ಸೌಜನ್ಯ ಅವರ ತಾಯಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ತನಿಖೆಯಲ್ಲಿ ಅನೇಕ ಲೋಪಗಳು ಇರುವುದನ್ನು ಗಮನಿಸಿತ್ತು. ಸರಕಾರ ಮತ್ತು ಸಿಬಿಐ ಗೆ ತನಿಖೆಯ ಲೋಪಗಳ ಕುರಿತು ಎಚ್ಚರಿಕೆ ನೀಡಿದ್ದು, ಪ್ರಕರಣದ ಸಮಗ್ರ ತನಿಖೆಯನ್ನು ಮತ್ತೊಮ್ಮೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದೆ.
ಸಿಬಿಐ ತನಿಖೆಗಳಲ್ಲಿ ಲೋಪಗಳಿದ್ದು, ಇನ್ನು ಮೂರು ಟೋನ್ಗಳಲ್ಲಿ ಮರು ತನಿಖೆ ನಡೆಸಿ ವರದಿ ಒಪ್ಪಿಸಬೇಕು ಎಂದು ನ್ಯಾಯಾಲಯ ಹೇಳಿದ್ದು, ಇದೀಗ ಧರ್ಮಸ್ಥಳ ಪ್ರಕರಣ ಮರು ಜೀವ ಪಡೆದುಕೊಂಡಿದೆ. ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಸೌಜನ್ಯ ಪ್ರಕರಣ ಇದೀಗ ರಾಜ್ಯದಲ್ಲಿ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.

