ರಾಜಕೀಯ ಸುದ್ದಿ

ವೀರಶೈವ ಮಠಾಧೀಶರ ಕುರಿತ ಸಿಎಂ ಹೇಳಿಕೆ, ಅವರ ನೈಜ ಗುಣ ಹೊರಬಂದಿದೆ: ಬಸವರಾಜ ಬೊಮ್ಮಾಯಿ

Share It

ಹಾವೇರಿ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ವೀರ ಶೈವ ಲಿಂಗಾಯತ ಮಠಾಧಿಪತಿಗಳ ಬಗ್ಗೆ ತಮ್ಮ ನೈಜ ಗುಣ ಒಳಗಡೆ ಮುಚ್ಚಿಟ್ಟುಕೊಂಡು ಬೇರೆ ತರ ಪ್ರೊಜೆಕ್ಟ್ ಮಾಡಲು ನೋಡಿದ್ದರು ಅವರ ನೈಜ ಗುಣಗುಣ ಇಷ್ಟು ದಿನ ಆದ ಮೇಲೆ ಆಚೆ ಬರುತ್ತಿದೆ. ಅದು ಅವರ ಸಂಸ್ಕೃತಿ, ಅದು ಹೊರಗಡೆ ಬಂದಿದೆ. ಅವರ ಹೇಳಿಕೆ ಬಗ್ಗೆ ಮುಂದೆ ಜನ ತೀರ್ಮಾನ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು 25 ವರ್ಷ ಜನ ಸೇವೆ ಮಾಡಿರುವ ಹಿನ್ನೆಲೆಯಲ್ಲಿ ಸೇವಾ ಜ್ಯೋತಿ ಕಾರ್ಯಕ್ರಮ ಮಾಡಿದ್ದೇವೆ. ಆದರ್ಶಗಳು ನಶಿಸಿ ಹೋಗಿರುವ ಕಾಲದಲ್ಲಿ ಪ್ರಧಾನಿ ಮೋದಿಯವರು ಆದರ್ಶ ಆಡಳಿತ ತರುವ ಪ್ರಯತ್ನ ಮಾಡಿದ್ದಾರೆ. ಜಾಗತಿಕವಾಗಿ ನಮ್ಮ ದೇಶ ಆರ್ಥಿಕವಾಗಿ ಮೂರನೇ ಸ್ಥಾನದಲ್ಲಿದೆ. ಅದನ್ನು ಇನ್ನಷ್ಟು ಅಭಿವೃದ್ದಿ ಮಾಡುವ ದೃಡ ಸಂಕಲ್ಪ ಮಾಡಿದ್ದೇವೆ ಎಂದರು.

ವೀರ ಶೈವ ಲಿಂಗಾಯತ ಮಠಾಧಿಪತಿಗಳು ನನ್ನ ಸೇವೆ ಮಾಡಬೇಕು ಎಂಬ ಸಿಎಂ ಡಿಕೆ ಶಿವಕುಮಾರ್ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಡಿ. ಕೆ ಶಿವಕುಮಾರ್ ಅವರು ತಮ್ಮ ನೈಜ ಗುಣ ಒಳಗಡೆ ಮುಚ್ಚಿಟ್ಟುಕೊಂಡು ಬೇರೆ ಥರ ಪ್ರೊಜೆಕ್ಟ್ ಮಾಡಲು ನೋಡಿದ್ದರು ಅವರ ನೈಜ ಗುಣ ಇಷ್ಟು ದಿನ ಆದ ಮೇಲೆ ಆಚೆ ಬರ್ತಾ ಇದೆ. ಅದು ಅವರ ಸಂಸ್ಕೃತಿ, ಅದು ಹೊರಗಡೆ ಬಂದಿದೆ. ಅವರು ಹೇಳಿರೋದು ಸ್ಪಷ್ಟವಾಗಿ ಬಹಿರಂಗವಾಗಿ ಇದೆ. ಈಗ ನಾನು ಹಾಗೇ ಹೇಳಿಲ್ಲ ಅಂತಾರೆ. ಅದನ್ನ ಮರಳಿ ಪಡೆಯಲು ಆಗುವುದಿಲ್ಲ, ಈ ಬಗ್ಗೆ ಮುಂದೆ ಜನ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

