ನವದೆಹಲಿ: ಎನ್ಡಿಎ ಭಾಗವಾಗಿರುವ ಅಜಿತ್ ಪವಾರ್ ಬಣದ ಎನ್ಸಿಪಿಗೆ ಒಂದು ಸಚಿವ ಸ್ಥಾನ ನೀಡದಿರುವುದಕ್ಕೆ ಪ್ರಪುಲ್ ಪಟೇಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎನ್ಡಿಎ ಕಡಿಮೆ ಸ್ಥಾನಗಳನ್ನು ಪಡೆದಾಗಲೇ ಇಂಡಿಯಾ ಒಕ್ಕೂಟ ಸರಕಾರ ರಚನೆಗೆ ಸಣ್ಣದೊಂದು ಕಸರತ್ತು ನಡೆಸಿತ್ತು. ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಅವರನ್ನು ಸೆಳೆಯುವ ಪ್ರಯತ್ನವನ್ನು ಇಂಡಿಯಾ ಒಕ್ಕೂಟ ನಡೆಸಿತ್ತು. ಆದರೆ, ಈ ಇಬ್ಬರು ನಾಯಕರು ಎನ್ಡಿಎ ಪರ ಹೋಗುತ್ತಿದ್ದಂತೆ ಸುಮ್ಮನಾಗಿದ್ದರು.
ಇದೀಗ ಎನ್ಸಿಪಿ ಮೊದಲ ಹಂತದಲ್ಲಿಯೇ ಬೇಸರಗೊಂಡಿರುವುದು ಈ ಸಲದ ಎನ್ಡಿಎ ಒಕ್ಕೂಟದ ಸರಕಾರ ನಡೆಸುವುದು ಸುಲಭವಲ್ಲ ಎಂಬ ಸಂದೇಶ ಸಿಕ್ಕಂತಾಗಿದೆ. ಎನ್ಸಿಪಿ ಮುಂದಿನ ನಡೆಯೇನು ಎಂಬುದು ಇದೀಗ ಎನ್ಡಿಎ ಒಕ್ಕೂಟದ ಮೇಲೆ ಪರಿಣಾಮ ಬೀರಲಿದೆ.

