ಅಪರಾಧ ರಾಜಕೀಯ ಸುದ್ದಿ

ಹಿಂದೂ ಸಂಘಟನೆಗಳ ಅಬ್ಬರ: ಪಟ್ಟಣದಲ್ಲಿ ಕಟ್ಟೆಚ್ಚರ

Share It


ಚನ್ನಗಿರಿ: ಘಟನೆಗೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳು ಪ್ರತಿಭಟನೆ ಆರಂಭಿಸಿದ್ದು, ಪೊಲೀಸ್ ಠಾಣೆ ಮೇಲೆ ಕಲ್ಲು ತಊರಾಟ ನಡೆಸಿರುವ ಕ್ರಮವನ್ನು ಖಂಡಿಸಿ, ಪ್ರತಿಭಟನೆ ಹಮ್ಮಿಕೊಂಡಿವೆ.

ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಪಟ್ಟಣದ ಆಂಜನೇಯ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿರುವ ಹಿಂದೂ ಕಾರ್ಯಕರ್ತರು ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ, ಘಟನೆಯನ್ನು ಖಂಡಿಸಿದ್ದಾರೆ.

ಪೊಲೀಸ್ ಅಧಿಕಾರಿಗಳ ಅಮಾನತು: ಚನ್ನಗಿರಿ ಪೊಲೀಸ್ ಠಾಣೆಯಲ್ಲಿನ ಲಾಕಪ್ ಡೆತ್ ಆರೋಪಕ್ಕೆ ಸಂಬಂಧಿಸಿ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ಸರಕಾರ ಅಧಿಕೃತ ಆದೇಶ ಹೊರಡಿಸಿದೆ.

ಮೇ.೨೪ರಂದು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಆದಿಲ್ ಎಂಬ ಮಟ್ಕಾ ಆರೋಪಿಯ ಸಾವು ಸಂಭವಿಸಿತ್ತು. ಇದನ್ನು ಕುಟುಂಬಸ್ಥರು ಲಾಕಪ್ ಡೆತ್ ಎಂದು ಆಋಓಪಿಸಿದ್ದರು. ಆದರೆ, ಆತನಿಗೆ ಮೂರ್ಛೆ ರೋಗವಿದ್ದು, ಠಾಣೆಗೆ ಬಂದು ಐದು ನಿಮಿಷದಲ್ಲೇ ಆತನ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದರು.

ಘಟನೆಯಿಂದ ಉದ್ರಿಕ್ತರಾಗಿದ್ದ ಗುಂಪು ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿ, ದಾಂಧಲೆ ಸೃಷ್ಟಿಸಿದ್ದರು. ಇದೀಗ ಆ ಪ್ರಕರಣದಲ್ಲಿ ಕರ್ತವ್ಯಲೋಪದ ಆಧಾರದ ಮೇಲೆ ಡಿವೈಎಸ್‌ಪಿ ಮುನ್ನೋಳ್ಳಿ ಇನ್ಸ್ಪೆಕ್ಟರ್ ಬಿ.ನಿರಂಜನ್ ಹಾಗೂ ಠಾಣೆಯ ಸಬ್ ಇನ್ಸ್ಪೆಕ್ಟರ್ ಆಕ್ತರ್ ಅವರನ್ನು ಅಮಾನತು ಮಾಡಿ ಆದೇಶ ಮಾಡಲಾಗಿದೆ.

ಚನ್ನಗಿರಿಗೆ ಸಿಐಡಿ ಅಧಿಕಾರಿಗಳು:

ಪ್ರಕರಣವನ್ನು ಸಿಐಡಿ ತನಿಖೆಗೆ ಸರಕಾರ ವಹಿಸಿರುವ ಕಾರಣ, ಚನ್ನಗಿರಿ ಪೊಲೀಸ್ ಠಾಣೆಗೆ ಸಿಐಡಿ ಅದಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಾಕಪ್ ಡೆತ್ ಅಲ್ಲವೋ ಹೌದೋ? ಎಂಬ ವಿಚಾರ ಒಂದು ಕಡೆಯಾದರೆ, ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ, ೨೫ ಜನರ ಮೇಲೆ ವಿಚಾರಣೆ ಮತ್ತೊಂದು ಕಡೆ ನಡೆಯಬೇಕಿದೆ.



Share It

You cannot copy content of this page