ಉಪಯುಕ್ತ ರಾಜಕೀಯ ಸುದ್ದಿ

ಪ್ರತಿಭಟನೆ ಪರಿಣಾಮ ಟ್ರೈನ್ ಬಂದ್ : ವಿಮಾನ ಟಿಕೆಟ್ ದರ ಡಬಲ್ ಏರಿಕೆ

Share It

ನವದೆಹಲಿ: ಸಿಜೆಪಿ ಪ್ರತಿಭಟನೆಗೆ ಹೆದರಿ ಕೇಂದ್ರ ಸರಕಾರ ರೈಲುಗಳನ್ನು ಬಂದ್ ಮಾಡಿದ್ದರ ಪರಿಣಾಮವಾಗಿ ವಿಮಾನ ಟಿಕೆಟ್ ದರ ದಿಡೀರ್ ಎಂದು ಹೆಚ್ಚಳವಾಗಿದೆ.

ಪಂಜಾಬ್, ಹರಿಯಾಣ ರಾಜ್ಯಗಳಿಂದ ರೈಲಿನಲ್ಲಿ ಆಗಮಿಸುವವರನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರಕಾರ ರೈಲುಗಳನ್ನು ಬಂದ್ ಮಾಡಿದೆ. ಸುಮಾರು 57 ರೈಲುಗಳನ್ನು ಬಂದ್ ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ರೈಲುಗಳು ಬಂದ್ ಆದ ಕಾರಣ ಅಮೃತಸರ್ ಮತ್ತು ದೆಹಲಿ ನಡುವಿನ ಏರ್ ಟಿಕೆಟ್ ಬೆಲೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡುಬಂದಿದೆ ಎಂದು ವರದಿಯಾಗಿದೆ. ಸಹಜವಾಗಿ ಸಾಮಾನ್ಯ ದಿನಗಳಲ್ಲಿ 4000 ರು. ಇದ್ದ ಏರ್ ಟಿಕೆಟ್ ದರವನ್ನು ದಿಡೀರನೆ 8000 ಕ್ಕೆ ಏರಿಕೆ ಮಾಡಲಾಗಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆಯ ಪರಿಣಾಮ ಅನೇಕ ಸಾರ್ವಜನಿಕರು ಅನಾನುಕೂಲವನ್ನು ಅನುಭವಿಸುತ್ತಿದ್ದರೆ, ಪ್ರತಿಭಟನೆಗೆ ಹೆದರಿ ಸರಕಾರ ತೆಗೆದುಕೊಳ್ಳುತ್ತಿರುವ ಕೆಲವು ಕ್ರಮಗಳ ಪರಿಣಾಮವಾಗಿ ವಿಮಾನ ಪ್ರಯಾಣಿಕರು ಸೇರಿದಂತೆ ಅನೇಕರು ತೊಂದರೆಗೆ ಒಳಗಾಗುತ್ತಿದ್ದಾರೆ.


Share It

You cannot copy content of this page