ಬೆಂಗಳೂರು: ತೆಲುಗು ನಟ, ನಟಿಯರನ್ನೊಳಗೊಂಡ ಸನ್-ಸೆಟ್ ಟು ಸನ್ ರೈಸ್ ರೇವ್ ಪಾರ್ಟಿಗೆ ಸುಮಾರು ೫೦ ಲಕ್ಷ ರು. ಖರ್ಚು ಮಾಡಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಬೆಂಗಳೂರು ಹೊರವಲಯದ ಎಲೆಕ್ಟಾçನಿಕ್ ಸಿಟಿ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ತೆಲುಗು ಮೂಲದ ವ್ಯಕ್ತಿಯೊಬ್ಬರು ರೇವ್ ಪಾರ್ಟಿ ಆಯೋಜನೆ ಮಾಡಿದ್ದರು. ಆ ಪಾರ್ಟಿಗೆ ಸುಮಾರು ೫೦ ಲಕ್ಷ ರು,ಖರ್ಚು ಮಾಡಲಾಗಿತ್ತು ಎನಲಾಗಿದೆ.
ಪಾರ್ಟಿಯಲ್ಲಿ ಭಾಗವಹಿಸಲು ತೆಲುಗಿನ ಅನೇಕ ನಟನಟಿಯರಿಗೆ ಆಹ್ವಾನ ನೀಡಲಾಗಿತ್ತು. ತೆಲುಗು ಸಿನಿಮಾ ಮತ್ತು ಧಾರಾವಾಹಿಗಳಲಿ ನಟಿಸುತ್ತಿರುವ ಕೆಲವು ಕನ್ನಡದ, ಬೆಂಗಳೂರು ಮೂಲದ ನಟನಟಿಯರು ಕೂಡ ಪಾರ್ಟಿಯಲ್ಲಿ ಭಾಗವಹಿಸಬೇಕಾಗಿತ್ತು. ಕೆಲವು ಸಿಸಿಬಿ ದಾಳಿ ವೇಳೆಗಾಗಲೇ ಕೆಲವರು ಅಲ್ಲಿದ್ದು, ಸಿಕ್ಕಿಬಿದ್ದಿದ್ದರು.
ಪಾರ್ಟಿಯಲ್ಲಿ ಗಾಂಜಾ, ಚೆರಸ್ ಮತ್ತು ಎಂಡಿಎಎA ಮಾತ್ರೆಗಳನ್ನು ವಶಪಡಿಸಿಕೊಂಡಿದ್ದು, ಪಾರ್ಟಿಯಲ್ಲಿ ಭಾಗವಹಿಸಿದ್ದವರು, ಈಗಾಗಲೇ ಮಾಧಕ ವಸ್ತು ಸೇವನೆ ಮಾಡಿದ್ದಾರಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪಾರ್ಟಿಯಲ್ಲಿ ಭಾಗವಹಿಸಿದ್ದ ೧೦೧ ಜನರ ರಕ್ತದ ಮಾದಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ.
ರಕ್ತದ ಮಾದರಿಯಲ್ಲಿ ಮಾಧಕ ವಸ್ತು ಸೇವನೆಯ ಸುಳಿವು ಸಿಕ್ಕಿದರೆ, ಅವರಿಗೆ ನೊಟೀಸ್ ನೀಡಿ ವಿಚಾರಣೆಗೆ ಕರೆಸಿಕೊಳ್ಳಲು ಪೊಲೀಸರು ತೀರ್ಮಾನಿಸಿದ್ದಾರೆ. ಪಾರ್ಟಿ ಆಯೋಜನೆ ಮಾಡಿದವರು, ಡ್ರಗ್ಸ್ ಪೆಡ್ಲರ್‌ಗಳು ಸೇರಿ ೧೮ ಜನರನ್ನು ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆ ನಡೆಯುತ್ತಿದ್ದು, ಹೆಬ್ಬಗೋಡಿ ಪೊಲೀಸ್ ಠಾಣೆಗೆ ಪ್ರಕರಣವನ್ನು ಸಿಸಿಬಿ ಪೊಲೀಸರು ವರ್ಗಾಯಿಸಿದ್ದಾರೆ.