ಅಪರಾಧ ಸಿನಿಮಾ ಸುದ್ದಿ

ಹೆಂಡ್ತಿಗೆ ಸಿಕ್ಕಿದ್ದೆಲ್ಲ ನಂಗೂ ಬೇಕು: ವಿಜಯಲಕ್ಷ್ಮಿ ವಿರುದ್ಧ ಹಠಕ್ಕೆ ಬಿದ್ದಿದ್ರಂತೆ ಪವಿತ್ರಾ ಗೌಡ

Share It

ಬೆಂಗಳೂರು:ದರ್ಶನ್ ಪತ್ನಿ ವಿಜಯಲಕ್ಷ್ಮಿ ಯಾವ್ ರೀತಿ ಇರ್ತಾರೋ ನಾನು ಹಾಗೆಯೇ ಇರಬೇಕು ಎಂಬ ಖಯಾಲಿ ಪವಿತ್ರಾ ಗೌಡಗಿತ್ತು. ಇಂತಹ ಹಠವೇ ಅನಾಹುತಗಳಿಗೆ ಕಾರಣವಾಗಿತ್ತು ಎಂದು ಹೇಳಲಾಗ್ತಿದೆ.

ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ಪವಿತ್ರಾ ಗೌಡ ನಡುವೆ ಅನೇಕ ಬಾರಿ ಜಗಳವಾಗಿತ್ತು. ಆಗ ಒಳ್ಳೆಯ ಮಾತಿನಲ್ಲಿ ನನ್ನ ಗಂಡನ ಸಹವಾಸಕ್ಕೆ ಬರಬೇಡ ಎಂದು ವಿಜಯಲಕ್ಷ್ಮಿ ಎಚ್ಚರಿಕೆ ನೀಡಿದ್ದರು.

ಇಷ್ಟೆಲ್ಲ ಬೆಳವಣಿಗೆ ನಡುವೆ ದರ್ಶನ್- ಪವಿತ್ರಾ ಸಂಬಂಧ ಗಾಢವಾಗಿತ್ತು. ಆದರೆ, ವಿಜಯಲಕ್ಷ್ಮಿ ದರ್ಶನ್ ಅವರಿಂದ ದೂರವಾಗಿರಲಿಲ್ಲ. ಹೀಗಾಗಿ, ದರ್ಶನ್, ವಿಜಯಲಕ್ಷ್ಮಿ ಅವರಿಗೆ ರೇಂಜ್ ರೋವರ್ ಕಾರು ಕೊಡಿಸಿದ್ದರು. ಹಠಕ್ಕೆ ಬಿದ್ದ ಪವಿತ್ರಾ ತಮಗೂ ರೇಂಜ್ ರೋವರ್ ಕಾರು ಕೊಡಿಸುವವರೆಗೆ ಹಠ ಹಿಡಿದಿದ್ದರು. ಕೊನೆಗೂ ಬಿಳಿ ಕಾರು ಖರೀದಿಸಿ ತಮ್ಮ ಲಕ್ಕಿ ನಂಬರ್ 777 ಪಡೆದಿದ್ದರು.

ವಿಜಯಲಕ್ಷ್ಮೀ ಅವರು ಕೆಲವು ಬಟ್ಟೆಗಳನ್ನು ಧರಿಸಿ, ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಹಂಚಿಕೊಂಡರೇ, ಎರಡೇ ದಿನದಲ್ಲಿ ಅದೇ ಬಣ್ಣದ, ಅದೇ ರೀತಿಯ ಬಟ್ಟೆ ಖರೀದಿಸಿ ಹಾಕಿಕೊಂಡು ತಾವು ಫೋಟೋಗೆ ಫೋಸ್ ಕೊಟ್ಟು, ಹಂಚಿಕೊಂಡು ಹೊಟ್ಟೆ ಉರಿಸುವ ಪ್ರಯತ್ನ ನಡೆಸುತ್ತಿದ್ದರು ಪವಿತ್ರಾ ಗೌಡ.

