ಉಪಯುಕ್ತ ಸುದ್ದಿ

ಶಿವಮೊಗ್ಗ ಪೇಜಸ್ ಮೂಲಕ ಸಮಗ್ರ ಮಾಹಿತಿ ಬೆರಳ ತುದಿಯಲ್ಲಿ

Share It

ಶಿವಮೊಗ್ಗ : ಪೇಜಸ್ ಸಾಫ್ಟೊನಿಸ್ ಎನ್ನುವುದು ಡಿಜಿಟಲ್ ಮಾರ್ಕೆಟಿಂಗ್ ಸಂಸ್ಥೆಯಾಗಿದ್ದು, ಅಪ್ಲಿಕೇಶನ್ ಆಪ್ ಹೊಂದಿದೆ. ಇದು ಸ್ಟಾರ್ಟ್ಅಪ್ ಆಗಿದ್ದು ಶಿವಮೊಗ್ಗದಲ್ಲಿ ಕಚೇರಿಯನ್ನು ಹೊಂದಿದೆ. ಸದ್ಯದಲ್ಲೇ ಕರ್ನಾಟಕದ ಇತರ ನಗರಗಳಿಗೂ ವಿಸ್ತರಿಸಲಿದೆ. ಇದರ ಒಂದು ಉತ್ಪನ್ನ ಸಾಫ್ಟೊನಿಸ್ ಪೇಜಸ್ ಆಗಿದೆ. ಇದು ಶಿವಮೊಗ್ಗ ನಗರಕ್ಕೆ ಪ್ರತ್ಯೇಕವಾದ “ಶಿವಮೊಗ್ಗ ಪೇಜಸ್ ಸಮಗ್ರ ಮಾಹಿತಿ ಬೆರಳತುದಿಯಲ್ಲಿ ಹೊಂದಿದೆ ಎಂದು ಸಂಸ್ಥೆಯ ಮುಖ್ಯಸ್ಥೆ ಆಶಾ ಹೇಳಿದರು.

ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ನಗರವು ವಿಶ್ವಗ್ರಾಮದ ಅತಿಸಣ್ಣ ಭಾಗವೆಂದು ಪರಿಗಣಿಸಿರುವುದರಿಂದ ಎಲ್ಲಾ ಸಿಗುವಂತಾಗಬೇಕು. ಉದ್ಯಮಗಳನ್ನು ಡಿಜಿಟಲೈಸ್ ಮಾಡುವುದು. ಅದರ ಮೂಲಕ ಹೆಚ್ಚು ಜನರಿಗೆ ತಲುಪುವಂತೆ ಮಾಡುವುದು ಮತ್ತು ಹೆಚ್ಚು ಉದ್ಯಮ ಬೆಳೆಯುವಂತೆ ಮಾಡುವುದು ಉದ್ದೇಶವಾಗಿದೆ ಎಂದರು.

ಸಂಸ್ಥೆಯ ಧ್ಯೇಯ ವಾಕ್ಯ ರೀಚ್ ಮೋರ್ ಅರ್ನ್ ಮೋರ್ ಎನ್ನುವುದಾಗಿದೆ. ಸಾಫ್ಟೊನಿಸ್ ಫೇಜಸ್ ನಲ್ಲಿ ಶಿವಮೊಗ್ಗ ನಗರದ ಪ್ರತಿಯೊಂದು ಉದ್ಯಮ ಅಥವಾ ಸಂಸ್ಥೆಯ ಮೊಬೈಲ್ ಅಪ್ಲಿಕೇಶನ್ ಮೂಲಕ ಎಲ್ಲರಿಗೂ ತಲುಪುತ್ತದೆ. ಇದು ಪುಸ್ತಕ ತಿರುವಿದ ಅನುಭವ ನೀಡುತ್ತದೆ. ಇದರಲ್ಲಿ ಪರಿವಿಡಿ ಸಹ ಇರುತ್ತದೆ. ಜನರನ್ನು ತಮ್ಮತ್ತ ಸೆಳೆಯುವಂತೆ ಮಾಡುವ ಅವರ ಸಂಸ್ಥೆಯ, ಉದ್ಯಮದ ಅರ್ಧಪುಟಗಳಷ್ಟು ಜಾಹೀರಾತನ್ನು ಒಂದು ವರ್ಷ “ಸಾಫ್ಟೊನಿಸ್” ಉಚಿತವಾಗಿ ಪ್ರಕಟಿಸುತ್ತದೆ. ಅದರಲ್ಲಿ ಉದ್ಯಮದ, ಸಂಸ್ಥೆಯ ಹೆಸರು, ಭಾವಚಿ ಗೂಗಲ್ ಲೊಕೇಶನ್ ಮತ್ತು ಮೊಬೈಲ್ ನಂಬರ್ ಹಾಗೂ ಅವರು ನೀಡುವ ಜಾಹೀರಾತು ಸಹ ಇರುತ್ತದೆ. ಇದರ ಸಹಾಯದಿಂದ ಜನರು ಸಂಸ್ಥೆಯನ್ನು ನೇರವಾಗಿ ಸಂಪರ್ಕಿಸಬಹುದಾಗಿದೆ ಎಂದರು.

