ಅಪರಾಧ ರಾಜಕೀಯ ಸುದ್ದಿ

ಪೆನ್ ಡೈವ್ ಪ್ರಕರಣದಲ್ಲಿ ಪಿನ್ ಡ್ರಾಪ್ ಸೈಲೆಂನ್ಸ್ ಒಳ್ಳೆಯದು !

Share It

ಬೆಂಗಳೂರು: ಪೆನ್ ಡೈವ್ ಪ್ರಕರಣ ಮಾಡಿದವರ ಪಾಪ ಆಡಿದವರ ಬಾಯಲ್ಲಿ ಎಂಬAತಾಗಿದ್ದು, ಪ್ರಜ್ವಲ್ ರೇವಣ್ಣ ಅವರಿಗಿಂತ ಅದರ ಬಗ್ಗೆ ಮಾತನಾಡಿದವರೇ ದೊಡ್ಡ ಆರೋಪಿ ಎಂಬAತಾಗಿದೆ. ಈ ಕಾರಣಕ್ಕೆ ಕಾಂಗ್ರೆಸ್ ಈ ವಿಷಯದಲ್ಲಿ ಮೌನವಹಿಸಲು ನಿರ್ಧರಿಸಿದೆ.

ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಮತ್ತು ಮಾಜಿ ಸಚಿವ ರೇವಣ್ಣ ಮೇಲೆ ಗಂಭೀರ ಆರೋಪಗಳು ಕೇಳಿಬಂದಿವೆ. ಆದರೆ, ಪೆನ್‌ಡ್ರೆöÊವ್ ಹಂಚಿಕೆಯ ಕುರಿತು ಕಾಂಗ್ರೆಸ್ ನಾಯಕರ ಎಂಟ್ರಿ ಇದೀಗ ಪ್ರಕರಣದ ದಿಕ್ಕು ತಪ್ಪುವಂತೆ ಮಾಡುತ್ತಿದೆ. ಪ್ರಜ್ವಲ್ ಪ್ರಕರಣದಿಂದ ಸಹಜವಾಗಿಯೇ ಜೆಡಿಎಸ್ ಮತ್ತು ಬಿಜೆಪಿಗೆ ಮುಜುಗರ ಉಂಟಾಗಿತ್ತು. ಹೀಗಾಗಿಯೇ, ಬಿಜೆಪಿ ನಾಯಕರು ಪೆನ್‌ಡ್ರೆöÊವ್ ಪ್ರಕರಣದಲ್ಲಿ ಪ್ರಜ್ವಲ್ ಪರ ವಹಿಸುವ ಪ್ರಶ್ನೆಯೇ ಇಲ್ಲ ಎಂದು ಖಂಡಾತುAಡವಾಗಿ ತಿಳಿಸಿದ್ದರು.

ಆದರೆ, ಪ್ರಕರಣ ಸಂಬAಧ ದೇವರಾಜೇಗೌಡ ಅವರ ಜತೆಗೆ ಮಾತುಕತೆ ನಡೆಸಿದ ಎಲ್.ಆರ್ ಶಿವರಾಮೇಗೌಡ ಇಡೀ, ಪ್ರಕರಣದ ದಿಕ್ಕನ್ನೇ ಬದಲಾಯಿಸಿದದು, ಒಂದೂವರೆ ನಿಮಿಷ ಅದರಲ್ಲಿ ಮಾತನಾಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಇದೀಗ ಸಮಾಜದ ದೃಷ್ಟಿಯಲ್ಲಿ ವಿಲನ್ ಆಗುವಂತೆ ಮಾಡುತ್ತಿದೆ. ಡಿಕೆಶಿ ಶಿವಕುಮಾರ್ ರಾಜಕೀಯ ದ್ವೇಷದಿಂದಲೇ ದೊಡ್ಡಗೌಡರ ಕುಟುಂಬದ ಮಾನ ಮರ್ಯಾದೆಯನ್ನು ಬೀದಿಗೆ ತಂದರು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಮೂಡುವಂತೆ ಮಾಡಿದೆ.

