ಉಪಯುಕ್ತ ಸುದ್ದಿ

ಕಂಪ್ಯೂಟರ್ ಗಿಂತಲೂ ಮುದ್ದಾಗಿರುತ್ತೆ ಈಕೆಯ ಕೈಬರಹ

Share It

ಅಬ್ಬಾ ! ಎಷ್ಟು ಚಂದ ಬರಿತಾಳೆ!! ಇವಳ ಬರಹಕ್ಕೆ ಸೋಲದ ಮನಸ್ಸಿಲ್ಲ!!

ಬರೆದರೆ ಮುತ್ತಿನ ಹಾರದಂತಿರಬೇಕು ಎಂಬ ಮಾತನ್ನು ನಾವು ಕೇಳಿರುತ್ತೇವೆ. ಬರೆವಣಿಗೆಯಲ್ಲಿ ಅಕ್ಷರಗಳು ಗುಂಡಗೆ, ಒಂದೇ ಅಳತೆಯಲ್ಲಿ ಬರೆಯುವುದು ಒಂದು ಕಲೆ. ಕಂಪ್ಯೂಟರ್ ನಲ್ಲಿ ಅಕ್ಷರಗಳು ಇರುವಂತೆ ಇಲ್ಲೊಬ್ಬ ಹುಡುಗಿ ಕೈ ಯಲ್ಲಿ ಬರೆಯುತ್ತಾಳೆ. ಅವಳ ಬರೆವಣಿಗೆ ನೋಡಿದರೆ ನೀವು ಖಂಡಿತ ಅಚ್ಚರಿಗೊಳಗಾಗುತ್ತಿರ.

ಬರೆವಣಿಗೆ ತುಂಬಾ ಚೆನ್ನಾಗಿ ಮಾಡಲೆಂದು ಶಾಲೆಗಳಲ್ಲಿ ಕಾಪಿ ಪುಸ್ತಕ ಬರೆಸುತ್ತಾರೆ. ಆದರೆ ಕೆಲವರು ಗುಂಡಗೆ ಬರೆದರೆ ಕೆಲವರು ವಕ್ರವಾಗಿ ಬರೆಯುತ್ತಾರೆ. ನೋಡಿದರೆ ಬೇಸರ ತರುವ ರೀತಿ ಬರೆವಣಿಗೆ ಮಾಡುತ್ತಾರೆ. ಬರವಣಿಗೆ ಕಲೆ ಎಲ್ಲರಿಗೂ ಬರುವಂತದ್ದಲ್ಲ. ಕೆಲವರು ಬರೆದದ್ದು ಓದುವುದಕ್ಕೂ ಆಗುವುದಿಲ್ಲ. ಇನ್ನು ಕೆಲವರು ಬರೆದದ್ದು ನೋಡುವುದೇ ಒಂದು ಖುಷಿ. ಆದ್ರೆ ಇದನ್ನೆಲ್ಲ ಮೀರಿ ಸುಂದರವಾಗಿ ಬರೆಯುವ ಮುದ್ದು ಮುದ್ದಾಗಿ ಬರೆಯುವ ಯುವತಿಯೊಬ್ಬಳು ಇದ್ದಾಳೆ. ಅವಳ ಬರೆವಣಿಗೆ ನೋಡಿದ್ರೆ ನೀವು ಅಚ್ಚರಿಗೆ ಒಳಗಾಗುವುದು ಖಂಡಿತ .

ಹೌದು. ಭಾರತದ ಪಕ್ಕದ ದೇಶವಾದ ನೇಪಾಳದ ಮುದ್ದಾದ 16 ವರ್ಷದ ಪ್ರಕೃತಿ ಮಲ್ಲ ಎಂಬ ಯುವತಿಯ ಅಕ್ಷರಕ್ಕೆ ವಿಶ್ವವೇ ಸೋತಿದೆ. ಈಕೆ ಪೆನ್ ಅನ್ನು ಕೈಯಲ್ಲಿ ಹಿಡಿದರೆ ಸಾಕು ಸ್ವತಃ ಕಂಪ್ಯೂಟರ್ ಬರೆಯುತ್ತಿದೆ ಎನ್ನುವಂತೆ ಅಷ್ಟು ಅಚ್ಚುಕಟ್ಟಾಗಿ ಬರೆವಣಿಗೆ ಮಾಡುತ್ತಾಳೆ. ಆದ್ದರಿಂದಲೇ ವಿಶ್ವದ ಅತ್ಯುತ್ತಮ ಬರೆವಣಿಗೆಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾಳೆ.

