ಉಪಯುಕ್ತ ಸುದ್ದಿ

ಬಂಡಿಪುರ ಅಭಯಾರಣ್ಯಕ್ಕೆ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಭೇಟಿ: ಸಮಗ್ರ ಯೋಜನೆ ಕುರಿತು ಪರಿಶೀಲನೆ 

Share It

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಶುಕ್ರವಾರ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ರಾಮಲಿಂಗಾ ರೆಡ್ಡಿ ಭೇಟಿ ನೀಡಿ, ಅರಣ್ಯ ಸಂರಕ್ಷಣೆ, ವನ್ಯಜೀವಿಗಳ ರಕ್ಷಣೆ, ಮಾನವ-ವನ್ಯಜೀವಿ ಸಂಘರ್ಷ ತಡೆ ಕ್ರಮಗಳು, ಆಧುನಿಕ ತಂತ್ರಜ್ಞಾನದ ಬಳಕೆ ಹಾಗೂ ಮುಂಚೂಣಿ ಸಿಬ್ಬಂದಿ ಕಲ್ಯಾಣ ಕಾರ್ಯಕ್ರಮಗಳ ಕುರಿತು ಸಮಗ್ರ ಪರಿಶೀಲನಾ ಸಭೆ ನಡೆಸಿದರು. 

ಈ ಸಂದರ್ಭದಲ್ಲಿ ಪ್ರಮುಖವಾಗಿ ಚರ್ಚಿಸಲಾದ ಮತ್ತು ಜಾರಿಗೆ ತಂದ ಪ್ರಮುಖಾಂಶಗಳು ಇಲ್ಲಿವೆ:

🔹 ಹುಲಿಗಳ ಸಂಖ್ಯೆ & ಪರಿಸರ ಸಮತೋಲನ: ಬಂಡೀಪುರದಲ್ಲಿ ಹುಲಿಗಳ ಸಂಖ್ಯೆ 155ಕ್ಕೂ ಹೆಚ್ಚು ಏರಿಕೆಯಾಗಿದ್ದು, ಪ್ರತಿ ಚದರ ಕಿ.ಮೀ. ವ್ಯಾಪ್ತಿಯಲ್ಲಿ ಹೇರಳವಾದ ಬೇಟೆ ಪ್ರಾಣಿಗಳು (ಜಿಂಕೆ, ಕಾಡೆಮ್ಮೆ, ಕಡವೆ) ಇರುವುದು ಕಾಡಿನ ಆರೋಗ್ಯಕರ ಪರಿಸರಕ್ಕೆ ಸಾಕ್ಷಿಯಾಗಿದೆ.

ಪ್ರಮುಖ ಲೋಕಾರ್ಪಣೆಗಳು & ಕೈಪಿಡಿ ಬಿಡುಗಡೆ: ಬಂಡೀಪುರದಿಂದ ಸಿದ್ಧಪಡಿಸಲಾದ “ಡ್ರೋನ್ ಪೈಲಟ್ ಕ್ಷೇತ್ರ ಕೈಪಿಡಿ” (Drone Pilot Field Manual) ಬಿಡುಗಡೆ.

ಪ್ರವಾಸಿಗರ ಸೇವೆಗಳನ್ನು ಬಲಪಡಿಸಲು “ಇಕೋ-ಟೂರಿಸಮ್ ಕ್ವಾಲಿಟಿ ಅಶ್ಯುರೆನ್ಸ್ & ವಿಸಿಟರ್ ರಿಡ್ರೆಸಲ್ ಪ್ಲಾಟ್‌ಫಾರ್ಮ್” ಲೋಕಾರ್ಪಣೆ.

ಪರಿಸರ ಸಂರಕ್ಷನೆಯ ಸಂಕೇತವಾಗಿ ಸಸಿ ನೆಡುವ ಕಾರ್ಯ.

ಸಿಬ್ಬಂದಿ ಕಲ್ಯಾಣ ಹಾಗೂ ವಿಶೇಷ ಕಾರ್ಯಪಡೆಗಳು: ಕಾಡಿನ ರಕ್ಷಣೆಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ಮುಂಚೂಣಿ ಸಿಬ್ಬಂದಿಗೆ ರೇಷನ್ ಕಿಟ್‌ಗಳ ವಿತರಣೆ ಹಾಗೂ ಕ್ಷೇತ್ರ ಕಾರ್ಯಚಟುವಟಿಕೆಗಳಿಗೆ ಹೊಸ ವಾಹನಗಳ ವಿತರಣೆ.

 ಎಲಿಫೆಂಟ್ ಟಾಸ್ಕ್ ಫೋರ್ಸ್ ಹಾಗೂ ಚಿರತೆ ಕಾರ್ಯಪಡೆ (Leopard Task Force) ಸಿಬ್ಬಂದಿಯನ್ನು ಭೇಟಿ ಮಾಡಿ ಸಾರ್ವಜನಿಕ ಸುರಕ್ಷತಾ ಕ್ರಮಗಳ ಪರಿಶೀಲನೆ.

