ರಾಜಕೀಯ ಸುದ್ದಿ

ಇಂಧನ ಬೆಲೆ ಏರಿಕೆ ಖಂಡಿಸಿ ಜೂ.20ಕ್ಕೆ ರಾಜ್ಯಾದ್ಯಂತ ಪ್ರತಿಭಟನೆ

Share It

ತುಮಕೂರು : ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತುಮಕೂರಿನ ಸಿದ್ದಗಂಗಾ ಮಠಕ್ಕೆ ಇಂದು ಭೇಟಿ ನೀಡಿದರು. ಶ್ರೀ ಗಳಿಂದ ಆಶೀರ್ವಾದ ಪಡೆದು ಮಾಧ್ಯಮಗಳೊಂದಿಗೆ ಮಾತನಾಡಿದರು.

‘ಈಗಾಗಲೇ ನೆನ್ನೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಸಲಾಗಿದೆ. ಇದೇ ಜೂನ್ 20 ರಂದು ರಸ್ತೆ ರೋಖೋ ಚಳುವಳಿಗೆ ಚಾಲನೆ ನೀಡುತ್ತೇವೆ. ನಾವು ಹೋರಾಟದಲ್ಲಿ ನಿರತರಾಗಿದ್ದಾರೆ, ಮುಖ್ಯಮಂತ್ರಿಯವರು ಕೇಂದ್ರ ಸರ್ಕಾರವನ್ನು ದೂರುವ ಕೆಲಸ ಮಾಡುತ್ತಿದ್ದರು. ಅವರ ತಪ್ಪನ್ನು ಮುಚ್ಚಿಹಾಕಲು ಪ್ರಯತ್ನ ಪಡುತ್ತಿದ್ದಾರೆ’ ಎಂದು ವಾಗ್ವಾದ ನಡೆಸಿದರು.

ಈಗಾಗಲೇ ರಾಜ್ಯದಲ್ಲಿ ಅಬಕಾರಿ ದರ, ಹಾಲಿನ ದರ, ವಿದ್ಯುತ್ ದರ ಗಳನ್ನೂ ಏರಿಕೆ ಮಾಡಿದ್ದಾರೆ. ಇದರಿಂದ ಸರ್ಕಾರದ ಆದಾಯ ಕೂಡ ಜಾಸ್ತಿಯಾಗಿದೆ. ಸಂಗ್ರಹಿಸಿದ ಆದಾಯ ಎಲ್ಲಿ ಶೇಖರಣೆಯಾಗುತ್ತಿದೆ ಎಂದರು.

ಮುಖ್ಯಮಂತ್ರಿಗಳೇ ನೈತಿಕತೆ ಇದ್ಯ ನಿಮಗೆ?

ವಾಲ್ಮೀಕಿ ನಿಗಮ ಅಡಿಯಲ್ಲಿ ನೂರಾರು ಕೋಟಿ ಹಣ ಆಂಧ್ರಕ್ಕೆ ಹೋಗಿದೆ. ಆಂಧ್ರದ ಚುನಾವಣೆಯಲ್ಲಿ ಈ ಹಣ ಚೆನ್ನಾಗಿ ಬಳಕೆಯಾಗಿದೆ. ನಿಮಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇದ್ಯ ಎಂದು ಪ್ರಶ್ನಿಸಿದರು. ನೀವು ಇಂಧನದ ಬೆಲೆ ಹೆಚ್ಚು ಮಾಡಿರುವುದು ರೈತರ ಮೇಲೆ ಪ್ರಭಾವ ಬೀರುತ್ತದೆ. ಇದು ರೈತರ ಮೇಲೆ ಒತ್ತಡ ಆಗಲ್ವಾ. ತೆರಿಗೆ ಸಂಗ್ರಹವೇ ಮುಖ್ಯ ಅಲ್ಲ. ಇದು ಜನರಿಗೆ ಹೊರೆಯಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಏನೇನು ಅಭಿವೃದ್ಧಿ ಇಲ್ಲ:

ನೀವು ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಏನೂ ಅಭಿವೃದ್ಧಿ ಆಗಿಲ್ಲ. ಆದ್ರೆ ಕೇಂದ್ರ ಸರ್ಕಾರ ಹಣ ಕೊಟ್ಟಿಲ್ಲ ಅಂತ ಮಾತ್ರ ಹೇಳಿಕೆ ಕೊಡ್ತೀರಾ. ನಮ್ಮ ಸರ್ಕಾರ ಅಧಿಕಾರ ನೀಡುವ ಮುನ್ನ ಆದಾಯ ಅಧಿಕವಿತ್ತು. ಇಗ ಇಲ್ಲ ಅಂತ ಹೇಳುತ್ತೀರಾ. ಈಗ ರಾಜ್ಯ ಆರ್ಥಿಕ ಇಕ್ಕಟ್ಟಿನಲ್ಲಿ ಸಿಲುಕಿದೆ. ಅನುಭವಿ ಮುಖ್ಯಮಂತಿಗಳಿದ್ದೀರಾ. ರಾಜಕಾರಣ ಬಿಟ್ಟು ಜನರಿಗೆ ಒತ್ತಡ ತರುವ ನಿರ್ಧಾರಗಳನ್ನು ಬದಲಿಸಿಕೊಳ್ಳಿ ಎಂದು ಹೇಳಿದರು.


Share It

You cannot copy content of this page