ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನಮ್ಮ ಪ್ರತಿಭಟನೆಗೆ ಮೊದಲೇ ಸೋಲೊಪ್ಪಿಕೊಂಡಿದ್ದಾರೆ, ಆ ಮೂಲಕ ತಾವೆಷ್ಟು ಅಸಹಾಯಕರು ಎಂಬುದನ್ನು ದೇಶದ ಜನತೆಗೆ ತೋರಿಸಿದ್ದಾರೆ ಎಂದು ಕಾಕ್ರೋಚ್ ಜನತಾ ಪಾರ್ಟಿ ಮುಖಂಡ ಅಭಿಜಿತ್ ದೀಪ್ಕೆ ಹೇಳಿದ್ದಾರೆ.
ಪ್ರತಿಭಟನೆಯನ್ನು ತಡೆಯುವುದು ತಾಕತ್ತಿನ ಸಂಕೇತವಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಪ್ರತಿರೋಧವನ್ನು ಸಹಿಸಿಕೊಂಡು, ಅವರ ಬೇಡಿಕೆಗಳನ್ನು ಈಡೇರಿಸುವ ಕಡೆಗೆ ಆಡಳಿತ ವ್ಯವಸ್ಥೆ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಪ್ರತಿಭಟನೆ ನಡೆಯದಂತೆ ತಡೆಯೊಡ್ಡುವುದು, ಪ್ರತಿಭಟನಾಕಾರರನ್ನು ಬಂಧಿಸುವುದು, ರೈಲ್ವೆ ಬಂದ್ ಮಾಡುವುದು, ಮೆಟ್ರೋ ಸ್ಥಗಿತಗೊಳಿಸುವುದು ಸೋಲಿ ಸಂಕೇತ ಎಂದಿದ್ದಾರೆ.
ಕೇಂದ್ರ ಸರಕಾರ ಪ್ರತಿಭಟನೆ ಹತ್ತಿಕ್ಕಲು ಸುಮಾರು 20 ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಿಕೊಂಡಿದೆ. 57 ರೈಲುಗಳನ್ನು ನಿಲ್ಲಿಸಿದೆ. ಅನೇಕ ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಿದೆ. ಇಷ್ಟೆಲ್ಲ ಸರ್ಕಸ್ ಮಾಡುವ ಅವಶ್ಯಕತೆಯಿರಲಿಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ.
