ಉಪಯುಕ್ತ ಸುದ್ದಿ

ಬೇಸಿಗೆ ರಜೆ ಕಡಿತಗೊಳಿಸದಂತೆ ಖಾಸಗಿ ಶಾಲೆಗಳಿಗೆ ಸೂಚನೆ

Share It

ಬೆಂಗಳೂರು: ಬೇಸಿಗೆ ರಜೆಯಲ್ಲಿ ಮಕ್ಕಳು ಆಟವಾಡಿಕೊಂಡು, ಮೋಜು ಮಸ್ತಿಯಲ್ಲಿ ಕಾಲ ಕಳೆಯುತ್ತಾರೆ. ಆದರೆ, ಬಹುತೇಕ ಖಾಸಗಿ ಶಾಲೆಗಳು ಇಂತಹ ಮೋಜು ಮಸ್ತಿಗೆ ಕಡಿವಾಣ ಹಾಕಿ, ಮಕ್ಕಳನ್ನು ಶಾಲೆಗೆ ಕರೆಸಿಕೊಳ್ಳುತ್ತಿವೆ.

ಈ ಬೆಳವಣಿಗೆ ಬಗ್ಗೆ ಸರಕಾರಕ್ಕೆ ಅನೇಕ ದೂರುಗಳು ಬಂದಿದ್ದು, ಖಾಸಗಿ ಶಾಲೆಗಳ ಈ ನಡೆಯನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಖಂಡಿಸಿದ್ದು, ಸರಕಾರ ನಿಗದಿಪಡಿಸಿರುವಂತೆಯೇ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಬೇಕು ಎಂದು ಸರಕಾರಕ್ಕೆ ಮನವಿ ಮಾಡಿದೆ. ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಹಿಂದೆ ಸರಕಾರ ಸೂಚಿಸಿರುವ ಮಾರ್ಗಸೂಚಿಯ ಅನ್ವಯವೇ ರಜೆ ನೀಡಬೇಕು ಎಂದು ಹೇಳಿದೆ.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮನವಿಗೆ ಸ್ಪಂದಿಸಿರುವ ಸರಕಾರ ಇದೀಗ ಸುತ್ತೋಲೆಯೊಂದನ್ನು ಹೊರಡಿಸಿದ್ದು, ಮಕ್ಕಳಿಗೆ ಶೈಕ್ಷಣೀಕ ವರ್ಷದಲ್ಲಿ ಶಾಲಾ ಚಟುವಟಿಕೆ ಮತ್ತು ಶೈಕ್ಷಣಿಕ ಮಾರ್ಗಸೂಚಿ ಮತ್ತು ಸುತ್ತೋಲೆಯಲ್ಲಿ ತಿಳಿಸಿದಂತೆ ಮುಂದುವರಿಸಬೇಕು ಎಂದು ಎಲ್ಲ ಉಪನಿರ್ದೇಶಕರಿಗೆ ತಿಳಿಸಿದೆ.

ಸರಕಾರ ೨೦೨೩-೨೪ ನೇ ಸಾಲಿನರಾಜ್ಯ ಪಠ್ಯ ಕ್ರಮದ ಸರಕಾರಿ ಮತ್ತು ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ೨೦೨೩-೨೪ರ ಶೈಕ್ಷಣಿಕ ಮಾರ್ಗಸೂಚಿ ಹೊರಡಟಿಸುವ ಮೂಲಕ ೧೧-೪-೨೦೨೪ ರಿಂದ ೨೮-೫-೨೦೨೪ ರಜೆ ನಿಗದಿಗೊಳಿಸಿ ಆದೇಶಿಸಿತ್ತು. ಮೇಲ್ಕಂಡ ಆದೇಶಕ್ಕನುಗುಣವಾಗಿಯೇ ಶೈಕ್ಷಣಿಕ ಕ್ರಮಗಳನ್ನು ಮುಂದುವರಿಸಲು ಇದೀಗ ಸುತ್ತೋಲೆಯಲ್ಲಿ ತಿಳಿಸಿದೆ.


Share It

You cannot copy content of this page