ಚಿಕ್ಕಮಗಳೂರು: ಆನೆ ಕಾರಿಡಾ ರ್ ಮರು ನಿರ್ಮಾಣಕ್ಕೆ ಚಿಂತನೆ ನಡೆದಿದ್ದು, ಅದಕ್ಕಾಗಿ ಅರಣ್ಯ ಪ್ರದೇಶದ ಅಕ್ಕಪಕ್ಕದ ಖಾಸಗಿ ಜಮೀನು ವಶಪಡಿಸಿಕೊಳ್ಳಲು ಸರಕಾರ ತೀರ್ಮಾನಿಸಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚೋವಾ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.
ಆನೆ ಪಥ ದಲ್ಲಿ ಈಗ ಖಾಸಗಿ ಜಮೀನುಗಳು ಇದ್ದು, ಇದರಿಂದಲೇ ತೊಡಕಾಗಿದೆ, ಹೀಗಾಗಿ, ಜಮೀನು ವಶಕ್ಕೆ ಪಡೆದು ಕಾರಿಡರ್ ಮರು ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ಜಮೀನು ಕಳೆದುಕೊಂಡವರಿಗೆ ಬದಲಿ ಜಮೀನು ನೀಡಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಆನೆ ಹಾಗು ಮಾನವರ ನಡುವಿನ ಸಂಘರ್ಷ ಹೆಚ್ಚಾಗಿದೆ. ಆನೆ ಪಥ ಮರು ನಿರ್ಮಾಣದಿಂದ ಇದನ್ನು ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಅಧ್ಯಯನ ನಡೆಸಿ, ಪ್ರಸ್ತಾವನೆ ಸಿದ್ಧಪಡಿಸುವಂತೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪುಂಡಾಟ ಮಾಡುವ ಆನೆಗಳನ್ನು ಹಿಡಿದು ಪಳಗಿಸಿ ಮತ್ತೆ ಕಾಡಿಗೆ ಬಿಡಲು ಸಾಫ್ಟ್ ರಿಲೀಫ್ ಕೇಂದ್ರಗಳನ್ನು ತೆರೆಯಲಾಗಿದೆ. ತರೀಕೆರೆ ತಾಲೂಕಿನ ತ್ಯಾಗದ ಬಾಗಿ ವ್ಯಾಪ್ತಿಯಲ್ಲಿ 5 ಎಕರೆ ಪ್ರದೇಶದಲ್ಲಿ ಇಂತಹ ಕೇಂದ್ರ ತೆರೆಯಲಾಗುತ್ತಿದ್ದು, ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಕಾಮಗಾರಿ ಆರಂಭವಾಗಬೇಕಿದೆ ಎಂದು ಅವರು ತಿಳಿಸಿದರು.
