ನ್ಯೂಯಾರ್ಕ್: ವಿಶ್ವಕಪ್ ನಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಿದ ಭಾರತ ತಂಡ ಕಡಿಮೆ ಮೊತ್ತವನ್ನು ಡಿಫೆಂಡ್ ಮಾಡಿಕೊಂಡು ಗೆದ್ದು ಬೀಗಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ಪಾಕಿಸ್ತಾನ ಭಾರತದ ಬ್ಯಾಟಿಂಗ್ ಪಡೆಯನ್ನು119 ರನ್ ಗಳ ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವ ಮೂಲಕ ಸೋಲಿನ ಭೀತಿ ಸೃಷ್ಟಿಸಿತ್ತು. ಆದರೆ, ಅಷ್ಟು ಮೊತ್ತವನ್ನು ಕೊಡದಂತೆ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಭಾರತೀಯ ಬೌಲಿಂಗ್ ಪಡೆ, ಪಾಕಿಸ್ತಾನಕ್ಕೆ ಸೋಲುಣಿಸಿತು.
ಈ ಮೊತ್ತು ಭಾರತ ಈವರೆಗೆ ಡಿಫೆಂಡ್ ಮಾಡಿಕೊಂಡ ಅತ್ಯಂತ ಕಡಿಮೆ ಮೊತ್ತವಾಗಿದ್ದು ಇದೊಂದು ದಾಖಲೆಯಾಗಿದೆ. ಭಾರತದ ಬೌಲಿಂಗ್ ನಲ್ಲಿ ಜಸ್ಪ್ರೀತ್ ಬುಮ್ರಾ ಹದಿನಾಲ್ಕು ರನ್ ಕೊಟ್ಟು ಮೂರು ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ ಎರಡು ವಿಕೆಟ್ ಪಡೆದರು.
ಮಹಮದ್ ಸಿರಾಜ್, ಅಕ್ಷರ್ ಪಟೇಲ್ ಮತ್ತು ಹರ್ಷದೀಪ್ ಸಿಂಗ್ ಕೂಡ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ಮೂಲಕ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟರು.

