ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಈಗಾಲೇ ಅನೇಕ ಸಮಸ್ಯೆಗಳಾಗುತ್ತಿದ್ದು, ಮುಂದೆ ಮಳೆ ಹೆಚ್ಚಾದರೆ, ಮತ್ತಷ್ಟು ಹೆಚ್ಚಿನ ಅನಾಹುತಗಳಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮಗಳನ್ನು ವೀಕ್ಷಣೆ ಮಾಡಲು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ನಗರದ ಪ್ರದಕ್ಷಿಣೆ ಹಮ್ಮಿಕೊಳ್ಳಲಿದ್ದಾರೆ.
ಈಗಾಗಲೇ ಮಳೆಹಾನಿ ಉಂಟುಮಾಡಿರುವ ಪ್ರದೇಶಗಳು, ಮಳೆ ಹಾನಿಗೆ ತುತ್ತಾಗಬಹುದಾದ ಪ್ರದೇಶಗಳಲ್ಲಿ ಸಿಎಂ ಸಿದ್ದರಾಮಯ್ಯ ರೌಂಡ್ಸ್ ಮಾಡಲಿದ್ದಾರೆ. ಮಳೆ ಹಾನಿ ತಪ್ಪಿಸಲು ಆಯಾಯ ಪ್ರದೇಶಗಳಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಸಿಎಂ ಪರಿಶೀಲನೆ ನಡಸಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಯಲ್ಲಿ ನಗರದ ಕೆಲವು ಸಚಿವರು, ಶಾಸಕರು ಮತ್ತು ಬಿಬಿಎಂಪಿ, ಜಲಮಂಡಳಿ, ಬಿಡಿಎ, ಬೆಸ್ಕಾಂ ಸೇರಿದಂತೆ ಅನೇಕ ಇಲಾಖೆಗಳ ಅಧಿಕಾರಿಗಳು ಸಿಎಂ ಜತೆಗೆ ಸಿಟಿ ರೌಂಡ್ಸ್ ಮಾಡಲಿದ್ದಾರೆ. ನೆನ್ನೇ ತಾನೆ ಡಿಸಿಎಂ ಡಿ.ಕೆ.ಶಿವಕುಮಾರ್ ನಗರ ಪ್ರದಕ್ಷಿಣೆ ಮಾಡಿ, ಪರಿಶೀಲನೆ ನಡಸಿದ್ದರು. ಇದೀಗ ಸಿಎಂ ನಾಳೆ ನಗರದ ಪ್ರದಕ್ಷಿಣೆ ಮಾಡುವ ಮೂಲಕ ಮಳೆ ಹಾನಿ ಕುಗ್ಗಿಸುವ ಮುಂಜಾಗೃತಾ ಕ್ರಮಗಳ ವೀಕ್ಷಣೆ ಮಾಡಲಿದ್ದಾರೆ.