ಬೆಂಗಳೂರು: ರೇಣುಕಾ ಸ್ವಾಮಿ ಕಿಡ್ನಾಪ್ ಪ್ರಕರಣದಲ್ಲಿ ಶರಣಾಗಿರುವ ಚಾಲಕ ರವಿಗೆ ಡಿ ಗ್ಯಾಂಗ್ ಕೊಲೆ ಪ್ರಕರಣ ಒಪ್ಪಿಕೊಂಡು ಶರಣಾಗುವಂತೆ ಆಫರ್ ನೀಡಿದ್ದರು ಎನ್ನಲಾಗಿದೆ.
ಕಾರು ಚಾಲಕ ರವಿ, ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ಜತೆ ಕಾರಿನಲ್ಲಿ ರೇಣುಕಾ ಸ್ವಾಮಿಯನ್ನು ಕರೆದುತಂದಿದ್ದರು. ಆದರೆ, ಅವರ ಕೊಲೆ ನಡೆದಿದ್ದು, ಆನಂತರ ಆತನನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡು ಶರಣಾಗುವಂತೆ ತಿಳಿಸಿದ್ದರು.
ಶರಣಾಗಲು ಚಾಲಕ ರವಿಗೆ ಆಮೀಷ ಒಡ್ಡಲಾಗಿತ್ತು. ಹಣ ಕೊಡುವ ಆಸೆ ತೋರಿಸಿದ್ದ ಆರೋಪಿ ಅನಿಲ್ ಎಂಬಾತ, ರಾಘವೇಂದ್ರ ಕೂಡ ಶರಣಾಗುತ್ತಿದ್ದು, ನೀನು ಆತನ ಜತೆಗೆ ಶರಣಾಗು. ನಿನ್ನ ಕುಟುಂಬಕ್ಕೆ ನಿನ್ನ ಪಾಲಿನ ಹಣ ಸಂದಾಯ ಮಾಡುತ್ತೇವೆ. ನಿನ್ನನ್ನು ಪ್ರಕರಣದಿಂದ ಆಚೆ ತರುವ ಕೆಲಸವನ್ನು ಮಾಡುತ್ತೇವೆ ಎಂದು ತಿಳಿಸಿದ್ದರು.
ಅಪಾಯದ ಮನ್ಸೂಚನೆ ಅರಿತ ಚಾಲಕ, ರವಿ, ನನಗೆ ಹಣ ಬೇಡ, ನಾನು ಶರಣಾಗುವುದಿಲ್ಲ. ನನ್ನನ್ನು ಬಿಟ್ಟುಬಿಡಿ ಎಂದು ಹೇಳಿ ತನ್ನ ಬಾಡಿಗೆ ಹಣವನ್ನಷ್ಟೇ ಪಡೆದುಕೊಂಡು ವಾಪಸ್ ಊರಿಗೆ ಹೋಗಿದ್ದ. ಆದರೆ, ಮರುದಿನ ಆತನಿಗೆ ಕೊಲೆ ಪ್ರಕರಣದಲ್ಲಿ ತನ್ನ ಹೆಸರು ಕೂಡ ಇರುವುದು ಗೊತ್ತಾಗಿ ಪೊಲೀಸರ ಮುಂದೆ ಶರಣಾಗಿದ್ದಾನೆ.