ಇನ್ನು ವಿಜಯಲಕ್ಷ್ಮಿ ತಮ್ಮ ಗಂಡನ ಜತೆ ಹೋಟೆಲ್ ವೊಂದರಲ್ಲಿ ಊಟ ಮಾಡಿದ ನಂತರ ತಮ್ಮ ಮಗನ ಜತೆಗೆ ನಿಂತು ಪೋಟೋ ತೆಗೆಸಿಕೊಂಡು, ನಾವಿಬ್ಬರು ನಮಗೊಬ್ಬ ಎಂದು ಬರೆದುಕೊಂಡಿದ್ದರು. 21 ವರ್ಷದ ತಮ್ಮ ದಾಂಪತ್ಯ ಜೀವನಕ್ಕೆ 20 ವರ್ಷದ ಮಗನಿರುವುದಾಗಿ ಬರೆದುಕೊಂಡಿದ್ದರು. ಇದಾಗಿ ಮೂರೇ ದಿನಕ್ಕೆ ಪವಿತ್ರಾ ಗೌಡ ತಮ್ಮ ಮಗಳ ಜತೆ ದರ್ಶನ್ ಕರೆದೊಯ್ದು, ವಿಜಯಲಕ್ಷ್ಮಿ ಫೋಟೋ ತೆಗೆಸಿಕೊಂಡ ಜಾಗದಲ್ಲೇ ನಿಂತು ಫೋಟೋ ತೆಗೆಸಿಕೊಂಡಿದ್ದರು.

ದರ್ಶನ್ ಮತ್ತು ವಿಜಯಲಕ್ಷ್ಮಿ ದುಬೈನಲ್ಲಿ ತಮ್ಮ ವಿವಾಹ ಮಹೋತ್ಸವ ಅಚರಣೆ ಮಾಡಿಕೊಂಡರೆ, ಅದಕ್ಕೆ ಫುಲ್ ಗರಂ ಆಗಿದ್ದ ಪವಿತ್ರಾ ಗೌಡ, ನನ್ನ ಮತ್ತು ದರ್ಶನ್ ಸಂಬಂಧಕ್ಕೆ ಹತ್ತು ವರ್ಷ ಎಂದು ಬರೆದುಕೊಂಡಿದ್ದರು. ಇಂತಹ ಫೋಟೋ ಮತ್ತು ಬರವಣಿಗೆಯೇ ಅನೇಕ ಅಭಿಮಾನಿಗಳನ್ನು ಕೆರಳಿಸಿತ್ತು. ರೇಣುಕಾ ಸ್ವಾಮಿ ಕಮೆಂಟ್ ಮಾಡಿದ್ದು ಕೂಡ ಇಂತಹದ್ದೇ ಪೋಟೋ ಹಂಚಿಕೊಂಡಿದ್ದಕ್ಕೆ.

ರೇಣುಕಾ ಸ್ವಾಮಿ ಮಾಡಿದ್ದ ಕಮೆಂಟ್ ನಲ್ಲಿ ದರ್ಶನ್ ಪತ್ನಿಯ ಬಗ್ಗೆ ಇದ್ದ ಕಾಳಜಿಯೇ ಪವಿತ್ರಾ ಗೌಡಳನ್ನು ಅತಿಯಾಗಿ ರೊಚ್ಚಿಗೇಳಿಸಿತ್ತು. ಆತನನ್ನು ಮೊದಲು ಏನು ಮಾಡಲು ಸಾಧ್ಯವಾಗದಿದ್ದಕ್ಕೆ, ದರ್ಶನ್ ಜತೆ ಇಪ್ಪತ್ತು ದಿನ ಮಾತುಬಿಟ್ಟಿದ್ದರು. ಇದರ ಪರಿಣಾಮ ದರ್ಶನ್ ರೇಣುಕಾ ಸ್ವಾಮಿಯನ್ನು ಹಿಡಿದು, ಬಡಿದು ಕೊಲೆ ಮಾಡಲಾಗಿತ್ತು. ದರ್ಶನ್ ಇದೀಗ ಜೈಲುಪಾಲಾಗಿದ್ದು, ಗೆಳತಿ ಪವಿತ್ರಾ ಕೂಡ ಜೈಲು ಸೇರಿದ್ದಾರೆ.

ವಿಜಯಲಕ್ಷ್ಮಿ ಮಾತ್ರ ಪ್ರಕರಣದ ಆರಂಭದಲ್ಲಿ ಸೈಲೆಂಟ್ ಆಗಿದ್ದು, ಇದೀಗ ರೇಣುಕಾ ಸ್ವಾಮಿ ಕೊಲೆಗೆ ಮರುಕ ಪಡುತ್ತಲೇ ತಮ್ಮ ಗಂಡನನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಆರಂಭಿಸಿದ್ದಾರೆ. ಆದರೆ, ಹಠಕ್ಕೆ ಬಿದ್ದು ಹೆಂಡತಿಯಂತೆಯೇ ಬದುಕಬೇಕು ಎಂದುಕೊಂಡ ಗೆಳತಿ ಪವಿತ್ರಾ ಗೌಡ ದರ್ಶನ್ ಅವರನ್ನು ಜೈಲಿಗೆ ಸೇರಿಸಿದ್ದಲ್ಲದೇ, ತಾನು ಜೈಲು ಸೇರಿದ್ದಾಳೆ.


Share It

You cannot copy content of this page