ಸಂಸ್ಥೆಯ, ಉದ್ದಿಮೆಯ ಉತ್ಪನ್ನಗಳ ಅಥವಾ ಸೇವೆಗಳ ಜಾಹೀರಾತನ್ನು ಇಲ್ಲಿಯೇ ಬೇರೆ-ಬೇರೆ ಡಿಸ್ಕೌಂಟ್ ಆಫರ್‌ಗಳನ್ನು ನೋಡಿ ಜನರು ಇವರ ಮಳಿಗೆಗೆ ಭೇಟಿ ನೀಡಬಹುದಾಗಿದೆ. ಇದರಿಂದ ಬಿಸಿನೆಸ್ ಸಹ ಜಾಸ್ತಿಯಾಗುತ್ತದೆ. ಆರಂಭದಲ್ಲಿಯೇ “ಸಾಫ್ಟೊನಿಸ್ ಫೇಜಸ್ ನಲ್ಲಿ ಒಂದು ಪುಟದ ಜಾಹೀರಾತು ಬಯಸಿದರೆ ರಿಯಾಯಿತಿ ನೀಡಲಾಗುವುದು. ಉದ್ಯಮದ ವೀಡಿಯೋಗಳಿದ್ದರೆ ಅದರ ಜಾಹೀರಾತನ್ನೂ ನೀಡುತ್ತೇವೆ. ಬ್ಲಿಂಕ್ ಅಗುವ ಜಾಗದಲ್ಲಿ ಮಾಡಿದರೆ ಜಾಹೀರಾತಿನ ವೀಡಿಯೋ ಓಪನ್ ಆಗುತ್ತದೆ. ಈ ರೀತಿಯಾಗಿ ಜಾಹೀರಾತು ಜನಪ್ರಿಯವಾಗುತ್ತದೆ. ಡಿಜಿಟಲ್ ಮಾರ್ಕೆಟಿಂಗ್ ಬಳಸಿಕೊಳ್ಳುತ್ತೇವೆ. ಶಿವಮೊಗ್ಗದಲ್ಲಿ ಗೂಗಲ್ ಅಥವಾ ಕ್ರೋಮ್ ಮೂಲಕ ಜನರ ಯಾವುದಕ್ಕಾದರೂ ಹುಡುಕಾಡಿದರೆ ಕಾಣುವಂತಹ ವ್ಯವಸ್ಥೆಯಾಗುತ್ತದೆ. “ಸಾಫೊನಿಸ್ ಫೇಜಸ್” ಪ್ರತಿದಿನವೂ ಅಪ್‌ಡೇಟ್ ಆಗುತ್ತಿರುತ್ತದೆ ಎಂದರು.

ಬಾಕ್ಸ್
ಪೋಟೋ/ವೀಡಿಯೋಗ್ರಾಫರ್, ಕಾರ್ಪೆಂಟರ್, ಕಂಪ್ಯೂಟರ್ ಆಪರೇಟರ್, ಪ್ಲಂಬರ್ಸ್, ಎಲೆಕ್ನಿಷಿಯನ್, ಇತರರು ತಮ್ಮ ಹೆಸರು, ತಮ್ಮ ಕೆಲಸ, ಮೊಬೈಲ್ ನಂಬರ್, ವಿಳಾಸ ಮತ್ತು ಪೋಟೋವನ್ನು ನೀಡುವ ಮೂಲಕ ತಮ್ಮ ಹೆಸರನ್ನು ಸಾಫ್ಟೋನಿಕ್ ಪೇಜಿನಲ್ಲಿ ನೋಂದಾಯಿಸಿಕೊಳ್ಳಬಹುದು. ಅವರ ಅವಶ್ಯಕತೆ ಇರುವವರು ಅವರ ಮೊಬೈಲ್ ಮೂಲಕ ನೇರವಾಗಿ ಯಾವ ಮಧ್ಯವರ್ತಿಯ ಸಹಾಯವಿಲ್ಲದೇ ಪಡೆಯಬಹುದು. ಶಿವಮೊಗ್ಗ ನಗರದಲ್ಲಿ ಲಭ್ಯವಿರುವ ಎಲ್ಲಾ ರೀತಿಯ ಸೇವೆಗಳ ಬಗ್ಗೆ ತಿಳಿಸುತ್ತದೆ. ಆಸ್ಪತ್ರೆಗಳು, ಆಂಬ್ಯೂಲೆನ್ಸ್, ಅಗ್ನಿಶಾಮಕದಳ, ಪೊಲೀಸ್ ಮುಂತಾದ ಅತ್ಯಾವಶ್ಯಕ ಸೇವೆಗಳ ಸಂಪರ್ಕ ಸಂಖ್ಯೆ ಮತ್ತು ಮಾಹಿತಿಯನ್ನು ಹೊಂದಿರುತ್ತದೆ.

ಶಿವಮೊಗ್ಗದಲ್ಲಿ ಉದ್ಯಮ/ಸಂಸ್ಥೆ ಹೊಂದಿರುವವರು ತಮಗೆ ಬೇಕಾದ ಕೆಲಸಗಾರರ ಮಾಹಿತಿಯನ್ನು ಸಾಫ್ಟೊನಿಸ್ ಪೇಜಸ್’ನಲ್ಲಿ ಇರುವ ಗೂಗಲ್ ಫಾರಂ ಭರ್ತಿ ಮಾಡಿ ಕಳುಹಿಸುವ ಮೂಲಕ ಇಲ್ಲಿ ಉಚಿತವಾಗಿ ನೀಡಬಹುದು. ಅದನ್ನು ನೋಡಿದ ಜನರು ತಮ್ಮ ನೌಕರಿಗಾಗಿ ಯಾವುದೇ ಮಧ್ಯವರ್ತಿಯ ಸಹಾಯವಿಲ್ಲದೇ ಕೆಲಸದ ಜಾಹೀರಾತು ನೀಡಿದ ಸ೦ಸ್ಥೆಯನ್ನು ನೇರವಾಗಿ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ ೮೪೩೧೧೨೨೬೯೧ ಸಂಪರ್ಕಿಸಬಹುದು.


Share It

You cannot copy content of this page