ಸಾಮಾಜಿಕ ನ್ಯಾಯಕ್ಕಾಗಿ ಒಬಿಸಿ ರಾಷ್ಟ್ರೀಯ ಏಕತಾ ಆಂದೋಲನಕ್ಕೆ ಕರೆ
ಬೆಂಗಳೂರು, ಅ 8; ಕೇಂದ್ರ ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ಪ್ರತ್ಯೇಕ ಇಲಾಖೆ/ಸಚಿವಾಲಯ ಸ್ಥಾಪಿಸಿ, ದೇಶದ ಹಿಂದುಳಿದ ವರ್ಗಗಳ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ಒದಗಿಸಬೇಕು ಎಂದು ಒಬಿಸಿ ಫೆಡರೇಶನ್ ಆಪ್ ಇಂಡಿಯಾ ಆಗ್ರಹಿಸಿದೆ.
ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರೀಯ ಅಧ್ಯಕ್ಷ ಜೆ.ಎಂಜೆರಪ್ಪ,ಮಾಜಿ ಶಾಸಕ ಮುಖ್ಯಮಂತ್ರಿ ಚಂದ್ರು,
ಕೇಂದ್ರ ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ಪ್ರತ್ಯೇಕ ಇಲಾಖೆ ಸಚಿವಾಲಯ ತಕ್ಷಣ ರಚಿಸಬೇಕು. ಒಬಿಸಿ ಜನಸಂಖ್ಯೆಗನುಗುಣವಾಗಿ ಬಜೆಟ್ನಲ್ಲಿ ಹಣ ಮೀಸಲಿಡಬೇಕು,
ಸ್ಥಳೀಯ ಸಂಸ್ಥೆಗಳಲ್ಲಿ ಸುಮಾರು ದೇಶದಲ್ಲಿ ಶೇ. 56% ಇರುವ ಒಬಿಸಿ ಸಮುದಾಯಕ್ಕೆ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಲ್ಲಿ ಶಾಸಕಾಂಗ ಮತ್ತು ಸಂಸತ್ತಿನ ಚುನಾವಣೆಯಲ್ಲಿಯೂ ಒಬಿಸಿ ರಾಜಕೀಯ ಮೀಸಲಾತಿ ತಕ್ಷಣ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಸುಪ್ರೀಂ ಕೋರ್ಟ್ ಸೇರಿದಂತೆ ಅನೇಕ ನ್ಯಾಯಾಲಯಗಳಲ್ಲಿ ಒಬಿಸಿ ಸಂಬಂಧಿತ ವ್ಯಾಜ್ಯಗಳಿಗೆ ನ್ಯಾಯ ಸಿಗುತ್ತಿಲ್ಲ. . 1931ರ ನಂತರ ದೇಶದಲ್ಲಿ ನಿಯಮಿತವಾಗಿ ಜನಗಣತಿಯನ್ನು ಮಾತ್ರ ನಡೆಸಲಾಗುತ್ತಿದೆ. ಒಮ್ಮೆಯೂ ಜಾತಿ ಜನಗಣತಿ ನಡೆಯದೇ ಇರುವುದು ಈ ದತ್ತಾಂಶಗಳ ಕೊರತೆಗೆ ಕಾರಣವಾಗಿದೆ. ಇದನ್ನು ಸರಿಪಡಿಸಲು ಕೇಂದ್ರ ಸರ್ಕಾರ ಇಡೀ ದೇಶದಲ್ಲಿ ಜಾತಿ ಜನಗಣತಿ ನಡೆಸಲು ಮುಂದಾಗಿದೆ.ಪಾರದರ್ಶಕವಾಗಿ ಕೇಂದ್ರ ಸರ್ಕಾರ ಜಾತಿಗಣತಿ ನಡೆಸಬೇಕು ಜಾತಿ ಕಲಂನಲ್ಲಿ ಒಬಿಸಿ ಕಲಂ ಅಳವಡಿಸಬೇಕು ಎಂದರು
ರಾಜ್ಯ ಸರ್ಕಾರ ಹಿಂದೆ ಅನೇಕ ಒಬಿಸಿ ಸಮುದಾಯಗಳಿಗೆ ನಿಗಮಗಳನ್ನು ಘೋಷಿಸಲಾಗಿತ್ತು. ಈ ನಿಗಮಗಳು ಹಣಕಾಸಿನ ನೆರವಿಲ್ಲದೇ ಸೊರಗಿವೆ. ಈ ಎಲ್ಲ ನಿಗಮಗಳಿಗೆ ತಲಾ ನೂರು ಕೋಟಿಯ ಅನುದಾನ ಬಿಡುಗಡೆ ಮಾಡಬೇಕು ಎಂದು ಹೇಳಿದರು.
ಸುದ್ದಿಗೋಷ್ಢಿಯಲ್ಲಿ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ,ಪ್ರಧಾನ ಕಾರ್ಯದರ್ಶಿ ಕೇಶವ ಪ್ರಸಾದ್, ಶಿವಪ್ಪ ಲಮಾಣಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.
