ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ, ವರಮಹಾಲಕ್ಷ್ಮಿ ಹಬ್ಬ ಮತ್ತು ವೀಕೆಂಡ್ ರಜೆಯ ಹಿನ್ನೆಲೆಯಲ್ಲಿ ರಾಜಧಾನಿಯ ಜನರು ಊರುಗಳ ಕಡೆಗೆ ಹೊರಟಿದ್ದು ಮೆಜೆಸ್ಟಿಕ್ ಸುತ್ತ ಟ್ರಾಫಿಕ್ ಜಾಮ್ ಉಂಟಾಗಿದೆ.
ಗುರುವಾರ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಗೆ ಸರಕಾರಿ ರಜೆ ಇರುತ್ತದೆ. ಅದೇ ರೀತಿ ಆಗಸ್ಟ್ 16 ರಂದು ವರಮಹಾಲಕ್ಷ್ಮೀ ಪೂಜೆಯಿದ್ದು, ಅಂದು ಕೂಡ ಸರಕಾರಿ ರಜಾದಿನ. ಇನ್ನು ಶನಿವಾರ ಮತ್ತು ಭಾನುವಾರವೂ ರಜೆಯಿದ್ದು, ಲಾಂಗ್ ವೀಕೆಂಡ್ ಕಳೆಯಲು ರಾಜಧಾನಿಯ ಜನ ಊರುಗಳ ಕಡೆಗೆ ಹೊರಟಿದ್ದಾರೆ.
ವಾಹನ ದಟ್ಟಣೆ ಮತ್ತು ಬಸ್ ಗಳ ಓಡಾಟದಿಂದಾಗಿ ಮೆಜೆಸ್ಟಿಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾತ್ರಿ 12 ಗಂಟೆಯಾದರೂ ಟ್ರಾಫಿಕ್ ಜಾಮ್ ಹೆಚ್ಚಾಗಿದೆ. ಖಾಸಗಿ ವಾಹನಗಳಲ್ಲಿ ತೆರಳುವವರ ಸಂಖ್ಯೆ ಅಧಿಕವಾಗಿದ್ದು, ಯಶವಂತಪುರ, ಶೇಷಾದ್ರಿಪುರ, ಗೊರಗುಂಟೆ ಪಾಳ್ಯ, ಜಾಲಹಳ್ಳಿ ಕ್ರಾಸ್, ಕೆಂಗೇರಿ, ನಾಯಂಡನಹಳ್ಳಿ, ಹೆಬ್ಬಾಳ, ಯಲಹಂಕ ಪ್ರದೇಶದಲ್ಲಿ ಭಾರಿ ಟ್ರಾಫಿಕ್ ಜಾಮ್ ಆಗಿದೆ.
300 ಹೆಚ್ಚುವರಿ ಬಸ್ ಓಡಿಸಿದ ಸಾರಿಗೆ ಇಲಾಖೆ : ಬಸ್ ಗಳಿಗೆ ಜನ ಹೆಚ್ಚಾದ ಹಿನ್ನೆಲೆಯಲ್ಲಿ ಸಾರಿಗೆ ನಿಗಮ 300 ಹೆಚ್ಚುವರಿ ಬಸ್ ಗಳನ್ನು ಓಡಿಸುತ್ತಿದೆ. ಜನ ಹೆಚ್ಚಾಗುತ್ತಿದ್ದಂತೆ ಖಾಸಗಿ ಬಸ್ ಗಳು ಹೆಚ್ಚುವರಿ ಟಿಕೆಟ್ ದರ ವಿಧಿಸಲು ಮುಂದಾಗಿದ್ದವು. ಹೀಗಾಗಿ, KSRTC 300 ಬಸ್ ಗಳನ್ನು ಹೆಚ್ಚುವರಿಯಾಗಿ ಬಿಟ್ಟಿದೆ.
Updating…