ಪ್ರಕೃತಿ ಶಾಲೆಯಲ್ಲಿ 8 ನೇ ತರಗತಿಯ ಅಸೈನ್​ಮೆಂಟ್ ಬರೆದಿದ್ದಳು. ಅವಳು ಬರೆದ ಫೋಟೋ ಸೋಸಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುವ ಮೂಲಕ ಜಗತ್ತಿನ ಗಮನವನ್ನು ಸೆಳೆದಿದೆ.

ಕೈ ಬರಹಕ್ಕೆ ಉತ್ತಮ ಪುರಸ್ಕಾರ: ಪ್ರಕೃತಿ ಬರಹಕ್ಕೆ ನೇಪಾಳ ಸರಕಾರ ಆಯೋಜಿಸಿದ್ದ ಪೆನ್‌ಮ್ಯಾನ್‌ಶಿಪ್ ಎಂಬ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ತನ್ನದಾಗಿಸಿಕೊಂಡಿದ್ದಾಳೆ. ಜೊತೆಗೆ ಯುಎಇಯ 51 ನೇ ಸ್ಪಿರಿಟ್ ಆಫ್ ಯೂನಿಯನ್ ಯುಎಇ ಪ್ರಶಸ್ತಿ ನೀಡಿದೆ. ವಿಶ್ವದ ಅತ್ಯುತ್ತಮ ಕೈ ಬರಹಗಾರ್ತಿ ಎಂಬ ಕೀರ್ತಿಗೆ ಪ್ರಕೃತಿ ಭಾಜನವಾಗಿದ್ದಾಳೆ.

ಅವಳ ಬರಹ ಕಂಪ್ಯೂಟರ್ ರೀತಿಯೇ ಇದೆ. ಪ್ರತಿ ಪದದ ನಡುವೆ ಒಂದೇ ಅನಂತರ. ಜೊತೆಗೆ ಹೊಸ ಶೈಲಿಯ ಕ್ಯಾಲಿಗ್ರಫಿಯೊಂದಿಗೆ ಬರೆವಣಿಗೆ ಮಾಡುತ್ತಾಳೆ. ಅವಳು ಬರೆಯುವ ಸುಂದರವಾದ ಬರವಣಿಗೆಗೆ ನಿತ್ಯ 2 ಗಂಟೆ ಅಭ್ಯಾಸ ಮಾಡುತ್ತೇನೆ ಎಂದು ಹೇಳುತ್ತಾಳೆ.

ನಿಮ್ಮ ಕೈಬರಹ ಚೆನ್ನಾಗಿರಬೇಕಾದ್ರೆ ಹೀಗೆ ಅಭ್ಯಾಸ ಮಾಡಿ

ಚಿಕ್ಕವಯಸ್ಸಿನಲ್ಲೇ ಕೈ ಬರಹವನ್ನು ಬರೆಯಲು ಪೋಷಕರು ಕಲಿಸಬೇಕು. ದಿನಾಲೂ ಮಕ್ಕಳಿಗೆ ಕಾಫಿ ರೈಟಿಂಗ್ ಬರೆಸುವುದು ಉತ್ತಮ. ಮಕ್ಕಳಿಗೆ ಬೇರೆ ಆಸಕ್ತಿಗಳ ಜೊತೆ ಬರೆವಣಿಗೆಯಲ್ಲಿ ಆಸಕ್ತಿ ಮೂಡುವಂತೆ ಮಾಡಬೇಕು ಎನ್ನುತ್ತಾರೆ ತಜ್ಞರು. ಹೀಗೆ ಮಾಡುವುದರಿಂದ ನಮ್ಮ ಮಕ್ಕಳ ಬರೆವಣಿಗೆ ಸುಂದರವಾಗಿ ಕಾಣುತ್ತದೆ.


Share It

You cannot copy content of this page