ಕ್ರೀಡೆ ಸುದ್ದಿ

ಸೆಮಿ ಫೈನಲ್ಸ್ ಗೆ ಲಗ್ಗೆ ಇಟ್ಟ ಇಂಗ್ಲೆಂಡ್

Share It

ಸಂತೋಷ್ ಇರಕಸಂದ್ರ

ಬಾರ್ಬುಡ: ಜಾಸ್ ಬಟ್ಲರ್ ನ ವೇಗದ ಬ್ಯಾಟಿಂಗ್ ನಿಂದಾಗಿ ಇಂಗ್ಲೆಂಡ್ ತಂಡವು 2024 ರ T20 ವಿಶ್ವಕಪ್ ನ ಸೆಮಿಫೈನಲ್ ಗೆ ಪ್ರವೇಶವನ್ನು ಪಡೆದುಕೊಂಡ ಮೊದಲ ತಂಡವಾಯಿತು.

ಕೆನ್ಸಿಂಗ್ಟನ್ ಓವಲ್ ಬಾರ್ಬಡೋಸ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಎರಡನೇ ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಯುಎಸ್ಎ ವಿರುದ್ಧ 9.4 ಓವರ್ ಗಳಲ್ಲಿ 115 ರನ್ ಗಳ ಗುರಿಯನ್ನು ಬೆನ್ನತ್ತಿ ಗೆಲುವು ದಾಖಲಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಯುಎಸ್ಎ ಯ ಆರಂಭಿಕ ಆಟಗಾರರಾದ ಸ್ಟೀವನ್ ಟೈಲರ್ 13 ಎಸೆತಗಳಲ್ಲಿ 12 ರನ್ ಗಳಿಸಿದರೆ, ಆಂಡ್ರೀಸ್ ಗೌಸ್ 5 ರನ್ ಗಳಿಸಿ ಔಟಾದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ನಿತೀಶ್ ಕುಮಾರ್ 24 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ನೊಂದಿಗೆ 30 ಗಳಿಸಿದರು. ಆಂಡರ್ಸನ್ 28 ಎಸೆತದಲ್ಲಿ 29 ರನ್ ಗಳಿಸಿದರು. ಆರನ್ ಜೋನ್ಸ್,ಮಿಲಿಂದ್ ಕುಮಾರ್, ಹರ್ಮೀತ್ ಸಿಂಗ್ ರ ಅಲ್ಪ ಮೊತ್ತದಿಂದ ಯುಎಸ್ಎ ಯು 20 ಓವರ್ ಗಳಲ್ಲಿ 115 ರನ್ ಗಳಿಗೆ ಆಲ್ ಔಟ್ ಆಯಿತು.

ಇಂಗ್ಲೆಂಡ್ ತಂಡದ ವೇಗಿ ಕ್ರಿಸ್ ಜೋರ್ಡಾನ್ 10 ರನ್ ಗಳನ್ನು ನೀಡಿ 4 ವಿಕೆಟ್ ಗಳನ್ನು ಪಡೆದು ಮಿಂಚಿದರು. ಸ್ಯಾಮ್ ಕರನ್ ಹಾಗೂ ಅದಿಲ್ ರಶೀದ್ ತಲಾ ಎರೆಡೆರಡು ವಿಕೆಟ್ ಪಡೆದರು. ಲಿವಿಂಗ್ ಸ್ಟೋನ್, ಟಾಪ್ಲಿ ಒಂದೊಂದು ವಿಕೆಟ್ ಪಡೆಯುವ ಮೂಲಕ ಯುಎಸ್ಎ ಯನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದರು.

ಸಾಧಾರಣ ಮೊತ್ತದ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡಿನ ಆರಂಭಿಕ ದಾಂಡಿಗರು ಅಬ್ಬರದ ಬ್ಯಾಟಿಂಗ್ ಮಾಡಿದರು. ಜಾಸ್ ಬಟ್ಲರ್ 38 ಎಸೆತಗಳಲ್ಲಿ 6 ಬೌಡರಿ 7 ಸಿಕ್ಸರ್ ಗಳೊಂದಿಗೆ ಅಜೇಯ 83 ರನ್ ಕಲೆಹಾಕಿದರು.

ಸಾಲ್ಟ್ 21 ಎಸೆತದಲ್ಲಿ 2 ಬೌಂಡರಿ ಯೊಂದಿಗೆ 25 ರನ್ ಗಳಿಸಿದರು. ಇವರಿಬ್ಬರ ಜೊತೆಯಾಟದಿಂದ ಇಂಗ್ಲೆಂಡ್ ತಂಡವು ಭರ್ಜರಿ ಜಯ ಗಳಿಸುವ ಮೂಲಕ ಸೆಮಿ ಫೈನಲ್ಸ್ ಗೆ ಲಗ್ಗೆ ಇಟ್ಟಿದೆ.


Share It

You cannot copy content of this page