ತಂತ್ರಜ್ಞಾನದ ಬಳಕೆ & ನಿಯಂತ್ರಣ ಕೇಂದ್ರಗಳು:

ಥರ್ಮಲ್ ಡ್ರೋಣ್‌ಗಳು, ಜಿಪಿಎಸ್ ರೇಡಿಯೋ ಕಾಲರ್‌ಗಳು, ವನ್ಯಜೀವಿ ಟೆಲಿಮೆಟ್ರಿ ಹಾಗೂ ಗಸ್ತು ಉಪಕರಣಗಳ ಪ್ರದರ್ಶನ ವೀಕ್ಷಣೆ.

ಜಿಲ್ಲಾ ಸಂಘರ್ಷ ನಿಯಂತ್ರಣ ಕೇಂದ್ರ ಹಾಗೂ ಅರಣ್ಯ ಇಲಾಖೆಯ ಶ್ವಾನ ದಳದ (Dog Squad) ಕಾರ್ಯವೈಖರಿ ಪರಿಶೀಲನೆ.

ಮಾನವ-ವನ್ಯಜೀವಿ ಸಂಘರ್ಷ ತಡೆ & ಅರಣ್ಯ ರಕ್ಷಣೆ:

 ರೈಲ್ವೆ ಬ್ಯಾರಿಕೇಡ್‌ಗಳು, ಸೋಲಾರ್ ಫೆನ್ಸಿಂಗ್ ಹಾಗೂ ಆನೆ ಕಂದಕಗಳ ಪರಿಣಾಮಕಾರಿ ನಿರ್ವಹಣೆ.

ಬಂಡೀಪುರ ವ್ಯಾಪ್ತಿಯಲ್ಲಿ ಗುರುತಿಸಲಾಗಿರುವ ಒತ್ತುವರಿಯನ್ನು ಸಂಪೂರ್ಣ ತೆರವುಗೊಳಿಸಲು ಹಾಗೂ ಕಳ್ಳಬೇಟೆ ತಡೆ ಶಿಬಿರಗಳ (APC Camps) ದುರಸ್ತಿಗೆ ಕಟ್ಟುನಿಟ್ಟಿನ ಸೂಚನೆ.

 ಮೂಲೇಹೊಳೆ ಚೆಕ್‌ಪೋಸ್ಟ್ ಪರಿಶೀಲಿಸಿ, ಹೊರರಾಜ್ಯದಿಂದ ಬರುವ ವೈದ್ಯಕೀಯ ತ್ಯಾಜ್ಯಗಳ ವಿಲೇವಾರಿ ತಡೆಯಲು ಕಟ್ಟುನಿಟ್ಟಿನ ಕ್ರಮ.

 ವನ್ಯಜೀವಿ ದಾಳಿಯಿಂದ ಆಗುವ ಬೆಳೆ ನಷ್ಟಕ್ಕೆ ಪರಿಹಾರ ಮತ್ತು ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಭರವಸೆ.

ಆವಾಸಸ್ಥಾನ ನಿರ್ವಹಣೆ & ಕಾಳ್ಗಿಚ್ಚು ತಡೆ:

 ಅರಣ್ಯದಲ್ಲಿ ಸಫಾರಿ ನಡೆಸಿ ಪರಿಸರ ವ್ಯವಸ್ಥೆ ಅವಲೋಕನ.

 ಲ್ಯಾಂಟಾನಾ (Lantana) ಹಾಗೂ ಸೆನ್ನಾ ಸ್ಪೆಕ್ಟಾಬಿಲಿಸ್ (Senna spectabilis) ಆಕ್ರಮಣಕಾರಿ ಕಳೆಗಳನ್ನು ವೈಜ್ಞಾನಿಕವಾಗಿ ತೆರವುಗೊಳಿಸುವುದು ಮತ್ತು ಕಾಳ್ಗಿಚ್ಚು ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಚರ್ಚೆ.

ಈ ಸಭೆಯಲ್ಲಿ ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಗಣೇಶ್ ಪ್ರಸಾದ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್ ಪುಷ್ಕರ್, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಮನೋಜ್ ರಾಜನ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ರವಿಶಂಕರ್ ಆರ್. ಹಾಗೂ ಡಾ. ಎಂ. ಮಾಲತಿ ಪ್ರಿಯಾ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ನಂದೀಶ್ ಎಲ್. ಮತ್ತು ಡಾ. ಪ್ರಭು ಗೌಡ್, ವಲಯ ಅರಣ್ಯಾಧಿಕಾರಿಗಳಾದ ಸತೀಶ್ ಹಾಗೂ ಮೋಹನ್ ಸೇರಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು


Share It

You cannot copy content of this page