ಉಪಯುಕ್ತ ಸುದ್ದಿ

ವಿಶ್ವ ಯೋಗ ದಿನ:ಗಮನ ಸೆಳೆದ ಜಲಯೋಗ..!

Share It

ಕಲಬುರಗಿ: ಅಂತಾರಾಷ್ಟ್ರೀಯ ಯೋಗ ದಿನ ದೇಶದಾದ್ಯಂತ ಆಚರಿಸಲಾಗುತ್ತಿದೆ. ಮಕ್ಕಳು, ಯುವಕರು, ಮಹಿಳೆಯರು ಸೇರಿದಂತೆ ವೃದ್ಧರು ಕೂಡಾ ಯೋಗ ಮಾಡುತ್ತಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿಯೂ ಎಲ್ಲೆಡೆ ಯೋಗ ವಿಶೇಷ ದಿನವನ್ನು ಆಚರಿಸಲಾಯಿತು. ಅದು ಕೂಡ ಡಿಫರೆಂಟ್ ಆಗಿ..!

ಹೌದು, ಸಾಮಾನ್ಯವಾಗಿ ನೆಲದ ಮೇಲೆಯೇ ಯೋಗಾಸನ ಮಾಡುವುದು ಬಹಳ ಕಷ್ಟ. ಆದರೆ, ಇಲ್ಲೊಬ್ಬರು ಜಲಯೋಗಾಸನ ಮಾಡಿ ಗಮನ ಸೆಳೆದಿದ್ದಾರೆ. ಉತ್ತಮ ಆರೋಗ್ಯಕ್ಕೆ ಯೋಗಾಸನ ಎಷ್ಟು ಮುಖ್ಯವೆಂಬ ಸಂದೇಶ ಸಾರುತ್ತಿರುವ ಕಲಬುರ್ಗಿ ಯೋಗಪಟುಗಳು ಗ್ರಾಮೀಣ ಭಾಗದಿಂದ ರಾಜ್ಯಾದ್ಯಂತ ಯೋಗ ಪ್ರದರ್ಶನ ಮಾಡುತ್ತಾ, ಯೋಗ ಕಲಿಸುತ್ತಿದ್ದಾರೆ. ಜಲ ಯೋಗದ ಮೂಲಕ ಗಮನ ಸೆಳೆದಿದ್ದಾರೆ.

ವಿಶ್ವ ಯೋಗ ದಿನದ ಹಿನ್ನೆಲೆ ಕಲಬುರಗಿ ಹೊರ ವಲಯದಲ್ಲಿರುವ ನಂದಿಕೂರ ಗ್ರಾಮದ ನಿವಾಸಿ ಗ್ರಾಮದ ತೋಟದ ಬಾವಿಯಲ್ಲಿ ಜಲಯೋಗ ಮಾಡುವ ಮುಖಾಂತರ ಗಮನ ಸೆಳೆದರು. ಸುಮಾರು ಎರಡು ಗಂಟೆಗಳ ಕಾಲ ನೀರಿನಲ್ಲಿ ವಿವಿಧ ಆಸನಗಳನ್ನು ಮಾಡುವ ಮೂಲಕ ಸಾಹದ ಪ್ರದರ್ಶಿಸಿದರು. ಪವನಕುಮಾ‌ರ್ ವಳಕೇರಿ ಅವರು ಕಳೆದ ಇಪ್ಪತ್ತು ವರ್ಷಗಳಿಂದ ಯೋಗಾಸನ ಅಭ್ಯಾಸ ಮಾಡುತ್ತಿದ್ದಾರೆ. ಸುತ್ತಲಿನ ಹಳ್ಳಿಗಳ ಜನರಿಗೂ ಕೂಡ ಯೋಗಭ್ಯಾಸ ಮಾಡಿಸುವ ಮೂಲಕ ಜಲ ಯೋಗದ ಬಗ್ಗೆ ಆಸಕ್ತಿ ಹೆಚ್ಚಿಸುವ ಪ್ರಯತ್ನವನ್ನು ಮಾಡಿದಲ್ಲದೆ, ತಮ್ಮ ಮಗನಿಗೂ ಕೂಡ ಜನಯೋಗ ಕಲಿಸಿಕೊಟ್ಟು ಯೋಗದ ಮಹತ್ವ ಸಾರುತ್ತಿದ್ದಾರೆ. ನೆಲದ ಮೇಲೆ ಮಾಡುವ ಯೋಗಕ್ಕಿಂತ ಇಮ್ಮಡಿ ಉತ್ಸಾಹವನ್ನು ಜಲಯೋಗ ನೀಡುತ್ತದೆ, ದೇಹವೂ ಆರೋಗ್ಯವಾಗಿರಯತ್ತದೆ ಎಂಬುವ ಸಂದೇಶ ನೀಡುತ್ತಿದ್ದಾರೆ.

ಒಟ್ಟಿನಲ್ಲಿ ಮೇಲೆ‌ ಯೋಗ ಮಾಡುವುದೆ ಕಷ್ಟ, ಅಂತದ್ರಲ್ಲಿ ಪವಮಕುಮಾರ್ ವಳಕೇರಿ ಅವರು ನೀರಿನಲ್ಲಿ ಜಲಯೋಗ ಮಾಡುವ ಮೂಲಕ ಸಹಸ ಪ್ರದರ್ಶಸುತ್ತಿರುವುದಲ್ಲದೆ. ಯೋಗದ ಮಹತ್ವವನ್ನು ಸಾರುತ್ತಿದ್ದಾರೆ.


Share It

You cannot copy content of this page