ರಾಜಕೀಯ ಸುದ್ದಿ

ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ದಿವಾಳಿ: ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ

Share It

ನವಲಗುಂದ: ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳಿಗೆ ಹಣ ಹೊಂದಿಸಲು ಎಲ್ಲಾ ಇಲಾಖೆ ಅನುದಾನವನ್ನು ಕಡಿತಗೋಳಿಸಿ ಹೆಚ್ಚುವರಿ ಸಾಲ ಮಾಡಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ದಿವಾಳಿ ಹಂತಕ್ಕೆ ತಂದು ನಿಲ್ಲಿಸಿದೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ಅವರು ಪಟ್ಟಣದ ಲಿಂಗರಾಜ ವೃತ್ತದ ಬಳಿ ಇರುವ ರೈತ ಭವನಕ್ಕೆ ಮಾಲಾರ್ಪಣೆ ಮಾಡಿ, ನೀಲಮ್ಮನ ಕೆರೆ ಮುಂಭಾಗದಲ್ಲಿ ಹೆದ್ದಾರಿ ತಡೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರು ನಂತರ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಎಸ್ಸಿ, ಎಸ್.ಟಿ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಸಹಿತ ಕಿತ್ತುಕೊಂಡು ಆ ಸಮುದಾಯಕ್ಕೆ ಮೋಸ ಮಾಡಿದೆ ಆದರೂ ಸಾಲದೇ ಇವತ್ತು ದಿಢೀರನೇ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ಆದ್ದರಿಂದ ರಾಜ್ಯಪಾಲರು ತಕ್ಷಣವೇ ಮಧ್ಯ ಪ್ರವೇಶಿಸಿ ಬೆಲೆ ಏರಿಕೆಯನ್ನು ಹಿಂಪಡೆಯುವಂತೆ ಸರ್ಕಾರಕ್ಕೆ ಸೂಚಿಸಬೇಕು ಮತ್ತು ಸರ್ಕಾರ ತಮ್ಮ ಸೂಚನೆಯನ್ನು ಪಾಲಿಸಿದಿದ್ದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಉಗ್ರವಾದ ಹೋರಾಟ ಮಾಡುವುದು ಅನಿವಾರ್ಯ ಎಂದು ಆಗ್ರಹ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಿದ್ದನಗೌಡ ಪಾಟೀಲ, ಆನಂದ ಜಕ್ಕನಗೌಡ್ರ, ಮುತ್ತಣ್ಣ ಮನಮಿ, ಸಿದ್ದಣ್ಣ ಕಿಟಗೇರಿ, ಮೃತ್ಯುಂಜಯ ಹಿರೇಮಠ, ದೇವರಾಜ್ ದಾಡಿಬಾವಿ,ಅಣ್ಣಪ್ಪ ಬಾಗಿ, ಈರಣ್ಣ ಹಸಬಿ, ಬಸವರಾಜ ಕಾತರಕಿ
ರವಿಕುಮಾರ ಸವದತ್ತಿ ಇದ್ದರು.


Share It

You cannot copy content of this page