ಅಪರಾಧ ಸುದ್ದಿ

50 ವರ್ಷದವನೊಂದಿಗೆ ವಿದ್ಯಾರ್ಥಿನಿ ನಾಪತ್ತೆ, ಆತ್ಮಹತ್ಯೆ

Share It

ತುಮಕೂರು : ಮೂರು ದಿನಗಳ ಹಿಂದೆ 50 ವರ್ಷದ ವಿವಾಹಿತ ಪುರುಷನೊಂದಿಗೆ 19 ವರ್ಷದ ಕಾಲೇಜು ವಿದ್ಯಾರ್ಥಿನಿ ನಾಪತ್ತೆಯಾಗಿದ್ದು, ಶನಿವಾರ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಮಾವತ್ತೂರು ಕೆರೆಯ ಬಳಿ ಅವರು ಚಪ್ಪಲಿಗಳು ಪತ್ತೆಯಾಗಿವೆ.

ಕೆರೆಯ ಬಳಿ ಕಾರು ನಿಲ್ಲಿಸಿ ಮೊಬೈಲ್​ಗಳನ್ನು ಕಾರಿನಲ್ಲಿಟ್ಟು ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ.
ಕೋಳಾಲ ಹೋಬಳಿ ಲಕ್ಕಯ್ಯನಪಾಳ್ಯದ ಅನನ್ಯ(19) ಎಂಬ ಕಾಲೇಜು ವಿದ್ಯಾರ್ಥಿನಿ, ಬೈರಗೊಂಡ್ಲು ಗ್ರಾಮದ ರಂಗಶಾಮಣ್ಣ(50) ಎಂಬ ವಿವಾಹಿತ ಪುರುಷನೊಂದಿಗೆ ಕಳೆದ ಮೂರು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದಳು.

ವಿವಾಹಿತ ವ್ಯಕ್ತಿಯೊಂದಿಗೆ ಯುವತಿ ಪ್ರೇಮಕ್ಕೆ ಅವರ ಕುಟುಂಬದವರ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಲ್ಲಿ ಬೋಟ್ ಸಹಾಯದಿಂದ ಹುಡುಕಾಟ ನಡೆಸಿದ್ದು, ಇಬ್ಬರ ಶವಗಳು ಪತ್ತೆಯಾಗಿವೆ. ರಂಗಶಾಮಣ್ಣನ ಮೊಬೈಲ್ ಕಾರಿನಲ್ಲಿಯೇ ಇದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈಜು ಪಟುಗಳನ್ನು ಕರೆಯಿಸಿ ಕೆರೆಯಲ್ಲಿ ಇಬ್ಬರಿಗಾಗಿ ಶೋಧ ಕಾರ್ಯ ನಡೆಸಿದ್ದರು. ಸ್ಥಳದಲ್ಲಿ ಕೊರಟಗೆರೆ ಪೊಲೀಸ್ ಠಾಣೆಯ ಸಿಪಿಐ ಅನಿಲ್, ಕೊಳಾಲ ಪಿಎಸ್‌ಐ ರೇಣುಕಾ ಯಾದವ್ ಹಾಗೂ ಯೋಗೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಮುಂದಿನ ತನಿಖೆಗಾಗಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ.


Share It

You cannot copy content of this page