ಖಾಸಗಿ ದೂರಿಗೆ ಅವಕಾಶ ಇಲ್ಲ: ಎಸ್ ಐಆರ್ ಪ್ರಕ್ರಿಯೆಯಲ್ಲಿ ಬಿಜೆಪಿಯವರು ಫಾರಂ ನಂ- 7 ಕೊಟ್ಟು ಕಾಂಗ್ರೆಸ್ ಮತದಾರನ್ನು ತೆಗೆಸುತ್ತಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಸ್ ಐ ಆರ್ ನಲ್ಲಿ ಅರ್ಜಿ ಕೊಡಲು ಅಧಿಕಾರ ಇದೆ. ಸಾಮಾನ್ಯ ವ್ಯಕ್ತಿಯೂ ಅರ್ಜಿ‌ಕೊಡಬಹುದು ಅದನ್ನ ನಾವು ಮಾಡಲು ಸಾಧ್ಯವೇ? ಎಸ್ ಐ ಆರ್ ಪಾರದರ್ಶಕ ವಾಗಿ ನಡೆದಿದೆ. ಜಸ್ಟಿಸ್ ಗಂಗಾಧರ್ ಅವರು ಕೂಡಾ ಅದನ್ನೇ ಹೇಳಿದ್ದಾರೆ. ಅರ್ಜಿ ಕೊಟ್ಟ ತಕ್ಷಣ ತಪ್ಪು ಅಂತ ಅಲ್ಲ, ಪರಿಶೀಲನೆ ಮಾಡಬೇಕು. ಕಾಂಗ್ರೆಸ್ ನವರು ನೀಡುತ್ತಿರುವುದು ಖಾಸಗಿ ದೂರುಗಳು. ಇವರಿಗೆ ಕಂಪ್ಲೇಂಟ್ ಮಾಡಲು ಅಧಿಕಾರವೇ ಇಲ್ಲ. ಎಲೆಕ್ಷನ್ ವಿಚಾರದಲ್ಲಿ ಲೋಪ ಆಗಿದ್ದರೆ ಎಲೆಕ್ಷನ್ ಕಮಿಷನ್ ಮಾತ್ರ ಕಂಪ್ಲೇಂಟ್ ಮಾಡಲು ಸಾಧ್ಯ. ಕಾಂಗ್ರೆಸ್ ನವರು ಅಲ್ಪ ಸಂಖ್ಯಾತರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಬೇಸರದ ಸಂಗತಿ: ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದ ಎಂ ಆರ್ ಪೂವಮ್ಮ ಅವರಿಗೆ ರಾಜ್ಯ ಸರ್ಕಾರದಿಂದ ನಿರ್ಲಕ್ಷ್ಯ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದು ನನಗೂ ಬೇಸರ ಆಯ್ತು ನಮ್ಮ ಸರ್ಕಾರ ಇದ್ದಾಗ ಓಲಂಪಿಕ್ ಟ್ರೇನಿಂಗ್ ಗೆ 10 ಲಕ್ಷ ರೂಪಾಯಿ ಕೊಡುತ್ತಿದ್ದೆವು. ಇವರಿಗೆ ಮಕ್ಕಳ ಸಾಧನೆ ಗುರುತಿಸಲೂ ಪುರುಸೊತ್ತಿಲ್ಲ. ಕಾಂಗ್ರೆಸ್ ನವರು ತಮ್ಮ ಅಧಿಕಾರದ ದರ್ಬಾರ್ ನಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಪಶ್ಚಿಮ ಪದವೀಧರ ಕ್ಷೇತ್ರದ ಎಂ ಎಲ್ ಸಿ ಎಲೆಕ್ಷನ್ ನಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ್ ನೂರಕ್ಕೆ ನೂರು ಗೆಲ್ಲುವ ವಿಶ್ವಾಸ ಇದೆ ಎಂದು ಇದೇ ವೇಳೆ ತಿಳಿಸಿದರು.

ತಜ್ಞರ ರೀತಿ ಮಾತನಾಡುವುದು ಬೇಡ: ಬೆಡ್ತಿ ವರದಾ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಕೇಳಿದ ಪ್ರಶ್ನೆಗಡ ಈ ಕುರಿತು ಸಿಎಂ ಡಿ.ಕೆ. ಶಿವಕುಮಾರ್ ಗೆ ಪತ್ರ ಬರೆದಿದ್ದೇನೆ. ಡಿಪಿ ಆರ್ ಗೆ ಕೆಲವರು ಅಡ್ಡಿಪಡಿಸುತ್ತಿದ್ದಾರೆ. ಡಿ ಪಿ ಆರ್ ಬಂದ ಮೇಲೆ ಎಷ್ಟು ಅರಣ್ಯ ಹೋಗುತ್ತದೆ ಎನ್ನುವುದು ಗೊತ್ತಾಗುತ್ತದೆ. ಅದು ಬರುವ ಮೊದಲೇ ನಾವೇ ತಜ್ಞರ ತರ ಮಾತಾಡುವುದು ಬೇಡ. ಈ ಬಗ್ಗೆ ಚರ್ಚಿಸಲು ಜನ ಪ್ರತಿನಿಧಿಗಳು ಹಾಗೂ ಹೋರಾಟಗಾರರ ಸಭೆ ಕರೆಯುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಅವರು ಸಭೆ ಕರೆಯುವ ಭರವಸೆ ಇದೆ ಎಂದು ಹೇಳಿದರು.

ಕಬ್ಬಿನ ಬೆಲೆ ನಿಗದಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಅಕ್ಟೋಬರ್ 12 ರಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೇತೃತ್ವದಲ್ಲಿ ದೆಹಲಿಯಲ್ಲಿ ಸಭೆ ಇದೆ ಅಲ್ಲಿ ಎಫ್ ಆರ್ ಪಿ , ಎಂ ಎಸ್ ಪಿ ಬಗ್ಗೆ ಚರ್ಚೆ ಆಗುತ್ತದೆ ಎಂದು ಹೇಳಿದರು.


Share It

You cannot copy content of this page