ಕಲಬುರಗಿ: ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವ ಹಿನ್ನೆಲೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಕಲಬುರಗಿಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.
ಕಲಬುರಗಿ ನಗರದಲ್ಲಿ ಹಿಂದೂ ಜಾಗೃತಿ ಸೇನೆ ಸಂಘಟನೆಯ ನೇತೃತ್ವದಲ್ಲಿ ಹಿಂದು ಕಾರ್ಯಕರ್ತರು ಮೋದಿ ಅಭಿಮಾನಿಗಳು ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ನರೇಂದ್ರ ಮೋದಿ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ತಿನ್ನಿಸಿ, ಕೇಸರಿ ಬಣ್ಣ ಹಾರಿಸಿ ಜೈ ಭಾರತ್ ಮಾತಾ, ಜೈ ಶ್ರೀರಾಮ, ಜೈ ನರೇಂದ್ರ ಮೋದಿ ಎಂದು ಘೋಷಣೆ ಮೊಳಗಿಸಿ ವಿಜಯೋತ್ಸವ ಆಚರಣೆ ಮಾಡಿದರು.
ಪ್ರಧಾನಿ ಮೋದಿ ಅವರು ಅಧಿಕಾರ ಸ್ವೀಕಾರ ಮಾಡುತ್ತಿರುವುದು ಭಾರತ ದೇಶವಲ್ಲ ಇಡಿ ವಿಶ್ವವೇ ಖುಷಿ ಪಡುತ್ತಿದೆ. ಚುನಾವಣೆಗೆ ನರೆಂದ್ರ ಮೋದಿ ಅವರನ್ನು ಅಧಿಕಾರಿದಿಂದ ಕೆಳಗಿಳಿಸಲು ಸಾಕಷ್ಟು ಪ್ರಯತ್ನ ಪಟ್ಟರು ಆದರು ಸಹ ಅದು ಸಾಧ್ಯವಾಗಲಿಲ್ಲ. ಮತ್ತೆ ಮೋದಿ ಅವರು ಮೂರನೆ ಬಾರಿ ಪ್ರಧಾನಿಯಾಗಿ ಪಟ್ಟಕೇರುತ್ತಿರುವ ಅತ್ಯಂತ ಸಂತೋಷದ ಸಂಗತಿ ಎಂದರು ಹರ್ಷ ವ್ಯಕ್ತಪಡಿಸಿದರು.

