ಅಪರಾಧ ಸುದ್ದಿ

ಸಾಂತ್ವನ ಕೇಂದ್ರದಲ್ಲಿದ್ದ ಮಹಿಳೆ ಆತ್ಮಹತ್ಯೆ

Share It

ರಾಯಚೂರು:ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದ ಮಹಿಳೆಯೊಬ್ಬರು ಕೇಂದ್ರದ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ರಾಯಚೂರು ತಾಲೂಕಿನ ಯರಗೇರಾ ಗ್ರಾಮದ ವಿನಯ್ ರೆಡ್ಡಿ ಎಂಬಾತನನ್ನು ಪ್ರೀತಿಸುತ್ತಿದ್ದ ಮಹಿಳೆ ಅನುರಾಧ ಆತನೊಂದಿಗೆ ಮನೆಬಿಟ್ಟು ಹೋಗಿದ್ದರು. ಸ್ವ ದಿನಗಳ ನಂತರ ಪೋಲಿಸರ ಕೈಗೆ ಸಿಕ್ಕು, ವಾಸ್ ಕುಟುಂಬದವರ ಜತೆಗೆ ಹೋಗಲು ನಿರಾಕರಿಸಿದ್ದರು.

ಆಗ ಪೊಲೀಸರು ಆಕೆಯನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿಟ್ಟಿದ್ದರು. ಒಮ್ಮೆ ಆ ಕೇಂದ್ರಕ್ಕೆ ಭೇಟಿ ನೀಡಿದ್ದ, ಪ್ರಿಯಕರ ವಿನಯ್ ರೆಡ್ಡಿ ಮತ್ತು ನುರಾಧ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಆಕೆ ಆತನ ಜತೆ ಕರೆದುಕೊಂಡು ಹೋಗುವಂತೆ ಕೇಳಿಕೊಂಡಿದ್ದಳು. ಆದರೆ, ಆತ ಆಕೆಯನ್ನು ಕರೆದೊಯ್ಯಲು ನಿರಾಕರಿಸಿದ್ದ ಎನ್ನಲಾಗಿದೆ.

ಪ್ರಿಯಕರನ ವರ್ತನೆಯಿಂದ ಬೇಸತ್ತ ಮಹಿಳೆ ಅನುರಾಧ, ಇತ್ತ ಕುಟುಂಬದಿAದಲೂ ದೂರಾಗಿ, ಇತ್ತ ಪ್ರಿಯಕರನ ಆಸರೆಯೂ ಇಲ್ಲದೆ ಬೇಸತ್ತಿದ್ದಳು ಎನ್ನಲಾಗಿದೆ. ಹೀಗಾಗಿ, ಆಕೆ ಸಾಂತ್ವನ ಕೇಂದ್ರದ ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಈ ದೃಶ್ಯ ಸಾಂತ್ವನ ಕೇಂದ್ರದ ಸಿಸಿಟಿಯಲ್ಲಿ ಸೆರೆಯಾಗಿದೆ.

ಪೊಲೀಸರು ಪ್ರಿಯಕರ ವಿನಯ್ ರೆಡ್ಡಿ ಎಂಬಾತನನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಮಹಿಳೆಯ ಸಾವಿಗೆ ಆಕೆಯನ್ನು ನಂಬಿಸಿ ಕರೆದೊಯ್ದಿದ್ದ ಪ್ರಿಯಕರನೇ ಕಾರಣ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.


Share It

You cannot copy content of this page