ಈ ಅಂಶಗಳು ಬರಬರುತ್ತಾ ಕಾಂಗ್ರೆಸ್ ಮೇಲೆ ಜನರಿಗೆ ಅಸಹನೆ ಮೂಡುವಂತೆ ಮಾಡಬಹುದು. ನಾವು ಒಂದು ವರ್ಷದ ಅಧಿಕಾರವಧಿಯಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದ್ದೇವೆ. ಗ್ಯಾರಂಟಿ ಯೋಜನೆಗಳ ಮೂಲಕ ನಾಡಿನ ಬಡವರು, ಮಧ್ಯಮವರ್ಗದವರ ಮನಗೆದ್ದಿದ್ದೇವೆ. ಆದರೆ, ಯಾರೋ ತಪ್ಪು ಮಾಡಿರುವ ವಿಷಯಗಳಿಗೆ ಮಧ್ಯಪ್ರವೇಶ ಮಾಡಿ, ಪಕ್ಷದ ವರ್ಚಸ್ಸು ಹಾಳು ಮಾಡಿಕೊಳ್ಳುವುದು ಭೇಡ ಎಂದು ಕಾಂಗ್ರೆಸ್‌ನ ಕೆಲವು ನಾಯಕರು ಡಿಕೆಶಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಸ್ವತಃ ಸಿಎಂ ಸಿದ್ದರಾಮಯ್ಯ ಅವರು ಕೂಡ ಡಿಕೆಶಿವಕುಮಾರ್ ಅವರಿಗೆ, ಪೆನ್ ಡ್ರೆöÊವ್ ವಿಚಾರದಲ್ಲಿ ಸುಮ್ಮನೆ ಮಾತನಾಡುವುದು ಬೇಡ, ಏನೇ ಟೀಕೆಗಳನ್ನು ಮಾಡಿಕೊಂಡರೂ ಪ್ರತಿಕ್ರಿಯೆ ಕೊಡಲು ಹೋಗಬೇಡಿ, ಗೃಹ ಸಚಿವರು ಮತ್ತು ಸಂಬAಧಪಟ್ಟ ಸಚಿವರು ಮಾತ್ರವೇ ಈ ಕುರಿತು ಪ್ರತಿಕ್ರಿಯೆ ನೀಡಲಿ, ಇಲ್ಲವಾದಲ್ಲಿ ಸುಖಾಸುಮ್ಮನೆ ವಿವಾದ ಬೇರೆ ದಿಕ್ಕಿಗೆ ತಿರುಗುತ್ತದೆ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ, ಶಿವಕುಮಾರ್ ಪೆನ್ ಡ್ರೆöÊವ್ ವಿಚಾರದಲ್ಲಿ ಸೈಲೆಂಟ್ ಆಗಿದ್ದಾರೆ ಎನ್ನಬಹುದು.

ಪ್ರಕರಣದ ಕುರಿತು, ನೆನ್ನೆಯೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿಷಾಧ ವ್ಯಕ್ತಪಡಿಸಿದ್ದಾರೆ. ಪ್ರಜ್ವಲ್‌ಗೆ ಬಂದು ಶರಣಾಗುವಂತೆ ಮನವಿಯನ್ನು ಮಾಡಿಕೊಂಡಿದ್ದಾರೆ, ಈ ನಡುವೆ ಕಾಂಗ್ರೆಸ್ ನಾಯಕರು ಸುಮ್ಮಸುಮ್ಮನೆ ಮಾತನಾಡಿ, ಅದನ್ನು ತಮ್ಮ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಶಿವೆರಾಮೇಗೌಡ ಅವರು ಮಾಜಿ ಪ್ರಧಾನಿ ದೇವೇಗೌಡರ ಸಾವಿನ ಬಗ್ಗೆ ಮಾತನ್ನಾಡಿದ್ದು, ಜೆಡಿಎಸ್ ಮತ್ತು ಗೌಡರ ಕುಟುಂಬದ ಬಗ್ಗೆ ಒಕ್ಕಲಿಗ ಸಮುದಾಯದಲ್ಲಿ ಅನುಕಂಪ ಬರುವಂತೆ ಮಾಡುತ್ತಿದೆ. ಹೀಗಾಗಿ, ಮಾತು ಕಡಿಮೆ ಮಾಡುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.


Share It

You cannot copy content of this page